ಗಂಡು ಮಕ್ಕಳಿಗೆ ತಾನು ಮದುವೆಯಾಗುವ ಹುಡುಗಿ ಹಾಗಿರಬೇಕು, ಹೇಗಿರಬೇಕು ಎನ್ನುವ ಆಸೆ ಇರುತ್ತೆ ಅದೇ ರೀತಿ ಹೆಣ್ಣು ಮಕ್ಕಳಿಗೆ ಕೂಡ ತನ್ನ ಸಂಸಾರ ಹೀಗಿರಬೇಕು ಮದುವೆಯಾದ ನಂತರ ಜೀವನ ಹೀಗೆ ಇರಬೇಕು ಎನ್ನುವಂತಹ ಕನಸು ಇರುತ್ತೆ. ಕೆಲವರ ಅದೃಷ್ಟ ಚೆನ್ನಾಗಿದ್ದು ಅವರು ಅಂದುಕೊಂಡಂತೆ ಜೀವನ ನಡೆಸುತ್ತಾರೆ. ಆದರೆ ಇನ್ನೂ ಕೆಲವರು ಮದುವೆಯೇ ಜೀವನದ ಒಂದು ದೊಡ್ಡ ತಪ್ಪು ಎನ್ನುವಂತಹ ಪರಿಸ್ಥಿತಿಯನ್ನು ಅನುಭವಿಸುತ್ತಾರೆ.
ಮದುವೆಯಾದ ನಂತರ ಗಂಡನ ಜೊತೆ ಚೆನ್ನಾಗಿ ಸಂಸಾರ ಮಾಡಬೇಕು ತನ್ನ ಮೊದಲ ರಾತ್ರಿ ಹೀಗೆ ಇರಬೇಕು ಎಂದೆಲ್ಲ ಕನಸು ಕಂಡಿದ್ದ ಒಬ್ಬ ಹುಡುಗಿಯ ಕಥೆ ಇದು. ಆಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಮೊದಲ ರಾತ್ರಿಯ ಅನುಭವವನ್ನು ಹಂಚಿಕೊಂಡಿದ್ದಾಳೆ. ಅದು ಆಕೆಯ ಅರೇಂಜ್ಡ್ ಮ್ಯಾರೇಜ್. ಮದುವೆಯ ಮೊದಲು ಗಂಡನಾಗುವವನ ಬಗ್ಗೆ ಏನು ಗೊತ್ತಿರಲಿಲ್ಲ ಮದುವೆಯಾದ ನಂತರ ಮೊದಲ ರಾತ್ರಿ ನಡೆಯಬೇಕಿತ್ತು.
ಗಂಡ ಹೆಂಡತಿ ಇಬ್ಬರೂ ರೂಮಿನ ಒಳಗೆ ಹೋಗುತ್ತಾರೆ. ಆಗ ಆತ ಹೆಂಡತಿಯನ್ನು ಹತ್ತಿರ ಕರೆಯುತ್ತಾನೆ ಆಕೆಯು ನಾಚುತ್ತಲೆ ಆತನ ಬಳಿಗೆ ಹೋಗುತ್ತಾಳೆ. ನಂತರ ನಡೆದಿದ್ದೇ ಬೇರೆ. ಆತ ನಾನು ನಿನ್ನ ಬಳಿ ಮಾತನಾಡಬೇಕು ಎಂದು ಮೊಬೈಲ್ ತೆಗೆದು ಒಂದು ಹುಡುಗಿಯ ಫೋಟೋ ತೋರಿಸುತ್ತಾನೆ ನಾನು ಇಷ್ಟೊತ್ತಿಗೆ ಈಕೆಯ ಜೊತೆ ಸಂಸಾರ ನಡೆಸಬೇಕಿತ್ತು ಎಂದು ಹೇಳುತ್ತಾನೆ.
ಮೊದಲ ರಾತ್ರಿ ನಿನಗಿಂತ ಮೊದಲು ಆಕೆಯ ಜೊತೆ ಆಗಬೇಕಿತ್ತು ನಿನ್ನನ್ನು ಅವಳೇ ಎಂದು ಭಾವಿಸಿ ಸಂಸಾರ ನಡೆಸುತ್ತೇನೆ ಎಂದು ಹೇಳುತ್ತಾನೆ. ಇದು ನಿಜಕ್ಕೂ ಆಕೆಗೆ ಶಾಕಿಂಗ್ ಆಗಿತ್ತು. ಮೊದಲ ರಾತ್ರಿ ಗಂಡ ಹೆಂಡತಿ ಒಬ್ಬರನ್ನ ಒಬ್ಬರು ಕೂಡುವುದು ಬಿಟ್ಟು ಜಗಳವಾಡುತ್ತಾರೆ ರೂಂನಲ್ಲಿ ಆಗುತ್ತಿದ್ದ ಗಲಾಟೆ ಕೇಳಿ ಆಕೆಯ ಸೋದರ ಮಾವ ರೂಂ ಗೆ ಬಂದು ಜಗಳವನ್ನು ತಪ್ಪಿಸುತ್ತಾನೆ.
ನಂತರ ಇವರಿಬ್ಬರ ನಡುವೆ ಇದೇ ಕಾರಣಕ್ಕೆ ಸಾಕಷ್ಟು ಬಾರಿ ಜಗಳ ಆಗುತ್ತೆ ಒಮ್ಮೆ ಗಂಡನನ್ನು ಬಿಟ್ಟು ತವರು ಮನೆಗೆ ಹೋಗಿಬಿಡುತ್ತಾಳೆ. ಆಕೆಯ ಗಂಡನ ತಮ್ಮನ ಅನಿರೀಕ್ಷಿತ ಸಾವಿನಿಂದ ಆಕೆ ಹಿಂದಿರುಗಿ ಮನೆಗೆ ಬರುತ್ತಾಳೆ. ಆ ಸಾವಿನ ನೋವಿನಲ್ಲೂ ಇವರಿಬ್ಬರು ಹಳೆಯ ವಿಷಯಕ್ಕೆ ಕಿತ್ತಾಡುತ್ತಾರೆ.
ಕೊನೆಗೆ ಆಕೆಯ ಪತಿ ಕುಡಿದುಕೊಂಡು ಮನೆಗೆ ಬಂದು ರಂಪಾಟ ಮಾಡುವುದಕ್ಕೆ ಶುರು ಮಾಡುತ್ತಾನೆ ಒಮ್ಮೆ ಆಕೆ ಪೊಲೀಸರನ್ನು ಕರೆಸಿ ಗಂದನಿಗೆ ಬುದ್ಧಿ ಹೇಳಿಸುತ್ತಾಳೆ. ಆದರೆ ಆತನ ಹುಚ್ಚಾಟ ಮಾತ್ರ ಮುಂದುವರೆಯುತ್ತೆ. ಕೊನೆಗೆ ಮತ್ತೆ ತವರು ಮನೆಗೆ ಹಿಂತಿರುಗಿದ ಆಕೆ ಗಂಡನ ಮೇಲೆ ಕೇ-ಸ್ ಫೈಲ್ ಮಾಡುತ್ತಾಳೆ. ಒಟ್ಟಿನಲ್ಲಿ ಮನೆಯವರು ಒಪ್ಪಿ ಮದುವೆ ಮಾಡಿ ಕೊಟ್ಟಿದ್ದ ಹುಡುಗನ ಜೊತೆ ಆಕೆಗೆ ಒಂದು ದಿನವು ಸರಿಯಾಗಿ ಸಂಸಾರ ಮಾಡುವುದಕ್ಕೆ ಆಗುವುದಿಲ್ಲ.
ಹುಡುಗನನ್ನು ನೋಡಿ ಒಪ್ಪಿ ಮದುವೆ ಮಾಡಿ ಕೊಡುವುದಕ್ಕೂ ಮೊದಲು ಗಂಡ ಹೆಂಡತಿ ಆಗಬೇಕಾಗಿದ್ದವರ ನಡುವೆ ಹೊಂದಾಣಿಕೆ ಆಗುತ್ತಾ ಎಂಬುದನ್ನು ತಿಳಿದುಕೊಳ್ಳಿ ಹುಡುಗನ ಲೈಫ್ ನಲ್ಲಿ ಮತ್ತೊಂದು ಹುಡುಗಿ ಇದ್ದಾಳಾ ಎಂಬುದನ್ನು ಸರಿಯಾಗಿ ಪರಿಶೀಲಿಸಿ ನಂತರ ನಿಮ್ಮ ಮನೆಯ ಮಗಳನ ಮದುವೆ ಮಾಡಿಕೊಡಿ. ಇಲ್ಲವಾದರೆ ಆಕೆಯ ನೋವು ಖಂಡಿತ ನಿಮ್ಮನ್ನು ಭಾದಿಸಬಹುದು.