Picsart 23 03 14 09 58 15 632

ಸೊಂಟಕ್ಕೆ ಕಪ್ಪು ದಾರ ಕಟ್ಟುವುದರಿಂದ ಜೀವನದಲ್ಲಿ ನಿಮಗೆ ಅದೆಷ್ಟು ಒಳ್ಳೆಯದಾಗಲಿ ಗೊತ್ತಾ? ಹೆಣ್ಣು, ಗಂಡು ಯಾರೇ ಆಗಲಿ ಕಪ್ಪು ದಾರದ ಮಹತ್ವ ತಿಳಿಯಿರಿ!!

ಸುದ್ದಿ

ಸ್ನೇಹಿತರೆ, ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಆಚರಣೆಗಳಿವೆ. ಸಂಪ್ರದಾಯಗಳಿವೆ. ಪ್ರತಿಯೊಂದು ಆಚರಣೆ ಸಂಪ್ರದಾಯಗಳ ಹಿಂದೆ ಕೇವಲ ಶಾಸ್ತ್ರ ಮಾತ್ರವಲ್ಲ ವೈಜ್ಞಾನಿಕ ಕಾರಣಗಳು ಕೂಡ ಇವೆ. ಉದಾಹರಣೆಗೆ ಹೆಣ್ಣು ಮಕ್ಕಳು ಮೂಗುತಿ, ಕೈ ಬಳೆ, ಕಾಲುಂಗುರ, ಹಣೆಗೆ ಬೊಟ್ಟು ಇವೆಲ್ಲವನ್ನು ಧರಿಸುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವ ಎನಿಸಿಕೊಂಡಿದೆ ಆದರೆ ಇದು ಕೇವಲ ಸಂಪ್ರದಾಯ ಮಾತ್ರವಲ್ಲ ಒಂದು ಹೆಣ್ಣಿಗೆ ಭೂಷಣವಾದ ಇವೆಲ್ಲ ವಸ್ತುಗಳು ಆಕೆಯ ಆರೋಗ್ಯ ಕಾಪಾಡುವಲ್ಲಿಯೂ ಕೂಡ ಬಹುಮುಖ್ಯ ಪಾತ್ರ ವಹಿಸುತ್ತವೆ.

ಇನ್ನು ಶಾಸ್ತ್ರಗಳ ಪ್ರಕಾರ ಪುರುಷ ಅಥವಾ ಮಹಿಳೆ ಸೊಂಟಕ್ಕೆ ಉಡಿದಾರ ಅಥವಾ ಸರಪಳಿ ಕಟ್ಟಿಕೊಳ್ಳುವುದು ಒಂದು ಪದ್ಧತಿ. ಸಾಮಾನ್ಯವಾಗಿ ನೀವು ನೋಡಿರಬಹುದು, ಹಿಂದೂಗಳಲ್ಲಿ ಪುಟ್ಟ ಮಕ್ಕಳಿಗೆ ಸೊಂಟಕ್ಕೆ ಸರಪಳಿ ಅಥವಾ ಉಡಿದಾರ ಕಟ್ಟಿ ಇರುತ್ತಾರೆ. ಅದು ಬೆಳ್ಳಿಯದ್ದಾಗಿರಬಹುದು, ಚಿನ್ನದ್ದಾಗಿರಬಹುದು, ತಾಮ್ರದ್ದಾಗಿರಬಹುದು ಅಥವಾ ಕಪ್ಪು ದಾರವಾಗಿರಬಹುದು.

ಒಟ್ಟಿನಲ್ಲಿ ಚಿಕ್ಕ ಮಕ್ಕಳ ಸೊಂಟದಲ್ಲಿ ಒಂದು ಉಡಿದಾರ ಇರುತ್ತೆ. ಉಳಿದವರು ಕಟ್ಟಿಕೊಳ್ಳುವುದು ಒಂದು ಸಂಪ್ರದಾಯ ಆದರೆ ಇದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳು ಕೂಡ ಇವೆ. ಉಡಿದಾರ ಕಟ್ಟಿಕೊಳ್ಳುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ರೀತಿಯಲ್ಲಿ ಬೆಳವಣಿಗೆ ಆಗುತ್ತದೆ ಎನ್ನುವುದು ಈಗಾಗಲೇ ಸಂಶೋಧನೆಯಿಂದ ತಿಳಿದು ಬಂದಿದೆ.

ಹೌದು, ಸೊಂಟಕ್ಕೆ ಬೆಳ್ಳಿಯ ಹೂಡಿದಾರ ಕಟ್ಟಿಕೊಂಡರೆ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುವಂತೆ ಇದು ಸಹಾಯ ಮಾಡುತ್ತದೆ. ಅದರಲ್ಲೂ ಪುಟ್ಟ ಮಕ್ಕಳಿಗೆ ಬೆಳ್ಳಿ ಹುಡುಗರ ಕಟ್ಟಿದರೆ ನರಗಳು ಬಿಗಿಯಾಗಿ ಸೊಂಟಗಟ್ಟಿಯಾಗುತ್ತದೆ ಜೊತೆಗೆ ರಕ್ತ ಪರಿಚಲನೆ ಕೂಡ ಸುಲಭವಾಗುತ್ತದೆ. ಇನ್ನು ಪುಟ್ಟ ಮಕ್ಕಳಿಗೆ ಕಪ್ಪು ದಾರವನ್ನು ಉಡಿದಾರವಾಗಿ ಕಟ್ಟುತ್ತಾರೆ. ಮಕ್ಕಳಿಗೆ ದೃಷ್ಟಿ ಆಗಬಾರದು ಎನ್ನುವ ಉದ್ದೇಶವೂ ಕೂಡ ಇದರ ಹಿಂದಿದೆ.

ಇನ್ನು ಸಾಮಾನ್ಯವಾಗಿ ಹಿಂದುಗಳಲ್ಲಿ ಗಂಡಸರು ಉಡಿದಾರ ಕಟ್ಟಿಕೊಳ್ಳುವುದು ಬಹಳ ಕಾಮನ್. ಬಹುತೇಕ ಎಲ್ಲರೂ ಈ ಸಂಪ್ರದಾಯವನ್ನು ಫಾಲೋ ಮಾಡುತ್ತಾರೆ. ಗಂಡು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಉಡಿದಾರ ಕಟ್ಟಿದರೆ ಅವರಿಗೆ ಪುರುಷಾಂಗಗಳ ಸರಿಯಾದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಜೊತೆಗೆ ಸಂಚಲನ ಸರಿಯಾದ ರೀತಿಯಲ್ಲಿ ಆಗುತ್ತದೆ.

ಇನ್ನು ಗಂಡಸರು ಕೂಡ ಉಳಿದರ ಧರಿಸುವುದರಿಂದ ಹರ್ಣಿ ಸಮಸ್ಯೆ ಅಥವಾ ಮೂತ್ರಾಂಗಗಳಿಗೆ ಅಂಡಾಶಯಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯು ಕಾಡುವುದಿಲ್ಲ. ಇನ್ನು ಹೆಣ್ಣು ಮಕ್ಕಳು ಕೂಡ ಉಡಿದಾರವನ್ನ ಧರಿಸುತ್ತಾರೆ. ಹೆಣ್ಣು ಮಕ್ಕಳು ಹೆಚ್ಚಾಗಿ ತಾಮ್ರದ ಉಡಿದಾರವನ್ನ ಧರಿಸಿದರೆ ಅವರಲ್ಲಿ ಋತುಚಕ್ರ ಸರಿಯಾದ ಸಮಯಕ್ಕೆ ಸರಿಯಾಗಿ ಆಗುತ್ತದೆ ಇದರಿಂದ ಯಾವುದೇ ಅನಾರೋಗ್ಯದ ಸಮಸ್ಯೆಯೂ ಕೂಡ ಕಾಡುವುದಿಲ್ಲ.

ಜೊತೆಗೆ ಸೊಂಟದ ನರಗಳೆಲ್ಲಾ ಬಿಗಿಯಾಗಿ ರಕ್ತ ಪರಿಚಲನೆ ಕೂಡ ಸರಿಯಾಗಿ ಆಗುತ್ತದೆ. ಬೆಳೆಯುವ ವಯಸ್ಸಿನಲ್ಲಿ ಚಿಕ್ಕ ಮಕ್ಕಳಿಗೆ ಉಡಿದಾರ ಕಟ್ಟಿದರೆ ಅವರ ಮೂಳೆಗಳು ಸ್ನಾಯುಗಳು ಕೂಡ ಸಮೃದ್ಧವಾಗಿ ಸರಿಯಾದ ರೀತಿಯಲ್ಲಿ ಬೆಳೆಯುತ್ತದೆ. ಎಲ್ಲಾ ಸಂಪ್ರದಾಯಗಳ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇರುತ್ತೆ ಎನ್ನುವುದಕ್ಕೆ ಇದು ಒಂದು ಸಾಕ್ಷಿ.

Leave a Reply

Your email address will not be published. Required fields are marked *