ಹೆಣ್ಣು ಮಕ್ಕಳು ಸೌಂದರ್ಯ ಪ್ರಿಯರು, ಫ್ಯಾಷನ್ ಪ್ರಿಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ತಮ್ಮ ಉಡುಗೆ ತೊಡುಗೆ ಮೇಕಪ್ ಇವುಗಳ ಬಗ್ಗೆ ಹೆಣ್ಣು ಮಕ್ಕಳಿಗೆ ಜಾಸ್ತಿನೇ ಒಲವು ಇರುತ್ತೆ. ಬೇರೆಯವರು ಯಾರಾದರೂ ನಮಗಿಂತ ಚೆನ್ನಾಗಿ ರೆಡಿಯಾಗಿ ಬಂದ್ರೆ ಅದನ್ನು ನೋಡಿ ಅಸೂಯೆ ಪಡುವ ಹೆಣ್ಣು ಮಕ್ಕಳು ಇದ್ದಾರೆ, ಜೊತೆಗೆ ಅವರನ್ನು ಅನುಕರಣೆ ಮಾಡುವವರು ಇದ್ದಾರೆ. ಸೆಲೆಬ್ರಿಟಿಗಳು ಯಾವುದಾದರೂ ಹೊಸ ಬಗೆಯ ಡ್ರೆಸ್ ಧರಿಸಿದರೆ ಅದೆಷ್ಟೋ ಜನ ಯುವತಿಯರು ತಾವು ಕೂಡ ಅಂತಹ ಬಟ್ಟೆ ಧರಿಸಬೇಕು ಅಂತ ಅವುಗಳನ್ನು ಕೊಂಡುಕೊಳ್ಳುತ್ತಾರೆ.
ಹೌದು ಇತ್ತೀಚೆಗೆ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಆನ್ಲೈನ್ ನಲ್ಲಿ ಸಿಗದೇ ಇರುವಂತಹ ಬಟ್ಟೆಗಳೆ ಇಲ್ಲ ಹಾಗಾಗಿ ವಿವಿಧ ರೀತಿಯ ಬಟ್ಟೆಗಳನ್ನು ಹುಡುಗಿಯರು ಪರ್ಚೇಸ್ ಮಾಡುತ್ತಾರೆ. ಬಟ್ಟೆ ವಿಚಾರಕ್ಕೆ ಬಂದ್ರೆ ಹುಡುಗಿಯರು ಹುಡುಗರಿಗಿಂತ ಲಕ್ಕಿ ಅಂತಾನೆ ಹೇಳಬಹುದು. ಯಾಕಂದ್ರೆ ಹುಡುಗರಿಗಿಂತ ಸಾಕಷ್ಟು ವೆರೈಟಿ ಉಡುಗೆಗಳು ಹುಡುಗಿಯರಿಗೆ ಲಭ್ಯ.
ಇನ್ನು ಇತ್ತೀಚಿಗೆ ಹುಡುಗರ ಹಾಗೂ ಹುಡುಗಿಯರ ಬಟ್ಟೆಯಲ್ಲಿ ಹೆಚ್ಚು ವ್ಯತ್ಯಾಸಗಳು ಇರುವುದಿಲ್ಲ. ಹುಡುಗರಂತೆ ಹುಡುಗಿಯರು ಕೂಡ ಶಾರ್ಟ್ಸ್ ಹಾಕುವುದು ಪ್ಯಾಂಟ್ ಧರಿಸುವುದು ಟೀ ಶರ್ಟ್ ಗಳನ್ನ ಧರಿಸುವುದು ಹೆಚ್ಚಾಗಿದೆ. ಅದರಲ್ಲೂ ಕೆಲವು ಉಡುಪಿಗಳಲ್ಲಂತೂ ಹುಡುಗರು ಹುಡುಗಿಯರು ಎನ್ನುವ ಭೇದವೇ ಇರುವುದಿಲ್ಲ.
ಇನ್ನು ಈ ಬಟ್ಟೆಯ ವಿಚಾರಕ್ಕೆ ಬಂದ್ರೆ ಒಂದು ಇಂಟರೆಸ್ಟಿಂಗ್ ಮಾಹಿತಿಯನ್ನ ನಾವು ನಿಮಗೆ ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ ಅದೇನು ಗೊತ್ತಾ ಹೆಣ್ಣು ಮಕ್ಕಳ ಶರ್ಟ್ ಗಳಲ್ಲಿ ಜೇಬು ಇರೋದಿಲ್ಲ. ಈ ಪ್ರಶ್ನೆ ನಿಮ್ಮನ್ನು ಕೂಡ ಕಾಡಿರಬಹುದು. ಹೌದು ಹುಡುಗರ ಎಲ್ಲಾ ಶರ್ಟ್ ಗಳಲ್ಲಿ ಸಾಮಾನ್ಯವಾಗಿ ಜೇಬು ಕಾಮನ್ ಆದರೆ ಹುಡುಗಿಯರ ಶರ್ಟ್ ನಲ್ಲಿ ಜೇಬುಗಳು ಇರುವುದಿಲ್ಲ ಇದ್ದರೂ ಅವು ಸ್ಟೈಲ್ ಗಾಗಿ ಚಿಕ್ಕದಾಗಿ ಇರುತ್ತೆ ಅಷ್ಟೇ.
ಇದಕ್ಕೆ ಕಾರಣ ಏನು ಇರಬಹುದು ಅಂತ ನೀವು ಯೋಚಿಸಿರಬಹುದು. ಹುಡುಗರ ಶರ್ಟ್ ಗಳಲ್ಲಿ ಜೇಬು ಇರಲೇಬೇಕು. ಯಾಕಂದ್ರೆ ಹುಡುಗರು ಜೇಬಿನಲ್ಲಿ ದುಡ್ಡು, ಪೆನ್ ಏನನ್ನಾದರೂ ಬರೆದುಕೊಳ್ಳುವಂತಹ ಸಣ್ಣ ಪೇಪರ್, ಚಿಕ್ಕ ಕ್ಯಾಲೆಂಡರ್ ಇಂತಹ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಹುಡುಗಿಯರಿಗೆ ಇಷ್ಟೇ ವಸ್ತುಗಳು ಸಾಕಾಗೋದಿಲ್ಲ ಅವರು ಎಲ್ಲಿಗಾದರೂ ಹೋಗಬೇಕಾದರೆ ಇನ್ನೂ ಸಾಕಷ್ಟು ವಿಷಯಗಳನ್ನು ಕ್ಯಾರಿ ಮಾಡಬೇಕು.
ಹಾಗಾಗಿ ಹುಡುಗಿಯರು ಹ್ಯಾಂಡ್ ಬ್ಯಾಗ್ ಅನ್ನು ಬಳಸುತ್ತಾರೆ. ತಮ್ಮ ಹ್ಯಾಂಡ್ ಬ್ಯಾಗ್ ನಲ್ಲಿ ಎಲ್ಲಾ ವಸ್ತುಗಳನ್ನು ಹುಡುಗಿಯರು ಹಾಕಿಕೊಳ್ಳುವುದರಿಂದ ಅವರ ಶರ್ಟ್ ನಲ್ಲಿ ಜೇಬು ಇದ್ದರೆ ಅದು ವೇಸ್ಟ್ ಆಗುತ್ತದೆ. ಇನ್ನು ಹುಡುಗಿಯರಿಗೆ ಶರ್ಟ್ ನಲ್ಲಿ ಜೇಬು ಇದ್ದರೆ ಅದು ಚೆನ್ನಾಗಿಯೂ ಕಾಣುವುದಿಲ್ಲ ಕೆಲವು ಡಿಸೈನರ್ ಗಳು ಈ ರೀತಿ ಶರ್ಟ್ ಡಿಸೈನ್ ಮಾಡಿ ಸೋತಿದ್ದು ಇದೆ. ಇನ್ನು ಹುಡುಗಿಯರ ಶರ್ಟ್ಗ್ ಗಳಲ್ಲಿ ಜೇಬು ಇದ್ದರೆ ಅದರಲ್ಲಿ ಕೈ ಹಾಕಿ ಇತರರ ಮುಂದೆ ವಸ್ತುಗಳನ್ನ ತೆಗೆಯುವುದು ಅಷ್ಟು ಸಮಂಜಸ ಎನಿಸುವುದಿಲ್ಲ ಹಾಗಾಗಿ ಹೆಣ್ಣು ಮಕ್ಕಳ ಶರ್ಟ್ ನಲ್ಲಿ ಜೇಬು ಇಡುವ ಅಗತ್ಯವೇ ಬರುವುದಿಲ್ಲ.