Girls search more on this one topic on mobile ಹೆಣ್ಣು ಮಕ್ಕಳು ಮೊಬೈಲ್ ನಲ್ಲಿ ಈ ಒಂದು ವಿಷಯವನ್ನು ಹೆಚ್ಚಾಗಿ ಹುಡುಕುತ್ತಾರಂತೆ ಯಾವ ವಿಷಯ ಗೊತ್ತಾ? ಇದು ಇಂಟರ್ನೆಟ್ ಜಮಾನ ಎಂದೇ ಹೇಳಬಹುದು. ಎಲ್ಲರ ಕೈಯಲ್ಲೂ ಒಂದು ಸ್ಮಾರ್ಟ್ ಫೋನ್ ಅದಕ್ಕೆ ಇಂಟರ್ನೆಟ್ ಕನೆಕ್ಷನ್ ಹಾಗೂ ಸೋಶಿಯಲ್ ಮೀಡಿಯಾ ಇಷ್ಟು ಇದ್ರೆ ಸಾಕು ಹಸಿವು ಆಗುವುದಿಲ್ಲ ನಿದ್ದೆಯೂ ಬರುವುದಿಲ್ಲ ದಿನದ 24 ಗಂಟೆಗಳು ಬೇಕಾದರೂ ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳುವ ಜನರು ಇದ್ದಾರೆ.
ಗೂಗಲ್ ನಲ್ಲಿ ಎಲ್ಲಾ ವಿಷಯದ ಬಗ್ಗೆ ಮಾಹಿತಿ ಸಿಗುತ್ತೆ ಹಾಗಾಗಿ ನಾವು ಮನೆಯಿಂದ ಹೊರ ಹೋಗದೆ ಕುಳಿತಲ್ಲಿಯೇ ಕೈಯಲ್ಲಿ ಮೊಬೈಲ್ ಹಿಡಿದು ವಿಶ್ವದ ಎಲ್ಲಾ ಸುದ್ದಿಗಳನ್ನು ತಿಳಿದುಕೊಳ್ಳಬಹುದು. ಗೂಗಲ್ ಒಂದು ಅದ್ಭುತ ಮಾಹಿತಿ ಕೋಶ. ಇಲ್ಲಿ ಯಾವ ವಿಷಯದ ಬಗ್ಗೆ ಬೇಕಾದರೂ ಮಾಹಿತಿ ಸಿಗುತ್ತೆ ಹೆಣ್ಣು ಮಕ್ಕಳು ಹೆಚ್ಚಾಗಿ ಗೂಗಲ್ ನಲ್ಲಿ ತಮಗೆ ಬೇಕಾದ ವಿಷಯಗಳನ್ನು ಸರ್ಚ್ ಮಾಡುತ್ತಾರೆ.
Girls search more on this one topic on mobile
ಸುಮಾರು 150 ಮಿಲಿಯನ್ ಗೂ ಹೆಚ್ಚು ಜನ ದೇಶದಲ್ಲಿ ಇಂಟರ್ನೆಟ್ ಬಳಸುತ್ತಿದ್ದು ಅದರಲ್ಲಿ 20 ಮಿಲಿಯನ್ ಜನ ಹೆಣ್ಣು ಮಕ್ಕಳೇ ಅಂತರ್ಜಾಲದಲ್ಲಿ ಮುಳುಗಿರುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ. ಇನ್ನು ಗೂಗಲ್ ನಲ್ಲಿ ಹೆಣ್ಣು ಮಕ್ಕಳು ಯಾವ ವಿಷಯದ ಬಗ್ಗೆ ಹೆಚ್ಚಾಗಿ ಸರ್ಚ್ ಮಾಡ್ತಾರೆ ಎಂದು ನೋಡುವುದಾದರೆ ಸುಮಾರು 15ರಿಂದ 35 ವರ್ಷದ ಒಳಗಿನ ಹೆಣ್ಣು ಮಕ್ಕಳು ಶೇಕಡಾ 75 ರಷ್ಟು ಭಾಗ ದೈನಂದಿನ ಜೀವನದ ಬಗ್ಗೆ ಮಾಹಿತಿಯನ್ನು ನೋಡುತ್ತಾರೆ.
ಇನ್ನು ಶೇಕಡ 31 ರಷ್ಟು ಹದಿ ಹರೆಯದ ಹೆಣ್ಣು ಮಕ್ಕಳು ಡಯೆಟ್ ಹಾಗೂ ಫಿಟ್ನೆಸ್ ಬಗ್ಗೆ ಇರುವ ಮಾಹಿತಿಗಳನ್ನ ಸರ್ಚ್ ಮಾಡುತ್ತಾರೆ. ಇನ್ನು ಶೆ.17ರಷ್ಟು ಹುಡುಗಿಯರು ಲೈಂಗಿಕ ವಿಷಯದ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಹುಡುಕುತ್ತಾರೆ. ಅಷ್ಟೇ ಅಲ್ಲ ಸ್ವಾವಲಂಬಿಯಾಗಿ ಬದುಕಬೇಕು ಎಂದು ಇಷ್ಟಪಡುವ ಹೆಣ್ಣು ಮಕ್ಕಳು ಉದ್ಯೋಗದ ಬಗ್ಗೆ ಹೆಚ್ಚಾಗಿ ಹುಡುಕಾಟ ಮಾಡುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ.

ಇನ್ನು ಸೌಂದರ್ಯ ಪ್ರಿಯರಾಗಿರುವ ಹೆಣ್ಣು ಮಕ್ಕಳು ಫಿಟ್ ಆಗಿರಲು ಏನು ಮಾಡಬೇಕು ವಯಸ್ಸಾದ ಮೇಲೆಯೂ ವಯಸ್ಸು ತಿಳಿಯದಂತೆ ಯಾವ ರೀತಿ ಸೌಂದರ್ಯ ವರ್ಧಕಗಳನ್ನು ಬಳಸಬಹುದು ಎಂಬುದರ ಬಗ್ಗೆ ಮಾಹಿತಿ ಹುಡುಕುತ್ತಾರೆ ಅಷ್ಟೇ ಅಲ್ಲ ಹೆಣ್ಣುಮಕ್ಕಳು ಆನ್ಲೈನ್ ಶಾಪಿಂಗ್ ಅನ್ನು ಹೆಚ್ಚು ಮೆಚ್ಚಿಕೊಂಡಿದ್ದಾರೆ ಯಾವ ಸೈಟ್ ಆನ್ಲೈನ್ ಶಾಪಿಂಗ್ ಗೆ ಉತ್ತಮ ಎಂಬುದನ್ನು ಕೂಡ ಗೂಗಲ್ ನಲ್ಲಿ ಹೆಣ್ಣು ಮಕ್ಕಳು ಅತಿಯಾಗಿ ಸರ್ಚ್ ಮಾಡುತ್ತಾರೆ.
ಒಂದೇ ಒಂದು ತಾಳೆ ಹಣ್ಣು ಸೇವಿಸುವುದರಿಂದ ನಮ್ಮ ದೇಹಕ್ಕೆ ಅದೆಷ್ಟು ಆರೋಗ್ಯ ಲಾಭಗಳಿವೆ ಗೊತ್ತಾ? ಆರೋಗ್ಯದ ಖನಿಜವೇ ಇದರಲ್ಲಿ ಅಡಗಿದೆ ನೋಡಿ!!
ಇನ್ನು ಮದುವೆಯಾದ ಮಹಿಳೆಯರ ಬಗ್ಗೆ ಹೇಳುವುದಾದರೆ ತಮ್ಮ ಅಡುಗೆ ಮನೆಯ ಬಿಡುವಿನ ಕೆಲಸದಲ್ಲಿಯೂ ಕೂಡ ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವ ವಿಷಯ ಏನು ಗೊತ್ತಾ ?ಅದು ಕೂಡ ಅಡುಗೆ ಬಗ್ಗೆಯೇ ಆಗಿರುತ್ತೆ. ಯಾವ ಅಡುಗೆ ಮಾಡಬೇಕು ಯಾವ ರೆಸಿಪಿ ಮಾಡಿದರೆ ಜನ ಇಷ್ಟ ಪಡುತ್ತಾರೆ ಎಂಬಂತಹ ಮಾಹಿತಿಯನ್ನು ಕಲೆ ಹಾಕುತ್ತಾರೆ. ಈ ವಿಷಯಗಳನ್ನು ಹೊರತುಪಡಿಸಿ ಹೆಣ್ಣು ಮಕ್ಕಳು ಇನ್ನೂ ಯಾವ ವಿಷಯದ ಬಗ್ಗೆ ಹೆಚ್ಚು ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಾರೆ ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.