ಈಗಂತೂ ಮದುವೆ ಹಾಗೂ ಮತ್ತಿತರ ಶುಭ ಕಾರ್ಯಗಳ ಸೀಸನ್. ಎಲ್ಲಿ ನೋಡಿದರೂ ಮದುವೆಯ ಸಂಭ್ರಮ ಕಳೆ ಕಟ್ಟಿದೆ. ಎಲ್ಲಾ ಹೋಟೆಲ್ (Hotel) ಗಳು ಛತ್ರಗಳು ಮದುವೆಯಾಗಿ ಬುಕ್ ಆಗುವೆ. ಇದನ್ನು ನೋಡಿದ್ರೆ ಇತ್ತೀಚಿನ ಯುವಕರಲ್ಲಿ ಯುವತಿಯರಲ್ಲಿ ಮದುವೆಯ ಬಗ್ಗೆ ಹೆಚ್ಚು ಇಂಟರೆಸ್ಟ್ (Interest ) ಇದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತೆ. ಆದರೆ ಇತ್ತೀಚೆಗೆ ನಡೆದ ಒಂದು ಸಮೀಕ್ಷೆ (Survey) ವರದಿಯ ಬಗ್ಗೆ ನಿಮಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಿ.
ಯಾಕಂದ್ರೆ ಸಮೀಕ್ಷೆಯ ವರದಿಯ ಪ್ರಕಾರ ಶೇಕಡಾ 81 ರಷ್ಟು ಹೆಣ್ಣು ಮಕ್ಕಳಿಗೆ (Girls) ಮದುವೆಯಲ್ಲಿ ಆಸಕ್ತಿಯೇ ಇಲ್ಲವಂತೆ.ಹೌದು ಜನರನ್ನ ಮದುವೆ ಮತ್ತು ಸಂಬಂಧಗಳ ಬಗ್ಗೆ ಸಮೀಕ್ಷೆ ಒಂದರಲ್ಲಿ ಪ್ರಶ್ನೆಯನ್ನು ಕೇಳಲಾಗಿತ್ತು. ಆ ಸಮಯದಲ್ಲಿ ಶೇಕಡ 81% ರಷ್ಟು ಜನ ಹುಡುಗಿಯರು ಮದುವೆಯ ಬಗ್ಗೆ ಈ ರೀತಿಯಾಗಿ ಉತ್ತರಿಸಿದ್ದಾರೆ ಮದುವೆಯ ಜೀವನದ ಬದಲು ಒಂಟಿಯಾಗಿ ಇರಲು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.
ನೀವು ಯಾವಾಗ ಮದುವೆಯಾಗಲು ಬಯಸುತ್ತೀರಿ ಎಂದು ಕೇಳಿದರೆ 39% ರಷ್ಟು ಹುಡುಗಿಯರು ಮದುವೆಯ ಸೀಸನ್ ನಲ್ಲಿ ಒತ್ತಡ ಹೆಚ್ಚು ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಮದುವೆಯ ಋತುವಿನಲ್ಲಿ ನಮ್ಮ ಮನೆಯ ಸುತ್ತಲೂ ಅಥವಾ ಸಂಬಂಧಿಕರ ಮನೆಗಳಲ್ಲಿ ಮದುವೆ ನಡೆಯುವುದು ಸಹಜ. ಆಗ ಪೋಷಕರು ತಮ್ಮ ಮಕ್ಕಳ ಮದುವೆ ಯಾವಾಗ ಎಂದು ಒತ್ತಡ ಹೇರಲು ಆರಂಭಿಸುತ್ತಾರೆ.
ಜೊತೆಗೆ ಅಕ್ಕ ಪಕ್ಕದ ಮನೆಯವರು ಕೂಡ ನಿಮ್ಮ ಮಗಳ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಲು ಶುರು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅನೇಕ ಹುಡುಗಿಯರು ಒತ್ತಡಕ್ಕೆ ಮಣಿದು ಮದುವೆ ಆಗಬೇಕಾಗುತ್ತದೆ. ಈಗ ಹೇಳು ಜನ್ಮ ಹೋಗಲಿ ಏಳು ವರ್ಷ ಜೊತೆಗೆ ಇರುವ ಸಂಸಾರಗಳು ಕೂಡ ಕಡಿಮೆ. ಸಮೀಕ್ಷೆಯ ಪ್ರಕಾರ ಸುಮಾರು 33% ಜನರು ಮದುವೆಯಾದ ನಂತರ ಸುಧೀರ್ಘ ಸಂಬಂಧವನ್ನು ಹೊಂದಲು ಇಷ್ಟಪಡುವುದಿಲ್ಲ.
ಆದರೆ ಅನಿವಾರ್ಯತೆಯ ಮೇಲೆ ಹುಡುಗ ಹಾಗೂ ಹುಡುಗಿ ಸಂಬಂಧವನ್ನು ಕಾಪಾಡಿಕೊಳ್ಳಲು ಒಟ್ಟಿಗೆ ಇರಲು ಬಯಸುತ್ತಾರೆ ಎಂದು ಹೇಳಲಾಗಿದೆ. ಇನ್ನು ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಸಮೀಕ್ಷೆಯ ಪ್ರಕಾರ ದೇಶದಲ್ಲಿ 81 ರಷ್ಟು ಮಹಿಳೆಯರು ಮದುವೆಯಾಗದೆ ಏಕಾಂಗಿಯಾಗಿ ಆರಾಮದಾಯಕ ಜೀವನ ಸಾಗಿಸಲು ಇಷ್ಟಪಡುತ್ತಾರೆ.
62ರಷ್ಟು ಜನ ತಮ್ಮ ಆದ್ಯತೆ, ಅಗತ್ಯತೆಗಳನ್ನ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಶೇಕಡ 83 ರಷ್ಟು ಹುಡುಗಿಯರು ಉತ್ತಮ ಸಂಗಾತಿ ಸಿಗುವವರೆಗೂ ಮದುವೆಯಾಗುವುದಕ್ಕೆ ಬಯಸುವುದಿಲ್ಲ ಎಂದು ಹೇಳಿದ್ದಾರೆ. ಈ ಸಮೀಕ್ಷೆಯನ್ನು ಹೊರತುಪಡಿಸಿ ನೋಡಿದರೆ, ಹೆಣ್ಣುಮಕ್ಕಳ ಮನಸ್ಥಿತಿಯನ್ನು ಅರಿತುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೇ ನಿಜವೆನಿಸುತ್ತೆ ಅಲ್ಲವೇ?