ಯಾರೂ ಊಹಿಸಲಾಗದ, ಇಂತಹ ಒಂದು ಅ-ಮಾ-ನು-ಷ ಘಟನೆ ನಡೆದಿರುವುದು ಮೊರ್ ಬಿ ಪ್ರದೇಶದ ವಿವಾದಿ ರೋಡ್ ಬಳಿ. ವಿವಾದಿ ರಸ್ತೆಯ ಬಳಿ ವಾಸವಾಗಿದ್ದ ಹಿಮಾಂಶು ತಾಕರ್ ಎನ್ನುವ ವ್ಯಕ್ತಿ ತನ್ನ ಪತ್ನಿಗೆ ಬಲವಂತವಾಗಿ ಪಿನಾಯಿಲ್ ಕುಡಿಸಿ ಆಕೆಗೆ ಇನ್ನಿಲ್ಲದಷ್ಟು ಹಿಂ-ಸೆ ನೀಡಿದ್ದಾನೆ. ಆಕೆಯ ಮೆಲೆ ಹ-ಲ್ಲೆ ನಡೆಸಿದ್ದಾನೆ. ಇದಕ್ಕೆ ಕಾರಣ ಕೇಳಿದರೆ ನೀವು ಖಂಡಿತವಾಗಿಯೂ ಬೆಚ್ಚಿ ಬೀಳ್ತೀರಾ ಇಂತಹ ಜನರು ಇರ್ತಾರ ಅಂತ ನಿಮಗೆ ಆಶ್ಚರ್ಯವೂ ಆಗಬಹುದು.
ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿ ಇತ್ತು. ಆತ ಕೂಡ ಆರಾಮಾಗಿ ಇದ್ದ. ಆದರೆ ಇದ್ದಕ್ಕಿದ್ದ ಹಾಗೆ ಏನಾಯಿತೊ ಗೊತ್ತಿಲ್ಲ ತನ್ನ ವರಸೆ ತೋರಿಸಲು ಆರಂಭಿಸಿದ ಹಿಮಾಂಶು.ಹಿಮಾಂಶು ತಾಕರ್ ಎನ್ನುವ ವ್ಯಕ್ತಿಯ ಜೊತೆಗೆ ಗಾಯತ್ರಿ ತಾಕರ್ ಎನ್ನುವ ಹುಡುಗಿ ಜೊತೆ ವಿವಾಹವಾಗಿತ್ತು ಆಕೆಗೆ ಕೇವಲ 20 ವರ್ಷ ವಯಸ್ಸು ಇವರಿಬ್ಬರಿಗೂ ಮದುವೆ ಆಗಿ ಒಂದು ವರ್ಷದ ಮಗು ಕೂಡ ಇದೆ.
ಹಿಮಾಂಶು ಬೇರೆ ಹುಡುಗಿಯ ಜೊತೆಗೆ ಸಂಬಂಧ ಬೆಳೆಸಿಕೊಂಡಿದ್ದ. ಅಷ್ಟೇ ಅಲ್ಲದೆ ಇತರ ಹೆಣ್ಣು ಮಕ್ಕಳ ಜೊತೆಗೆ ದಿನವಿಡಿ ಮಾತನಾಡುತ್ತಾ ಕಾಲ ಕಳೆಯುತ್ತಿದ್ದ. ಇದನ್ನು ಪ್ರಶ್ನಿಸಲು ಹೋದ ಪತ್ನಿ ಗಾಯತ್ರಿ ತಾಕರ್ ಗೆ ಆತ ಮಾಡಿದ್ದೇನು ಗೊತ್ತೇ. ಹೌದು, ಗಂಡನ ಪ್ರವೃತ್ತಿ ದಿನದಿಂದ ದಿನಕ್ಕೆ ಬದಲಾಗುತ್ತಿದ್ದಂತನ್ನು ಗಮನಿಸಿದ ಗಾಯತ್ರಿ ಆತನನ್ನು ಪ್ರಶ್ನೆ ಮಾಡುತ್ತಾಳೆ.
ಆದರೆ ಇದನ್ನು ಹಿಮಾಂಶುವು ಸಹಿಸುವುದಿಲ್ಲ ಕೊನೆಗೆ ಹೆಂಡತಿಗೆ ಧಂ-ಡಿಸಲು ಶುರು ಮಾಡುತ್ತಾನೆ. ಆಕೆಯನ್ನು ಮಾತ್ರವಲ್ಲದೆ ಆಕೆಯ ಸಹೋದರಿಯನ್ನು ಕೂಡ ತಿಳಿಸಿದ್ದಾನೆ. ಕಳೆದ ಭಾನುವಾರ ಹೆಂಡತಿಗೆ ಹೊ-ಡೆದಿದ್ದು ಮಾತ್ರವಲ್ಲದೆ ಆಕೆಗೆ ಬಲವಂತವಾಗಿ ಪಿನಾಯಿಲ್ ಕುಡಿಯುವಂತೆ ಹೇಳಿದ್ದಾನೆ. ಪಿನಾಯಿಲ್ ಕುಡಿದ ಗಾಯತ್ರಿ ತಾಕರ್ ಅಸ್ವಸ್ಥಳಾಗಿದ್ದಳು.
ಗಾಯತ್ರಿ ಠಾಕರ್ ಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಅವಳ ಆರೋಗ್ಯ ಸ್ಥಿತಿ ಉತ್ತಮವಾಗುತ್ತಿದೆ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇದರ ಜೊತೆಗೆ ಆಕೆಯ ಪತಿ ಹಿಮಾಂಶು ಕೂಡ ಹಾಸ್ಪಿಟಲ್ ಗೆ ಅಡ್ಮಿಟ್ ಆಗಿದ್ದು ಆತನ ಆರೋಗ್ಯ ಸ್ಥಿತಿ ಕೂಡ ಸುಧಾರಿಸುತ್ತಿದೆ. ಇನ್ನು ಇವರಿಬ್ಬರ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಅಂತು ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ ಆ ಒಂದು ವರ್ಷದ ಕಂದಮ್ಮ ಗೋಳಾಡುವಂತಾಗಿದೆ.