ಕನ್ನಡದಲ್ಲಿ ದ್ವಾರಕೀಶ್ ಅಂದ್ರೆ ಬಹು ದೊಡ್ಡ ಹೆಸರು. ಕನ್ನಡಿಗರಿಗೆ ಮಾತ್ರವಲ್ಲದೆ ಇತರ ಭಾಷೆಯ ಸಿನಿ ಪ್ರಿಯರಿಗೂ ಇಷ್ಟವಾದ ನಟ. ಒಬ್ಬ ಹಾಸ್ಯ ಕಲಾವಿದನಾಗಿ ತನ್ನ 20 ನೆ ವರ್ಷಕ್ಕೆ ಸಿನಿಮಾ ಪ್ರವೇಶ ಮಾಡುತ್ತಾರೆ ದ್ವಾರಕೀಶ್. ಅಲ್ಲಿಂದಲೇ ಕನ್ನಡದ ಕುಳ್ಳನಾಗಿ ದ್ವಾರಕೀಶ್ ಪರಿಚಯಗೊಳ್ಳುತ್ತಾರೆ. ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ನಟ ದ್ವಾರಕೀಶ್ ಅವರಿಗೆ ಇದೀಗ ಎಂಬತ್ತರ ಹರೆಯ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ದ್ವಾರಕೀಶ್ ತಮ್ಮ ವೃತ್ತಿ ಜೀವನದ ಹಲವು ವಿಚಾರಗಳನ್ನ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ದ್ವಾರಕೀಶ್ ಅವರ ಮೊದಲ ಸಿನಿಮಾ ಅವರ ಮಾವ ಹುಣಸೂರು ಕೃಷ್ಣ ಮೂರ್ತಿ ನಿರ್ದೇಶನ ವೀರ ಸಂಕಲ್ಪ. ಈ ಸಿನಿಮಾದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರು ಇಂದು ಒಂದಲ್ಲ ಒಂದು ಉತ್ತಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಎಂ.ಪಿ ಶಂಕರ್ ಇರಬಹುದು, ದ್ವಾರಕೀಶ್ ಇರಬಹುದು ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸಾಧನೆ ಮಾಡುವುದಕ್ಕೆ ವೀರ ಸಂಕಲ್ಪ ಸಿನಿಮಾ ದಾರಿ ಮಾಅಡಿಕೊಟ್ಟಿತ್ತು.
ಈ ಸಿನಿಮಾದಲ್ಲಿ ನಟಿಸಿ ಕೆಲವರು ಉತ್ತಮ ನಿರ್ದೇಶಕರು ಎನಿಸಿಕೊಂಡ್ರೆ ಇನ್ನು ಕೆಲವರು ಅತ್ಯುತ್ತಮ ನಿರ್ಮಾಪಕ ಎನಿಸಿಕೊಂಡಿದ್ದಾರೆ ಹಾಗೆಯೇ ದ್ವಾರಕೀಶ್ ಅವರಿಗೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಒಂದು ನೆಲೆ ಕಂಡುಕೊಳ್ಳುವುದಕ್ಕೆ ಅಡಿಪಾಯ ಆಗಿದ್ದೆ ವೀರ ಸಂಕಲ್ಪ ಸಿನಿಮಾ ಅಂದರೆ ತಪ್ಪಾಗಲಿಕ್ಕಿಲ್ಲ. ವೀರ ಸಂಪಲ್ಪ ಸಿನಿಮಾ ಆರಂಭವಾಗಿದ್ದು 1962ರಲ್ಲಿ. ಆಗ ದ್ವಾರಕೀಶ್ ಅವರಿಗೆ ಇಪ್ಪತ್ತು ವರ್ಷ ವಯಸ್ಸು.
ಅದೆಷ್ಟೇ ಕಷ್ಟವಾದರೂ ಸರಿ ಸಿನಿಮಾದ ಹಸಿವನ್ನು ತಣಿಸಿಕೊಳ್ಳಬೇಕು ಅಂತ ಶತಾಯ ಗತಾಯ ಪ್ರಯತ್ನಿಸುತ್ತಾರೆ ದ್ವಾರಕೀಶ್! ನಟ ದ್ವಾರಕೀಶ್ ಅವರು ಇತ್ತೀಚಿಗೆ ವೀರ ಸಂಕಲ್ಪ ಸಿನಿಮಾದಲ್ಲಿನ ಅವರ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಮೊದಲ ಸೀನ್ ನಲ್ಲಿ ಸಿಂಹಾಸನ ಏರುತ್ತಾರೆ. ಮುಂದಿನ ಸೀನ್ ನಲ್ಲಿ ಸಿಂಹಾಸನ ಇಳಿಯುತ್ತಾರೆ.
ಈ ಸಂದರ್ಭವನ್ನು ತಮ್ಮ ಜೀವನಕ್ಕೆ ಅನ್ವಯಿಸಿಕೊಂಡಿರುವ ದ್ವಾರಕೀಶ್ ಅವರು ನಾನು ಹೇಗೆ ಯಶಸ್ಸಿನ ಉತ್ತುಂಗ ಏರಿದೆ ನಂತರ ಹೇಗೆ ಕೆಳಗೆ ಎಂಬುದನ್ನ ಈ ಚಿತ್ರದ ಸೀನ್ ತೋರಿಸಿ ಕೊಡುತ್ತೆ ಅಂತ ಹೇಳುತ್ತಾರೆ. ಇನ್ನು ವೀರ ಸಂಕಲ್ಪ ಸಿನಿಮಾ ತೆರೆಕಂಡಿತ್ತು 1964 ರಲ್ಲಿ. ಬರೋಬ್ಬರಿ ಮೂರು ವರ್ಷಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆದಿತ್ತು. ಇನ್ನು ಈ ಸಿನಿಮಾಕ್ಕೆ ಒಬ್ಬ ನಾಯಕ ನಟಿಯನ್ನು ಹುಡುಕುತ್ತಿರುವಾಗ ಸಿಕ್ಕಿದ್ದೆ ನಟಿ ವಾಣಿಶ್ರೀ.
ನಟಿ ವಾಣಿಶ್ರೀ ಅವರ ಮೂಲ ಹೆಸರು ರತ್ನಕುಮಾರಿ. ಇವರು ಒಂದು ಪುಟ್ಟ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಇವರನ್ನ ಸಿನಿಮಾ ರಂಗಕ್ಕೆ ಕರೆದುಕೊಂಡು ಬಂದಿದ್ದೆ ದ್ವಾರಕೀಶ್ ಅವರು. ಹಾಸ್ಯ ನಟಿಯಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ರು, ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಮೋಸ್ಟ ಹೀರೋಯಿನ್ ಆಗಿ ನಟಿ ವಾಣಿಶ್ರೀ ಮಿಂಚುತ್ತಾರೆ. ಅವರಿಗಾಗಿ ಸೌತ್ ಸಿನಿಮಾ ದ ಎಲ್ಲಾ ದಿಗ್ಗಜ ನಟರು ನಿರ್ದೇಶಕರು ನಿರ್ಮಾಪಕರು ಕಾಯುತ್ತಿದ್ರು ಅಂದ್ರೆ ನೀವು ನಂಬಲೇಬೇಕು.
ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಎನ್ ಟಿ ರಾಮರಾವ್, ಎ. ಶಿವಾಜಿ ಗಣೇಶನ್, ಎಂ ಡಿ ರಾಮಚಂದ್ರನ್ ಮೊದಲ ನಟರು ವಾಣಿಶ್ರೀ ಜೊತೆ ನಟಿಸುವುದಕ್ಕಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದರಂತೆ. ಅಂತಹ ಮಹಾನ್ ನಾಯಕಿ ವಾಣಿಶ್ರೀ. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ವಾಣಿಶ್ರೀ ಅಂತ ದ್ವಾರಕೀಶ್ ಹೇಳಿದ್ದಾರೆ.