ಇತ್ತೀಚಿಗೆ ಸ್ಯಾಂಡಲ್ ವುಡ್ನಲ್ಲಿ ಕರಿ ಚಿರತೆ, ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಿಸುತ್ತಿರುವ ಭೀಮಾ ಸಿನಿಮಾದ ಹೀರೋಯಿನ್ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಹೊಸ ಮುಖವನ್ನು ದುನಿಯಾ ವಿಜಯ್ ಈ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಮೊದಲು ಸಿನಿಮಾದಲ್ಲಿಯೇ ಸ್ಟಾರ್ ನಟನ ಜೊತೆಗೆ ಅಭಿನಯಿಸುತ್ತಿರುವ ಖುಷಿಯಲ್ಲಿದ್ದಾರೆ ನಟಿ ಅಶ್ವಿನಿ (Ashwini).
ಭೀಮ ಸಿನಿಮಾ (Bheema) ಪಕ್ಕ ನಾಟಿ ಸ್ಟೈಲ್ (Naati Style) ನಲ್ಲಿ ಇರುವಂತಹ ಸಿನಿಮಾ. ಹಾಗಾಗಿ ಇದಕ್ಕೆ ಒಂದು ಖಡಕ್ ಹೀರೋಯಿನ್ ಅನ್ನು ಹುಡುಕುತ್ತಿತ್ತಂತೆ ಭೀಮಾ ಚಿತ್ರತಂಡ. ಅದಕ್ಕೆ ಸರಿಯಾಗಿ ರಂಗಭೂಮಿ ಕಲಾವಿದೆ (Drama artist) ಆಗಿರುವ ಅಶ್ವಿನಿ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವುದಕ್ಕೆ ಒಪ್ಪಿಕೊಂಡರು. ಕಾರ್ಯಕ್ರಮ (Programme) ಒಂದರಲ್ಲಿ ಭೇಟಿಯಾಗಿದ್ದ ವಿಜಯ್, ತನ್ನ ಸಿನಿಮಾದಲ್ಲಿ ಅಭಿನಯಿಸುತ್ತೀರಾ ಎಂದು ಕೇಳಿದರಂತೆ.
ಅದಕ್ಕೆ ಅಶ್ವಿನಿ ಒಪ್ಪಿಗೆ ಕೂಡ ಕೊಟ್ಟಿದ್ದರು. ಸಿನಿಮಾದಲ್ಲಿ ಯಾವುದೋ ಸಣ್ಣ ಪಾತ್ರ ಎಂದು ಭಾವಿಸಿದ್ದ ನನಗೆ ಹೀರೋಯಿನ್ ಪಾತ್ರ ಸಿಗುತ್ತೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಅಶ್ವಿನಿ ಮಾಧ್ಯಮದ (Media) ಮುಂದೆ ಹೇಳಿಕೊಂಡಿದ್ದಾರೆ. ಇನ್ನು ಹಳ್ಳಿ ಹುಡುಗಿ ಪಾತ್ರ ಮಾಡುತ್ತಿರುವ ಅಶ್ವಿನಿ ಅವರಿಗೆ ಖಡಕ್ ಡೈಲಾಗ್ (Dialogue) ಕೂಡ ಕೊಟ್ಟಿದ್ದಾರೆ ವಿಜಯ್. ನಾಟಿ ಸ್ಟೈಲ್ ನಲ್ಲಿ ಕೋಳಿ ಹಿಡಿದುಕೊಂಡು ಪಕ್ಕ ಹಳ್ಳಿ ಗೆಟಪ್ ನಲ್ಲಿ ಅಶ್ವಿನಿ ಕಂಗೊಳಿಸಿದ್ದಾರೆ.
ಇನ್ನು ನಾಯಕಿ ಪಾತ್ರಕ್ಕೆ ಸಂಬಂಧಪಟ್ಟ ಹಾಗೆ ದುನಿಯಾ ವಿಜಯ್ ಕೂಡ ಮಾತನಾಡಿದ್ದಾರೆ. ಸ್ವಲ್ಪ ತಡವಾಗಿ ಈ ನಾಟಿ ಕೋಳಿ ನಮ್ಮ ಕೈಗೆ ಸಿಕ್ಕಿದೆ ಎಂದು ನಗೆ ಚಟಾಕಿ ಹಾರಿಸಿದ ದುನಿಯಾ ವಿಜಯ್ ನನ್ನ ಕಲರ್ ಗೆ ಮ್ಯಾಚ್ ಆಗುವಂತಹ ಹುಡುಗಿ ಸಿಕ್ಕಿದ್ದಾಳೆ ಹಾಗಾಗಿ ಆಕೆಯನ್ನು ನಾಯಕಿಯಾಗಿ ಆಯ್ದುಕೊಂಡವು ಎಂದು ಹೇಳಿದ್ದಾರೆ.
ಈಗಾಗಲೇ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿರುವ ಅಶ್ವಿನಿಗೆ ಬೆಳ್ಳಿ ತೆರೆಯ ಮೇಲೆ ಇದು ಮೊದಲ ಪ್ರಯತ್ನ ಆಗಿದ್ದರು ಕೂಡ ನಟನೆ ಎನ್ನುವುದು ಇವರಿಗೆ ಹೊಸತಲ್ಲ. ಮೊದಲ ಬಾರಿಗೆ ದೊಡ್ಡ ಸ್ಟಾರ್ ನಟನ ಜೊತೆಗೆ ಅಭಿನಯಿಸುತ್ತಿದ್ದೇನೆ ಎನ್ನುವ ನ್ನರವಸ್ನೆಸ್ (Nervousness) ಇತ್ತು ಆದರೆ ಎಲ್ಲರ ಸಹಕಾರದಿಂದ ಚೆನ್ನಾಗಿ ಆತ್ಮವಿಶ್ವಾಸದಿಂದ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ ಎಂಬುದಾಗಿ ಅಶ್ವಿನಿ ಹೇಳಿಕೊಂಡಿದ್ದಾರೆ.
ಭೀಮ ಸಿನಿಮಾದ ಫಸ್ಟ್ ಲುಕ್ ಟೀಸರ್ (First look Teaser) ರಿಲೀಸ್ ಆಗಿದೆ. ಈ ಲುಕ್ ನಲ್ಲಿಯೇ ವಿಜಯ್ ಅವರ ಖಡಕ್ ಸಿನಿಮಾ ಇದು ಎಂಬುದು ಅರ್ಥವಾಗುತ್ತೆ. ಆಕ್ಷನ್ ಸಿನಿಮಾ ಭೀಮ ದುನಿಯಾ ವಿಜಯ್ ಅವರ ನಿರ್ದೇಶನದ ಎರಡನೇ ಸಿನಿಮಾ. ಸಲಗ (Salaga) ಸಿನಿಮಾ ವನ್ನ ನಿರ್ದೇಶನ ಮಾಡಿ ಗೆದ್ದಿರುವ ದುನಿಯಾ ವಿಜಯ್ ಭೀಮಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹಿಟ್ ಗಳಿಸುತ್ತಾರಾ ಕಾದು ನೋಡಬೇಕು.