ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯರು ಅಂದ್ರೆ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ ಅವರನ್ನ ಸಾಕಷ್ಟು ಜಾಹೀರಾತುಗಳಲ್ಲಿಯೂ ಕೂಡ ತೆಗೆದುಕೊಳ್ಳುತ್ತಾರೆ. ಹಲವಾರು ಜಾಹೀರಾತುಗಳಿಗೆ ಅಂಬಾಸೆಡರ್ ಆಗಿ ಕೆಲಸ ಮಾಡುತ್ತಾರೆ. ಒಂದು ಸಿನಿಮಾದಲ್ಲಿ ದುಡಿಯೋದಕ್ಕಿಂತ ಹೆಚ್ಚಿನ ಸಂಭಾವನೆ ಜಾಹೀರಾತಿನ ಮೂಲಕ ಸಿಗುತ್ತೆ ಎಂದರೆ ತಪ್ಪಲ್ಲ.
ಇತ್ತೀಚಿಗೆ ಬಾಲಿವುಡ್ (Bollywod) ಚಿತ್ರರಂಗದ ಖ್ಯಾತ ನಟಿ ದಿಶಾ ಪಠಾಣಿ ಒಳಉಡುಪಿನ ಬ್ರಾಂಡ್ (Inners wear brand) ಒಂದಕ್ಕೆ ಜಾಹೀರಾತು ಮಾಡಿದ್ದಾರೆ ಇದಕ್ಕಾಗಿ ಅವರು ತೆಗೆದುಕೊಂಡ ಸಂಭಾವನೆ ಬಗ್ಗೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀನಿ. ಇತ್ತೀಚಿಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅಭಿನಯಿಸಿ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ದಿಶಾ ಪಟಾನಿ ಉತ್ತರ ಪ್ರದೇಶದ ಮೂಲದವರು.
ಇಂದು ಬಾಲಿವುಡ್ ನಲ್ಲಿ ಹೆಸರು ಮಾಡಿದರು ಅವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಮಾತ್ರ ತೆಲಗು ಚಿತ್ರರಂಗದಿಂದ. ತೆಲುಗು ಸಿನಿಮಾದಲ್ಲಿ ಅಭಿನಯಿಸಿದ ನಂತರ ಅವರಿಗೆ ನೇರವಾಗಿ ಬಾಲಿವುಡ್ ನಿಂದ ಕರೆ ಬಂತು ಹಾಗಾಗಿ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ದಿಶಾ ಪಠಾಣಿ ಎಂಎಸ್ ಧೋನಿ ಅವರ ಬಯೋಪಿಕ್ ಸಿನಿಮಾದಲ್ಲಿ ಅಭಿನಯಿಸಿ ಈ ಎಲ್ಲರ ಮೆಚ್ಚುಗೆ ಗಳಿಸಿಕೊಂಡರು.
ಬಾಲಿವುಡ್ ಇತಿಹಾಸದಲ್ಲಿ ದೊಡ್ಡ ರೆಕಾರ್ಡ್ ಸೃಷ್ಟಿಸಿದ ಈ ಸಿನಿಮಾದ ನಂತರ ದಿಶಾ ಪಟಾಣಿ ಅವರ ಬೇಡಿಕೆ ಕೂಡ ಹೆಚ್ಚಿದೆ. ಹೌದು, ದಿಶಾ ಪಟಾಣಿ ಅವರಿಗೆ ಎಂ ಎಸ್ ಧೋನಿ (M.S.Dhoni) ಚಿತ್ರ ದೊಡ್ಡ ಬ್ರೇಕ್ ನೀಡಿತ್ತು. ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿ (Top Actress) ಯರಲ್ಲಿ ದಿಶಾ ಪಠಾಣಿ ಕೂಡ ಸೇರಿದ್ದಾರೆ. ನಟಿ ದಿಶಾ ಪಟಾಣಿ ಅವರಿಗೆ ಸಿನಿಮಾದಲ್ಲಿ ಅಭಿನಯಿಸಲು ಒಂದು ಸಿನಿಮಾಕ್ಕೆ ಎರಡರಿಂದ ನಾಲ್ಕು ಕೋಟಿ ಎಷ್ಟು ಸಂಭಾವನೆ ನೀಡಲಾಗುತ್ತೆ.
ಇನ್ನು ಕೇವಲ ಒಂದೇ ಒಂದು ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದರು ಸಾಕು 50 ರಿಂದ ಒಂದು ಕೋಟಿ ರೂಪಾಯಿಗಳನ್ನು ದಿಶಾ ಪಟಾಣಿ ಪಡೆದುಕೊಳ್ಳುತ್ತಾರೆ. ಎಕ್ ವಿಲನ್ ರಿಟರ್ನ್ಸ್ ಸಿನಿಮಾದಲ್ಲಿ ದಿಶಾ ಪಟಾಣಿ ಅವರಿಗೆ ಎರಡುವರೆ ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಇನ್ನು ದಿಶಾ ಪಟಾಣಿ ಅವರನ್ನ ಸಾಕಷ್ಟು ಜಾಹಿರಾತುಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದ್ದು ಬ್ರಾಂಡೆಡ್ ಕಂಪನಿಯ ಬಟ್ಟೆಗಳನ್ನು ಪ್ರಮೋಟ್ ಮಾಡಲು ದಿಶಾ ಪಟಾಣಿಗೆ ಎಷ್ಟು ಸಂಭಾವನೆ ಸಿಗುತ್ತಿದೆ ಗೊತ್ತೇ?
ಹೌದು ದಿಶಾ ಪಟಾಣಿ ಸೋಶಿಯಲ್ ಮೀಡಿಯಾ(Social Media)ದಲ್ಲಿಯೂ ಕೂಡ ಫೇಮಸ್ ಆಗಿದ್ದಾರೆ ಅವರಿಗೆ 55.7 ಮಿಲಿಯನ್ ಫಾಲೋವರ್ಸ್ (Followers) ಇದ್ದಾರೆ. ಕೆಲ್ವಿನ್ ಕ್ಲೀನ್ (Calvin Klein) ಎನ್ನುವ ದೊಡ್ಡ ಕಂಪನಿಯ ಒಳ ಉಡುಪಿನ ಪ್ರಾಡಕ್ಟ್ ದಿಶಾ ಪಟಾನಿ ಪ್ರಮೋಟ್ ಮಾಡುತ್ತಾರೆ ಇದಕ್ಕೆ ಪ್ರತಿ ಪೋಸ್ಟ್ ಗೆ ಕೂಡ ಲಕ್ಷಾಂತರ ಹಣ ಗಳಿಸುತ್ತಾರೆ.
ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಕೆಲ್ವಿನ್ ಕ್ಲೀನ್ ಪ್ರಾಡಕ್ಟ್ ಗಳಿಗೆ ಪ್ರತಿ ಪೋಸ್ಟ್ ಗೆ 50 ರಿಂದ 80 ಲಕ್ಷ ಪಡೆದುಕೊಳ್ಳುತ್ತಾರೆ. ಕೆಲ್ವಿನ್ ಕ್ಲಿನ್ ಕಂಪನಿಯ ಬಟ್ಟೆಗಳನ್ನು ದಿಶಾ ಪಟಾಣಿ ಧರಿಸಿ ಬೋಲ್ಡ್ ಆಗಿ ಫೋಸ್ ನೀಡಿದ್ದಾರೆ. ಇವರ ಈ ಫೋಟೋಗಳು ಕೂಡ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿವೆ. ಕೆಲ್ವಿನ ಕ್ಲೀನ್ ಒಳ ಉಡುಪುಗಳನ್ನ ತಯಾರಿಸುವ ಪ್ರಸಿದ್ಧ ಕಂಪನಿ ಆಗಿದ್ದು ದಿಶಾ ಪಟಾಣಿ ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.