ನಮ್ಮ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ಅನೇಕ ಪರಭಾಷಾ ನಟಿಯರು ಬಂದು ನಟಿಸಿ ಹೋಗಿದ್ದಾರೆ. ಕೆಲ ನಟಿಯರು ಕೇವಲ ಒಂದೇ ಸಿನಿಮಾ ಮಾಡಿದರೂ ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಹಾಗೆ ನೋಡಿದರೆ ಬಾಲಿವುಡ್ ನ ಟಾಪ್ ನಟಿಯರಾಗಿದ್ದ ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ನಗ್ಮಾ ಹೀಗೆ ಅನೇಕ ನಟಿಮಣಿಯರ ಲಿಸ್ಟೇ ಇದೆ. ಅದೇ ರೀತಿ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ ನಟಿಯರು ಕನ್ನಡ ಸಿನಿಮಾದಲ್ಲಿಯೂ ನಟಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಅಂತಹ ನಟಿಯರಲ್ಲಿ ದೀಕ್ಷಾ ಸೇಠ್ ಕೂಡ ಒಬ್ಬರು. ಹೌದು, ಕನ್ನಡದ ಜಗ್ಗುದಾದಾ ಸಿನಿಮಾದಲ್ಲಿ ನಟಿಸಿರುವ ನಟಿಯೇ ದೀಕ್ಷಾ ಸೇಠ್.
2016 ರಲ್ಲಿ ತೆರೆ ಕಂಡ ಜಗ್ಗುದಾದಾ ಸಿನಿಮಾದಲಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ದೀಕ್ಷ ಸೇಠ್ ಅಭಿನಯಿಸಿದ್ದರು. ರಾಘವೇಂದ್ರ ಹೆಗಡೆ ನಿರ್ದೇಶಿಸಿದ ಈ ಸಿನಿಮಾದಲ್ಲಿ ದೀಕ್ಷಾ ಅವರು ಅಧ್ಬುತವಾಗಿ ನಟಿಸಿದ್ದರು. ದೀಕ್ಷಾ ಸೇಠ್ ಅವರ ಅಂದದ ನಗು ಹಾಗೂ ಮೊಗ ಯಾರನ್ನಾದರೂ ಮೋಡಿ ಮಾಡಿ ಬಿಡುತ್ತದೆ. ಮಾಡೆಲಿಂಗ್ ಹಾಗೂ ನಟನೆ ಎರಡನ್ನೂ ನಿಭಾಯಿಸಿಕೊಂಡು ಬಂದಿರುವ ದೀಕ್ಷಾ ಸೇಠ್ ಅವಕಾಶಗಳು ಹುಡುಕಿಕೊಂಡು ಬರುತ್ತಿತ್ತು. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ದೀಕ್ಷಾ ಸೇಠ್ ಮಿಂಚಿದ್ದಾರೆ.
ದೆಹಲಿಯಲ್ಲಿ 1990 ರಲ್ಲಿ ಜನಿಸಿದ ದೀಕ್ಷಾ ಸೇಠ್, ತೆಲುಗಿನ ವೇದಂ, ಮಿರಾಪಕಾಯಿ, ವಾಂಟೆಡ್, ರಾಜಪಟ್ಟೈ, ನಿಪ್ಪು, ಊ ಕೊಡ್ತಾರಾ?ಉಲಿಕ್ಕಿ ಪಡ್ತಾರಾ?, ರೆಬೆಲ್, ಅದೇ ರೀತಿ ಹಿಂದಿಯಲ್ಲಿ ಲೇಕರ್ ಹಮ್ ದಿವಾನಾ ದಿಲ್, ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಭಾವಂತೆ ಆಗಿರುವ ದೀಕ್ಷಾ ಸೇಠ್ ಅವರು ಜಗ್ಗುದಾದಾ ಸಿನಿಮಾಕ್ಕೆ ಹೇಳಿ ಮಾಡಿಸಿದಂತಿದ್ದರು. ಯಾಕಂದರೆ ದರ್ಶನ್ ಅವರಿಗೆ ಸರಿಹೊಂದುವಂತಹ ಎತ್ತರದ ನಿಲುವು ಅವರಿಗಿತ್ತು. ಹೀಗಾಗಿಯೇ ಈ ಸಿನಿಮಾಕ್ಕೆ ದೀಕ್ಷಾ ಸೇಟ್ ಆಯ್ಕೆ ಆಗಿದ್ದರು. 2009 ರಿಂದ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ದೀಕ್ಷಾ ಸೇಠ್, ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಫ್ರೆಶ್ ಫೇಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಆದರೆ ಇಅವರು ಜಗ್ಗುದಾದಾ ಸಿನಿಮಾ ನಂತರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇವರು ಸದಾ ಆಕ್ಟೀವ್ ಆಗಿದ್ದಾರೆ.. ಇದೀಗ ವಯಸ್ಸು 32 ಆಗಿದ್ದರೂ ತನ್ನ ಸೌಂದರ್ಯವನ್ನು ಅಧ್ಬುತವಾಗಿಯೇ ಕಾಪಾಡಿಕೊಂಡು ಬಂದಿರುವ ದೀಕ್ಷಾ ಸೇಠ್ ಭಿನ್ನ ಭಿನ್ನ ಫೋಟೋಶೂಟ್ ಮಾಡಿಸಿಕೊಂಡು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾದುತ್ತಿರುತ್ತಾರೆ. ಈ ಮೂಲಕ ಈಗಲೂ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.