ಕನ್ನಡದಲ್ಲಿ ಇದೀಗ ದೀಪಿಕಾ ದಾಸ್ ಎಲ್ಲರಿಗೂ ಇಷ್ಟವಾಗಿರುವ ನಟಿ. ಇವರು ನಟಿಯಾಗಿ ಗುರುತಿಸಿಕೊಂಡಿದ್ದು ನಾಗಿಣಿ ಧಾರಾವಾಹಿಯ ಮೂಲಕ. ಆದರೆ ಜನರಿಗೆ ಹೆಚ್ಚು ಹತ್ತಿರವಾಗಿತ್ತು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ. ಬಿಗ್ ಬಾಸ್ ಸೀಸನ್ ಏಳರ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ದೀಪಿಕಾ ದಾಸ್ ಫೈನಲ್ ಕೂಡ ಪ್ರವೇಶ ಮಾಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರ ಪ್ರವೀಣರ ವಿಭಾಗದಲ್ಲಿ ಸ್ಪರ್ದಿಯಾಗಿದ್ದಾರೆ.
ಹೌದು, ಕಳೆದ ಬಾರಿ ಅಷ್ಟೇ ದೀಪಿಕಾ ದಾಸ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದರು. ಇದು ಬಹಳ ಜನರಿಗೆ ಬೇಸರ ಮೂಡಿಸಿತ್ತು. ಯಾಕಂದ್ರೆ ದೀಪಿಕಾ ದಾಸ್ ಅತ್ಯುತ್ತಮ ಆಟಗಾರ್ತಿ. ಯಾವುದೇ ಟಾಸ್ಕ್ ಬಂದ್ರು ಅದನ್ನ ನಿಭಾಯಿಸಬಲ್ಲ ಕೆಪಾಸಿಟಿ ಅವರಲ್ಲಿದೆ. ಅವರು ಒಬ್ಬ ಕ್ರೀಡಾಪಟು ಕೂಡ ಹೌದು.
ಆದರೆ ಅವರ ಮೌನವೇ ಅವರಿಗೆ ಸ್ವಲ್ಪ ಎಫೆಕ್ಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆಯಬೇಕಾಯಿತು. ಆದರೆ ಮನೆಗೆ ಹೋದ ಒಂದೇ ದಿನದಲ್ಲಿ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ದೀಪಿಕಾ ದಾಸ್ ಮತ್ತೆ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿರುವ ದೀಪಿಕಾ ದಾಸ್ ಅವರಲ್ಲಿ ಸಾಕಷ್ಟು ಬದಲಾವಣೆಗಳನ್ನ ಗಮನಿಸಬಹುದು.
ಇದೀಗ ಎಲ್ಲರ ಜೊತೆಗೆ ಹೆಚ್ಚು ಹೆಚ್ಚು ಬೆರೆಯುತ್ತಿದ್ದಾರೆ. ತಮಾಷೆ ಮಾಡಿಕೊಂಡು ಎಲ್ಲಾ ಇತರ ಸ್ಪರ್ಧಿಗಳ ಜೊತೆ ಉತ್ತಮ ಬಾಂಡಿಂಗ್ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯನ್ನು ನೋಡಿದರೆ ದೀಪಿಕಾ ದಾಸ್ ಈ ಬಾರಿಯೂ ಖಂಡಿತ ಫೈನಲ್ ನಂತೂ ಪ್ರವೇಶಿಸುತ್ತಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ದೀಪಿಕಾ ದಾಸ್ ಮೇಕಪ್ ಪ್ರಿಯರು ಹೌದು.
ಬಿಗ್ ಬಾಸ್ ಮನೆಯಲ್ಲಿ ಯಾವುದೇ ಟಾಸ್ಕ್ ಇರಲಿ ಇಲ್ಲದೆ ಇರಲಿ ದೀಪಿಕಾ ದಾಸ್ ಮಾತ್ರ ನೀಟ್ ಆಗಿ ಡ್ರೆಸ್ ಮಾಡಿಕೊಂಡು ಮೇಕಪ್ ಮಾಡಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. ಕಳೆದ ಬಿಗ್ ಬಾಸ್ ಸೀಸನ್ ಗೆ ಬಂದಾಗ ನನಗೆ ಮೇಕಪ್ ಅಂದ್ರೆ ಇಷ್ಟ ಎಂದಿದ್ದರು ದೀಪಿಕಾ ದಾಸ್. ಇನ್ನು ದೀಪಿಕಾ ಅವರು ಫಿಟ್ನೆಸ್ ಫ್ರೀಕ್ ಕೂಡ ಹೌದು. ಮನೆಯಲ್ಲಿದ್ರೆ ತಪ್ಪದೇ ಜಿಮ್ ಗೆ ಹೋಗುತ್ತಾರೆ ದೀಪಿಕಾ.
ವರ್ಕೌಟ್ ಮಾಡಿ ಫಿಟ್ ಆಗಿದ್ದಾರೆ. ಇತ್ತೀಚಿಗೆ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವರ್ಕೌಟ್ ಸಮಯದ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಸಕ್ಕತ್ ಹಾಟ್ ಆಗಿಯೂ ಕಾಣಿಸುವ ದೀಪಿಕಾ ಅವರ ಸ್ಟ್ರೆಂತ್ ನೋಡಿ ಅವರ ಅಭಿಮಾನಿಗಳು ಹೌಹಾರಿದ್ದಾರೆ. ಇದ್ದರೆ ದೀಪಿಕಾ ತರ ಫಿಟ್ನೆಸ್ ಇರಬೇಕು ಅಂತ ಕಮೆಂಟ್ ಮಾಡುತ್ತಿದ್ದಾರೆ.
ದೀಪಿಕಾ ದಾಸ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.4 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಬಂದದ್ದೇಲ್ಲವನ್ನೂ ಕೂಲ್ ಆಗಿ ಹ್ಯಾಂಡಲ್ ಮಾಡುವ ದೀಪಿಕಾ ದಾಸ್ ಕಂಡರೆ ಕನ್ನಡಿಗರಿಗಂತು ಅಚ್ಚು ಮೆಚ್ಚು. ಈಗಾಗಲೇ ಒಂದೆರಡು ಸಿನಿಮಾಗಳಲ್ಲೂ ಅಭಿನಯಿಸಿರುವ ದೀಪಿಕಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಬೆಳ್ಳಿತೆರೆಯಲ್ಲಿ ಮಿಂಚುವುದಕ್ಕೆ ಸಿದ್ದರಾಗಿದ್ದಾರೆ.
View this post on Instagram