Darshan : ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ (darshan) ಅವರ ಡಿ 56 ಸಿನಿಮಾದ ಹೆಸರನ್ನು ಚಿತ್ರತಂಡ ಅದಾಗಲೇ ವಿಶೇಷ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ ಕಾಟೇರ ಎಂಬ ಶೀರ್ಷಿಕೆಯಲ್ಲಿ ಮೂಡಿ ಬರುತ್ತಿರುವಂತಹ (darshan) ಅವರ ಈ ಒಂದು ಸಿನಿಮಾ ಗೆ ಹೈ ಎಕ್ಸ್ಪೆಕ್ಟೇಶನ್ ಸೃಷ್ಟಿಯಾಗಿದ್ದು, ದರ್ಶನ್ ಅವರನ್ನು ಹಳ್ಳಿ ಹೈದನಾಗಿ, ಪಕ್ಕ ಮಾಸ್ ಆಗಿ ನೋಡ ಸಿಗುವಂತಹ ಸಿನಿಮಾ ಇದಾಗಿದೆ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಟಿಪಿಕಲ್ ಹಳ್ಳಿ ಸೊಗಡಿನ ಕಥೆಯಲ್ಲಿ ಮೂಡಿ ಬರಬಹುದಾದಂತಹ (cinema) ಇದು ಎಂದು ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಿರುವಾಗ ದರ್ಶನ್ರವರು ಈ ಒಂದು ಸಿನಿಮಾದಲ್ಲಿ ಅಭಿನಯಿಸಲು ಕೇಳಿ ಪಡೆದಿರುವಂತಹ ಸಂಭಾವನೆ ಎಷ್ಟಿರಬಹುದು ಎಂಬ ಮಾಹಿತಿ ಸದ್ಯ ಬಾರಿ ವೈರಲ್ ಆಗುತ್ತಿದೆ.
ಹಾಗಾದ್ರೆ ಕಾಟೇರ ಸಿನಿಮಾಗೆ (darshan) ಪಡೆದಿರುವ ಸಂಭಾವನೆ ಎಷ್ಟು ಕೋಟಿ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ, ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ರಾಕ್ಲೈನ್ ಎಂಟರ್ಟೈನ್ಮೆಂಟ್ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣವಾಗುತ್ತಿರುವಂತಹ ದರ್ಶನ ಅವರ ಸಿನಿಮಾ ಭಾರಿ ನಿರೀಕ್ಷೆಯನ್ನು ಮೂಡಿಸಿದ್ದು. (ಇದನ್ನು ಓದಿ) ಸಾಧಕರ ಸಿಟ್ಟಿನಲ್ಲಿ ಕುಳಿತ ಪ್ರಭುದೇವ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ಎಪಿಸೋಡ್ ಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ??
ಕಳೆದ ಫೆಬ್ರವರಿ 16ನೇ ತಾರೀಕು (darshan) ಅವರ ಹುಟ್ಟು ಹಬ್ಬದ ಸಮಯದಲ್ಲಿ ಸಿನಿಮಾದ ಶೀಷಿಕೆಯನ್ನು ರಿವಿಲ್ ಮಾಡಲಾಯಿತು. (kaatera) ಎಂಬ ಹೆಸರು ಕೇಳುತ್ತಿದ್ದ ಹಾಗೆ ಹಳ್ಳಿಗಾಡಿನ ಕಥೆಯನ್ನು ಹಿಡಿದು ತಂದಿದ್ದಾರೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಈಗಾಗಲೇ ಸಿನಿಮಾದ ಶೂಟಿಂಗ್ ಕೆಲಸ ಬಹುತೇಕ ಶುರುವಾಗಿದ್ದು, ದರ್ಶನ್ರವರು ಕೂಡ ಚಿತ್ರೀಕರಣದಲ್ಲಿ ಭಾಗಿಯಾಗುವ ಮೂಲಕ ಬಿಜಿ ಇದ್ದಾರೆ.

ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ 1974ರಲ್ಲಿ ನಡೆದಂತಹ ನೈಜ ಘಟನೆ ಒಂದರ ಆಧಾರವಾಗಿದ್ದರೂ (tarun sudheer) ಅವರು ಹಂತಹಂತವಾಗಿ ಕಥೆ ಎಣೆದಿದ್ದು, ಇದು ಯಾವುದೋ ಕಾಲ್ಪನಿಕ ಕಥೆಯಲ್ಲ ಬದಲಿಗೆ ನಡೆದಿರುವಂತಹ ನೈಜ ಘಟನೆಯೇ ಆಗಿದೆ. ಈ ಸಿನಿಮಾದಲ್ಲಿ ದರ್ಶನ್ ಎಷ್ಟು ಅದ್ಭುತವಾಗಿ ಅಭಿನಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಹಾಗೂ ಈ ಸಿನಿಮಾಗಾಗಿ ಬರೋಬ್ಬರಿ 10 ಕೋಟಿ ಸಂಭಾವನೆಯನ್ನು (darshan) ಪಡೆದುಕೊಂಡಿರುವ ಮಾಹಿತಿಯು ಮೂಲಗಳಿಂದ ತಿಳಿದುಬಂದಿದೆ.