PhotoGrid Site 1680926402085

Darshan : ಡಿ ಬಾಸ್ ದರ್ಶನ್ ಬಳಿ ಇರುವ ಕಾರುಗಳ ಅದೆಷ್ಟು ಗೊತ್ತಾ? ಅಬ್ಬಬ್ಬಾ ಇಷ್ಟೊಂದು ದುಬಾರಿ ಕಾರುಗಳು ಕನ್ನಡ ನಟರಲ್ಲಿ ಯಾರ ಬಳಿಯೂ ಇಲ್ಲ ನೋಡಿ!!

Cinema

Darshan : ಸ್ನೇಹಿತರೆ ನಮ್ಮ ನಿಮ್ಮಂತ ಸಾಮಾನ್ಯ ಜನರಿಗೆ ಕಾರುಗಳ ಮೇಲೆ ಅತಿ ಹೆಚ್ಚಿನ ಪ್ರೀತಿ ಒಲವು ಹಾಗೂ ಕ್ರೇಜ್ ಇದ್ದೇ ಇರುತ್ತದೆ. ಒಮ್ಮೆಯಾದರೂ ನಮ್ಮಿಷ್ಟದ ಕಾರು ತೆಗೆದುಕೊಳ್ಳಬೇಕು ನಮ್ಮ ಪ್ರೀತಿ ಪಾತ್ರರೊಂದಿಗೆ ಅದರಲ್ಲಿ ಜಾಲಿಯಾಗಿ ರೈಡ್ ಹೋಗಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಹೀಗಿರುವಾಗ (VIP) ಗಳು ಕುರಿತು ಹೇಳಬೇಕೆ? ಅವರ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಒಂದೊಂದು (Car) ನಿಗದಿಯಾಗಿರುತ್ತದೆ.

ಇದಲ್ಲದೆ ಎಕ್ಸ್ಟ್ರಾ ಕಾರುಗಳು ಕೂಡ ಅವರ ಮನೆ ಮುಂದೆ ಸುಮ್ಮನೆ ನಿಂತಿರುತ್ತದೆ. ಹೀಗಿರುವಾಗ (Sandalwood) ನ ಕಾರುಗಳ ಸರದಾರ ನೆಂದೆ ಕರೆಸಿಕೊಳ್ಳುವಂತಹ (Dboss) (Darshan) ಅವರ ಬಳಿ ಇರುವಂತಹ ಕಾರ್ ಕಲೆಕ್ಷನ್ ಗಳು ಹಾಗೂ ಆ ಕಾರಿಗೆ ಎಷ್ಟು ಕೋಟಿ ಬೆಲೆ ಬಾಳುತ್ತದೆ ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ನಾವಿವತ್ತು ಈ  ಪುಟದ ಮುಖಾಂತರ ತಿಳಿಸಿ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಟ ದರ್ಶನ್ ಅವರ ಬಳಿ ( land rover defender) ಕಾರು ಇದ್ದು ಇದನ್ನು ದರ್ಶನ್ ಇತ್ತೀಚಿನ ದಿನಗಳ ಹಿಂದೆ ಖರೀದಿಸಿದ್ದರು ಇದರ ಬೆಲೆ ರೂ.1,20 ಲಕ್ಷ ರೂಪಾಯಿ. ಇನ್ನೂ ಎರಡನೇದಾಗಿ ದರ್ಶನ್ ಅವರ ಬಳಿ (Lamborghini Aventador) ಕಾರಿದ್ದು, ಈ ಕಾರು 6 ಕೋಟಿ ಬೆಲೆಬಾಳುತ್ತದೆ, ಬಿಳಿ ಬಣ್ಣದ ಈ ಕಾರಿನಲ್ಲಿ ವಿಶೇಷವಾದ ಉಪಕರಣಗಳು ಇದ್ದು ಇದನ್ನು ದರ್ಶನ್ (Drive) ಮಾಡುತ್ತಿದ್ದರೆ ಅಭಿಮಾನಿಗಳಿಗೆ ನೋಡಲು ಎರಡು ಕಣ್ಣುಗಳು ಸಾಲದು ಸಿಂಹಾಸನದ ಮೇಲೆ ರಾಜ ಬಂದಂತಿರುತ್ತದೆ.

(Toyota Vellfire) ಈ ಕಾರಿನ ಬೆಲೆ ರೂ.85 ಲಕ್ಷ ರೂಪಾಯಿ ಇದನ್ನು ದರ್ಶನ್ ಒಂದು ಊರಿಂದ ಮತ್ತೊಂದು ಊರಿಗೆ ಪ್ರಯಾಣ ಬಳಸಬೇಕಾದರೆ ಹೆಚ್ಚು ಉಪಯೋಗಿಸುತ್ತಾರೆ. ಇನ್ನು (darshan) ಅವರ ಹುಟ್ಟುಹಬ್ಬಕ್ಕೆ ಪತ್ನಿ ವಿಜಯ್ ಲಕ್ಷ್ಮಿ (Jaguar Xk) ಕಾರು ಒಂದನ್ನು ಉಡುಗೊರೆಯನ್ನಾಗಿ ನೀಡಿದರು. ಇದರ ಬೆಲೆ 85 ಲಕ್ಷ ರೂಪಾಯಿ. ದರ್ಶನ್ ಅವರ ಬಳಿ 75 ಲಕ್ಷದ (Ford Mustang) ಹಾಗೂ (Lamborghini Urus) ಈ ಒಂದು ಕಾರಿನ ಬೆಲೆ ಬರೋಬ್ಬರಿ 3 ಕೋಟಿ.

Darshan thoogudeepa car collection
Darshan thoogudeepa car collection

ಇನ್ನು ಪ್ರೊಡ್ಯೂಸರ್ ಸಂದೇಶ್ ನಾಗರಾಜ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಪಂಶ್ ಕಿಯ್ರನ್ ಕಾರು ಒಂದನ್ನು ಉಡುಗೊರೆಯನ್ನಾಗಿ ನೀಡಿದರು, ಇದು ಒಂದುವರೆ ಕೋಟಿ ರೂಪಾಯಿ. ಇನ್ನೂ ದರ್ಶನವರ ಬಳಿ ಎರಡು ಕೋಟಿ 75 ಲಕ್ಷ ರೂಪಾಯಿಯ (range rover) ಕಾರ್ ಕೂಡ ಇದೆ. ಇನ್ನು ದರ್ಶನ್ ಅವರ ಬಳಿ 38 ಲಕ್ಷ ರೂಪಾಯಿಗಳು (Toyota Fortuner) ಹಾಗೂ ಮಿನಿ ಕೂಪರ್ ಇವೆರಡು ದರ್ಶನ ಅವರ ಬಳಿ ಇರುವ ಅತ್ಯಂತ ಕಡಿಮೆ ಬೆಲೆಯ ಕಾರುಗಳು. (ಇದನ್ನು ಓದಿ) Chikkanna Marriage : ಮದುವೆ ಖುಷಿಯಲ್ಲಿ ಕಾಮಿಡಿ ಸ್ಟಾರ್ ಚಿಕ್ಕಣ್ಣ! ಸದ್ಯದಲ್ಲೇ ಮದುವೆ, ಹುಡುಗಿ ಯಾರೂ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

ಇನ್ನು 42 ಲಕ್ಷ ರೂಪಾಯಿಯ (Ford endeavour)  ಕಾರನ್ನು ಸಹ ದರ್ಶನ್ ಹೊಂದಿದ್ದಾರೆ. ವ್ಯಂಗ್ಲರ್ ಜಿಪ್ ಇದರ ಬೆಲೆ 52 ಲಕ್ಷ ರೂಪಾಯಿ, ಅದರಂತೆ (BMW 5 Series 520D M Sport) ಇದರ ಬೆಲೆ ಬರೋಬ್ಬರಿ 68 ಲಕ್ಷ ರೂಪಾಯಿ ಇನ್ನೂ ದರ್ಶನ್ ಅವರ ಬಳಿ ಬಿಳಿ ಹಾಗೂ ಕಪ್ಪು ಬಣ್ಣದ ಎರಡು (Audi Q7) ಕಾರುಗಳು ಇದ್ದು, ಒಂದು (darshan) ಬಳಸಿದರೆ ಮತ್ತೊಂದು ಕಾರನ್ನು ಪತ್ನಿ ವಿಷಯ ಲಕ್ಷ್ಮಿ ಬಳಸುತ್ತಾರೆ. ಇದರ ಬೆಲೆಯು 68 ಲಕ್ಷದ 52 ಸಾವಿರ ರೂಪಾಯಿ. ಹೀಗೆ ಒಟ್ಟು ಲೆಕ್ಕಾಚಾರ ಹಾಕಿ ನೋಡಿದರೆ ದರ್ಶನ್ ಅವರ ಬಳಿ 100 ಕೋಟಿ ಅಧಿಕ ಕಾರ್ ಕಲೆಕ್ಷನ್ ಇದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *