ಕಾಂತರ ಸಿನಿಮಾದ ನಂತರ ದಕ್ಷಿಣ ಕನ್ನಡದಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ, ದೈವರಾದನೆ ದೈವ ನರ್ತನ ಇನ್ನಷ್ಟು ಬೆಳಕಿಗೆ ಬಂದಿದೆ. ಈ ಒಂದು ಅದ್ಭುತ ದೈವಾರಾಧನೆಯನ್ನು ನೋಡಲು ಬೇರೆ ಬೇರೆ ಸ್ಥಳದಿಂದಲೂ ಕೂಡ ಇಲ್ಲಿಗೆ ಜನ ಬರುತ್ತಾರೆ. ದಕ್ಷಿಣ ಕನ್ನಡ ಭಾಗದ ಜನ, ದೈವವನು ಹೆಚ್ಚಾಗಿ ನಂಬುತ್ತಾರೆ.
ಅದೇ ರೀತಿಯಾಗಿ ದೈವ, ಸುತ್ತಮುತ್ತಲ ಭಾಗದ ಜನರ ನೋವುಗಳನ್ನು ನಿವಾರಿಸಿಕೊಂಡು ಜನರಿಗೆ ಸಹಾಯ ಮಾಡಿಕೊಂಡು ಬಂದಿದೆ ಆದರೆ ಇತ್ತೀಚಿಗೆ ನಡೆದ ಒಂದು ಘಟನೆ ನಿಜಕ್ಕೂ ಶಾಕ್ ನೀಡುತ್ತೆ.ಒಂದು ಸುಂದರವಾದ ಮಹಿಳೆಗೆ ಮದುವೆ ಆಗಿರಲಿಲ್ಲ ಹಾಗಾಗಿ ಆ ಸಮಸ್ಯೆಯನ್ನು ಕೇಳಿಕೊಂಡು ದೈವ ನರ್ತಕರ ಬಳಿ ಸಮಸ್ಯೆ ಪರಿಹಾರ ಕೇಳಿದ್ದಾಳೆ.
ಆ ಹುಡುಗಿಯ ಸಮಸ್ಯೆಯನ್ನು ಕೇಳಿದ ನರ್ತಕ ಹೇಳಿದ್ದೇನು ಗೊತ್ತಾ? ಒಬ್ಬ ವ್ಯಕ್ತಿಯ ಮೇಲೆ ಕೆಂಡದ ಮಾಸ್ತಿ ಆಹ್ವಾಹನೆ ಆಗಿರುತ್ತೆ. ಕೆಂಡದ ಮಾಸ್ತಿ ನುಡಿದಂತೆ ದೈವ ನರ್ತಕ ನುಡಿದಿದ್ದಾನೆ. ಈ ಬಾಲಕ ಕಳೆದ ಹತ್ತು ವರ್ಷಗಳಿಂದ ಹೆಂಡತಿಯನ್ನು ಕಳೆದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದಾನೆ. ಈಗ ಮದುವೆ ಆಗದ ಈ ಬಾಲಕಿಗೆ ಈ ಬಾಲಕನೆ ಸರಿಯಾದ ಜೋಡಿ ನಾನು ಕೆಂಡದ ಮಾಸ್ತಿಯಾಗಿ, ಕಾಳಿ, ದುರ್ಗೆಯ ಸ್ವರೂಪವಾಗಿ ಹೇಳುತ್ತಿದ್ದೇನೆ.
ಈ ಬಾಲಕನಿಗೆ ಈ ಬಾಲಕಿಯೇ ಸರಿಯಾದ ಜೋಡಿ ಇನ್ನು ಕೆಲವೇ ದಿನಗಳಲ್ಲಿ ಮಂತ್ರಾಲಯ ಅಥವಾ ಧರ್ಮಸ್ಥಳದಲ್ಲಿ ಇದೇ ಬಾಲಕನಿಂದ ಇದೇ ಬಾಲಕಿಯ ಕುತ್ತಿಗೆಗೆ ತಾಳಿ ಬೀಳುತ್ತೆ ಇದು ಸತ್ಯ ಇದು ಸತ್ಯ ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಎಂಬುದಾಗಿ ದೈವ ನರ್ತಕ ಹೇಳಿದ್ದಾನೆ. ಇನ್ನು ಕೆಲವರು ಇದು ಕೆಂಡದ ಮಾಸ್ತಿಯೇ ನುಡಿಸಿದ ಮಾತು ಎಂದು ಹೇಳಿದರೆ ಕೆಲವರು ಇಲ್ಲಿ ಏನೋ ಸಮಸ್ಯೆ ಇದೆ ಎಂದು ಕಮೆಂಟ್ ಮಾಡಿದ್ದಾರೆ.