PhotoGrid Site 1672720979622

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್! ಇವರೇ ನೋಡಿ ಹಾಸ್ಯ ನಟನ ಮನಗೆದ್ದ ಹುಡುಗಿ!!

News

Hithesh Kapinadka: ಕಾಮಿಡಿ ಕಿಲಾಡಿ(Comedy Khiladigalu) )ಗಳು ವೇದಿಕೆಯಲ್ಲಿ ಈಗಾಗಲೇ ಸಾಕಷ್ಟು ಪ್ರತಿಭೆಗಳನ್ನು ನೀವು ನೋಡಿರಬಹುದು. ನಗಿಸುವುದು ಅಷ್ಟು ಸುಲಭವಾದ ಕಲೆ ಅಲ್ಲ ನಿಜ ಹೇಳಬೇಕು ಅಂದ್ರೆ ಒಬ್ಬ ಹೀರೋ (Hero) ಆಗಿಯಾದರೂ ಕೆಲಸ ಮಾಡಬಹುದು. ಆದರೆ ಒಬ್ಬ ಕಾಮಿಡಿಯನ್ (Comedian) ಆಗಿ ಜನರ ಮೆಚ್ಚುಗೆ ಗಳಿಸಿಕೊಳ್ಳುವುದು ಬಹಳ ಕಷ್ಟ ಆದರೆ ಈ ವಿಷಯದಲ್ಲಿ ಕೆಲವರು ಸಕ್ಸಸ್ (Success) ಆಗುತ್ತಾರೆ.

ಅದರಲ್ಲೂ ಕನ್ನಡದ ಕೆಲವು ರಿಯಾಲಿಟಿ ಶೋಗಳು ಕಾಮಿಡಿ ಶೋ ನಡೆಸುವುದರ ಮೂಲಕ ಹಲವು ಪ್ರತಿಭೆಗಳ ಅನಾವರಣ ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೇ ಪ್ಯಾಕು ಪ್ಯಕೂ ಹಿಂದಿ ಫೇಮಸ್ ಆಗಿರುವ ಹಿತೇಶ್ ಕುಮಾರ್ ಕಾಪಿನಡ್ಕ (Hitesh Kumar Kapinadka) ಇದೀಗ ಮದುವೆ (Marriage)ಯ ಸಂಭ್ರಮದಲ್ಲಿದ್ದಾರೆ.

ಹೌದು ಹಾಸ್ಯಗಾರ ಹಿತೇಶ್ ಕುಮಾರ್ ಕಾಪಿನಡ್ಕ ಅವರು ತಮ್ಮ ಬಹುಕಾಲದ ಗೆಳತಿ ಸ್ವಾತಿ (Swati)) ಅವರ ಜೊತೆಗೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿತೇಶ್ ವೀಕ್ಷಕರ ಮನಗೆದ್ದವರು. ಪ್ಯಾಕು ಪ್ಯಾಕು ಎನ್ನುತ್ತಾ ವೀಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿದವರು ಹಿತೇಶ್ ಕಾಫಿನಡ್ಕ. ಹಿತೇಶ್ ಅವರು ಕರಾವಳಿಯ ಪ್ರತಿಭೆ. ಇದೀಗ ಪ್ರೀತಿಸಿದ ಹುಡುಗಿಯ ಜೊತೆ ಹಿತೇಶ್ ಕಾಪಿನಡ್ಕ ಅವರು ಹಸೆಮಣೆ ಏರಿದ್ದಾರೆ.

ಹಿತೇಶ್ ಕಾಪಿನಡ್ಕ ಅವರ ಮನಗೆದ್ದ ಆ ಹುಡುಗಿ ಯಾರು ಗೊತ್ತಾ? ಹಿತೇಶ್ ಕುಮಾರ್ ಕಾಪಿ ಡ್ಕ ಅವರು ಬಹುಕಾಲದ ಗೆಳತಿ ಸ್ವಾತಿ ಅವರ ಜೊತೆಗೆ ಮದುವೆಯಾಗಿದ್ದಾರೆ ಅದ್ದೂರಿಯಾಗಿ ಸಾಂಪ್ರದಾಯಿಕವಾಗಿ ಹಿತೇಶ್ ಹಾಗೂ ಸ್ವಾತಿಯವರ ಮದುವೆ ಗುರು ಹಿರಿಯರ ಸಮ್ಮುಖದಲ್ಲಿ ನಡೆದಿದೆ. ಕುಟುಂಬಸ್ಥರು ಆಪ್ತರು ಹಾಗೂ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಮಿಂಚಿದ ಹಲವು ಹಿತೇಶ್ ಸ್ನೇಹಿತರು ಈ ಮದುವೆಗೆ ಸಾಕ್ಷಿಯಾಗಿದ್ದಾರೆ.

ಹಿತೇಶ್ ಪ್ರೇಮ್ ಕಹಾನಿ: ಹಿತೇಶ್ ಹಾಗು ಸ್ವಾತಿ ಇಬ್ಬರೂ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ಒಂದೇ ಗ್ರಾಮದವರು ಕೂಡ ಹೌದು. ದೇವಸ್ಥಾನ ಒಂದರಲ್ಲಿ ಸ್ವಾತಿಯವರನ್ನು ಮೊದಲು ನೋಡಿದರಂತೆ ಹಿತೇಶ್. ನಂತರ ಇಬ್ಬರ ಪರಿಚಯವಾಗಿ ಅಲ್ಲಿ ಸ್ನೇಹ ಆರಂಭವಾಗಿದೆ ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಮನೆಯವರನ್ನ ಒಪ್ಪಿಸಿ ಇದೀಗ ಮದುವೆ ಎನ್ನುವ ಬಂದದ ಮೂಲಕ ಜಂಟಿ ಆಗಿದ್ದಾರೆ.

ಇನ್ನು ಕಳೆದ ವರ್ಷ 2021 ಡಿಸೆಂಬರ್ 19ರಂದು ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಅವರ ನಿಶ್ಚಿತಾರ್ಥ ನೆರವೇರಿತು. ಇದೀಗ ಬರೋಬ್ಬರಿ ಒಂದು ವರ್ಷದ ನಂತರ ಸ್ವಾತಿ ಹಾಗೂ ಹಿತೇಶ್ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಗುರುತಿಸಿಕೊಂಡ ನಂತರ ಹಿತೇಶ್ ಕುಮಾರ್ ಅವರಿಗೆ ಸಿನಿಮಾದಿಂದ ಆಫರ್ ಗಳು ಕೂಡ ಬರುತ್ತಿವೆ ಕಾಮಿಡಿ ಕಿಲಾಡಿಗಳು ಶೋನಲ್ಲಿ ಎರಡನೇ ರನ್ನರ್ ಆಫ್ ಆಗಿದ್ದರು.

ಶ್ರೀಕೃಷ್ಣನ ಮೇಲೆ ಮುಸ್ಲಿಂ ಯುವತಿಯ ಪ್ರೀತಿ! ಅಂತಿಂಥಾ ಪ್ರೀತಿ ಅಲ್ಲ ಸ್ವಾಮಿ, ಶ್ರೀಕೃಷ್ಣನಿಗೋಸ್ಕರ ಈಕೆ ಏನು ಮಾಡಿದ್ದಾಳೆ ನೋಡಿ!!

ಹಿತೇಶ್ ಅವರು ಲೇಡಿ ಗೆಟಪ್ ತೊಟ್ಟು ವೇದಿಕೆ ಮೇಲೆ ಬಂದರೆ ಜನ ನಗೆ ಕಡಲಲ್ಲಿ ತೇಲಾಡುತ್ತಿದ್ದರು. ಇನ್ನು ಹಿತೇಶ್ ಅವರು ಗೋವಿಂದೇಗೌಡ ನಿರ್ದೇಶನದ ಜಂತರ್ ಮಂತರ್, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ, ಮನೋರಂಜನ್ ರವಿಚಂದ್ರನ್ ಅವರ ಮುಗೀಲ್ ಪೇಟೆ, ಯಜಮಾನ ಮೊದಲಾದ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡರು.

Comedy Khiladigalu Hitesh
Comedy Khiladigalu Hitesh

ತುಳು ಸಿನಿಮಾಗಳಲ್ಲಿಯೂ ಕೂಡ ಹಿತೇಶ್ ಅವರು ಬಣ್ಣ ಹಚ್ಚಿದ್ದಾರೆ. ಒಟ್ಟಿನಲ್ಲಿ ಒಬ್ಬ ಉತ್ತಮ ಕಾಮೆಡಿಯನ್ ಆಗಿರುವ ಹಿತೇಶ್ ಕುಮಾರ್ ಕಾಪಿನಡ್ಕ ಸಿನಿಮಾಗಳಲ್ಲಿ ಇನ್ನಷ್ಟು ಅವಕಾಶಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಇದೀಗ ವೈವಾಹಿಕ ಜೀವನ ಆರಂಭಿಸಿದ್ದು ಜೀವನ ಸುಖಕರವಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Leave a Reply

Your email address will not be published. Required fields are marked *