PhotoGrid Site 1662445206900

ಜಲಪಾತದ ಎದುರು ಹಾಟ್ ಪೋಸ್ ಕೊಟ್ಟ ಕಮಲಿ ಸೀರಿಯಲ್ ನಟಿ ಅಮೂಲ್ಯ ಗೌಡ! ಜಲಪಾತ ನೋಡಲು ಬಂದವರು ನಟಿಯನ್ನ ನೋಡುತ್ತ ನಿಂತ ವಿಡಿಯೋ ವೈರಲ್!!

ಸುದ್ದಿ

ಧರಿಸುವುದು ಲಂಗ ದಾವಣಿ ಅಥವಾ ಸೀರೆ, ಅದಕ್ಕೆ ಒಪ್ಪುವ 2 ಜಡೆ ಜೊತೆಗೆ ಮಾತನಾಡುವ ಹಳ್ಳಿಯ ಸೊಗಡಿನ ಭಾಷೆ. ಕಮಲಿ ಧಾರಾವಾಹಿ ಜನರಿಗೆ ಇಷ್ಟವಾಗಿದ್ದು ಅದರಲ್ಲಿರುವ ಕಮಲಿ ಪಾತ್ರದಾರಿಯ ಈ ಗೆಟಪ್ ಗೆ! ಜನರನ್ನ ಕಳೆದ ಕೆಲವು ವರ್ಷಗಳಿಂದ ರಂಜಿಸುತ್ತಿರುವ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿ ಜನರಿಗೆ ಅತ್ಯಂತ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿದೆ. ಅದರಲ್ಲೂ ಈ ಧಾರಾವಾಹಿಯ ಕಮಲಿ ಪಾತ್ರ ಜನರ ಮನಸ್ಸು ಸೊರೆಗೊಂಡಿದೆ.

ಹೌದು, ಕಮಲಿ ಪಾತ್ರದ ಮೂಲಕವೇ ಕನ್ನಡಿಗರಿಗೆ ಹೆಚ್ಚು ಚಿರಪರಿಚಿತವಾದ ನಟಿ ಅಮೂಲ್ಯ ಓಂಕಾರ್ ಗೌಡ. ಹಳ್ಳಿಯ ಹುಡುಗಿಯಾಗಿ ಹಳ್ಳಿಯ ಸೊಗಡಿನಲ್ಲಿ ಮಿಂಚುತ್ತಿರುವ ಅಮೂಲ್ಯ ಗೌಡ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಮಾಡರ್ನ್. ಅವರ ಪಾತ್ರಕ್ಕೂ ಹಾಗೂ ಅವರು ನಿಜ ಜೀವನದಲ್ಲಿ ಇರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಅಮೂಲ್ಯ ಗೌಡ ಅವರ ಇನ್ಸ್ಟಾಗ್ರಾಮ್ ಪೇಜ್ ನೋಡಿದ್ರೆ ನೀವು ನಿಜಕ್ಕೂ ದಂಗೆ ಬಿಡುತ್ತೀರಿ ಯಾಕಂದ್ರೆ ಅಷ್ಟು ಹಾಟ್ ಲುಕ್ ಇರುವ ಫೋಟೋಶೂಟ್ಗಳನ್ನ ಮಾಡಿಸುತ್ತಾರೆ ನಟಿ ಅಮೂಲ್ಯ. ಕಮಲಿ ಧಾರಾವಾಹಿಯಲ್ಲಿ ಹಳ್ಳಿಯ ಹುಡುಗಿಯಾಗಿ ಪೇಟೆಗೆ ಬಂದು ತನ್ನ ಉತ್ತಮ ಗುಣದಿಂದಲೇ ಎಲ್ಲರ ಮನಸ್ಸನ್ನು ಗೆದ್ದವಳು ಕಮಲಿ. ತನಗೆ ಪಾಠ ಮಾಡುವ ಉಪನ್ಯಾಸಕರ ಮೇಲೆ ಪ್ರೀತಿಯಾಗಿ ಅವರನ್ನೇ ಮದುವೆಯಾಗಿ ಮದುವೆಯಾದ ನಂತರವೂ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಾಣುತ್ತಿರುವ ಕಮಲಿ, ಇಂದು ಕನ್ನಡಿಗರ ಮನೆಮಗಳಾಗಿಯೇ ಹೋಗಿದ್ದಾರೆ.

ನಟಿ ಅಮೂಲ್ಯ ಗೌಡ ಸದ್ಯಾ ತೆಲುಗು ಧಾರಾವಾಹಿಯಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ ಕಾರ್ತಿಕ ದೀಪಂ ಎನ್ನುವ ಧಾರಾವಾಹಿಯಲ್ಲಿ ಆಟೋ ಚಾಲಾಕಿಯಾಗಿ ಲೀಡ್ ರೋಲ್ಸ್ ನಿಭಾಯಿಸಿದ್ದಾರೆ ಅಮೂಲ್ಯ. ಸ್ವಾತಿ ಮುತ್ತು ಪುನರ್ ವಿವಾಹ ಅರಮನೆ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿ ಇದೀಗ ಕಮಲಿ ಧಾರಾವಾಹಿಯ ಮೂಲಕ ಕನ್ನಡ ಕಿರುತರೆ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಮೂಲ್ಯ ಗೌಡ ಅವರಿಗೆ ಪರಭಾಷಾ ಸಿನಿಮಾಗಳು ಕೂಡ ಆಫರ್ ಗಳು ಬರುತ್ತವೆಯಂತೆ.

ಆದರೆ ಧಾರಾವಾಹಿಯನ್ನು ಅರ್ಧದಲ್ಲಿಯೇ ಬಿಟ್ಟು ಯಾವುದೇ ಕಾರಣಕ್ಕೂ ಸಿನಿಮಾಕ್ಕೆ ಹೋಗುವುದಿಲ್ಲ ಅಂತ ಅಮೂಲ್ಯ ಈ ಹಿಂದೆಯೇ ಹೇಳಿದ್ದಾರೆ. ಆದರೆ ನಿಜ ಜೀವನದಲ್ಲಿ ಸಾಕಷ್ಟು ವಿಭಿನ್ನವಾಗಿರುವ ಕ್ಯಾರೆಕ್ಟರ್ ಹೊಂದಿರುವ ನಟಿ ಕಮಲಿ ತುಂಬಾ ಆಧುನಿಕ ಬಟ್ಟೆಗಳನ್ನು ಧರಿಸುತ್ತಾರೆ. ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿರುವ ನಟಿ ಅಮೂಲ್ಯ ಓಂಕಾರ ಗೌಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ರೀಲ್ ಗಳನ್ನು ಮಾಡಿ ಜನರನ್ನು ರಂಜಿಸುತ್ತಾರೆ.

ಇನ್ನು ಅಮೂಲ್ಯ ಗೌಡ ಅವರಿಗೆ ಅವರ ಕೂದಲು ಅಂದರೆ ಬಹಳ ಪ್ರೀತಿ. ನೀಲವಾದ ಕೂದಲನ್ನ ಹೊಂದಿರುವ ನಟಿ ಅಮೂಲ್ಯ ಆಗಾಗ ಬಿಚ್ಚಿದ ಕೂದಲಿನ ಉತ್ತಮ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇತ್ತೀಚಿಗೆ ಬ್ಲಾಕ್ ಶಾರ್ಟ್ ಡ್ರೆಸ್ ಧರಿಸಿ ಕೂದಲನ್ನ ಬಿಟ್ಟು ಜಲಪಾತದ ಎದುರು ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ. ಅದ್ನಾನ್ ಸಾಮಿಅವರ ಉಡಿ ಉಡಿ ಹಾಡು ಅಮೂಲ್ಯ ಅವರ ಈ ಫೋಸ್ ಗೆ ಸಖತ್ ಸೂಟ್ ಆಗುತ್ತಿದೆ.

ರಾಹುಲ್ ಪ್ರಿಯರು ಆಗಿರುವ ಅಮೂಲ್ಯ ಆಗಾಗ ಬೇರೆ ಬೇರೆ ಸ್ಥಳಕ್ಕೆ ಹೋಗಿ ಅಲ್ಲಿ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇದೀಗ ಅಮೂಲ್ಯ ಅವರ ಹ್ಯಾಪಿ ಹೇರ್ ಹ್ಯಾಪಿ ಲೈಫ್ ಎಂದು ಟ್ಯಾಗ್ ಲೈನ್ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ. ನೀವು ಕೂಡ ಅಮೂಲ್ಯ ಓಂಕಾರ ಗೌಡ ಅವರ ಅಫೀಶಿಯಲ್ ಖಾತೆಯಲ್ಲಿ ಅವರ ಇನ್ನಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಎಂಜಾಯ್ ಮಾಡಬಹುದು.

Leave a Reply

Your email address will not be published. Required fields are marked *