ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರ ಪಾಳ್ಯ ಎನ್ನುವ ಸ್ಥಳದ ನಿವಾಸಿಯಾಗಿದ್ದ ನಾಗೇಂದ್ರ ಎನ್ನುವ ವ್ಯಕ್ತಿ ಎಸೆದಿರುವ ಕೃ-ತ್ಯ ಇದು. ಆತ ಹೀಗೆ ತನ್ನ ಸ್ವಂತ ಹೆಂಡತಿ ಮಕ್ಕಳ ಜೀವ ಬಲಿ ತೆಗೆದುಕೊಂಡು ತಾನು ಕೂಡ ಪ್ರಾಣ ತೆಗೆದುಕೊಳ್ಳಲು ಹೊರಟಿದ್ದರ ಹಿಂದಿನ ಕಾರಣ ಏನು ಗೊತ್ತಾ.
ನಾಗೇಂದ್ರ ಕುಡಿತದ ದೊಡ್ಡ ದಾಸನಾಗಿದ್ದ. ಆತನಿಗೆ ಕುಡಿತ ಇಲ್ಲದೆ ಇದ್ದರೆ ಸಾಧ್ಯವೇ ಇರಲಿಲ್ಲ ಅದರ ಜೊತೆಗೆ ಆತನಿಗೆ ಕ್ಯಾನ್ಸ-ರ್ ಎನ್ನುವ ಮಹಾಮಾರಿ ಕೂಡ ಆವರಿಸಿಕೊಂಡಿತ್ತು. ಇದೆಲ್ಲದರ ನೋವು ಹಾಗೂ ಅತಿಯಾದ ಕುಡಿತದ ಚಟದಿಂದ ದಿನವೂ ಹೆಂಡತಿಯನ್ನು ದಂಡಿಸುತ್ತಿದ್ದ. ರಾತ್ರಿ ಕುಡಿದು ಬಂದು ಒಂದಲ್ಲ ಒಂದು ಕಾರಣಕ್ಕೆ ಹೆಂಡತಿಯ ಮೇಲೆ ದೌ-ರ್ಜ-ನ್ಯ ನಡೆಸುತ್ತಿದ್ದ.
ಆತನ ಪತ್ನಿ ವಿಜಯ ಅವನನ್ನ ಸುಧಾರಿಸಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಕೊನೆಗೆ ಆಗಾಗ ಗಂಡನ ಕಿ-ರು-ಕು-ಳ ತಡೆಯಲಾಗದೆ ತಾಯಿಯ ಮನೆಗೆ ಹೋಗುತ್ತಿದ್ದಳು. ಆದರೆ ಮಗಳು ಪ್ರತಿ ಬಾರಿ ಹೀಗೆ ಗಂಡನ ಜೊತೆ ಜಗಳವಾಡಿ ಬಂದಾಗ ತಾಯಿ ಅವಳ ಮನವೊಲಿಸಿ ಗಂಡನ ಮನೆಗೆ ಮತ್ತೆ ಕಳುಹಿಸುತ್ತಿದ್ದಳು.
ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ತನ ಇಬ್ಬರು ಹೆಣ್ಣು ಮಕ್ಕಳಾದ ದೀಕ್ಷಾ ಹಾಗೂ ನಿಶಾ ಇಬ್ಬರ ಭವಿಷ್ಯಕ್ಕಾಗಿ ವಿಜಯ ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ಎಂದಿನಂತೆ ಯಥಾ ಪ್ರಕಾರ ಕುಡಿದು ಮನೆಗೆ ಬಂದು ನಾಗೇಂದ್ರ ಗಲಾಟೆ ಮಾಡಿದ್ದಾನೆ. ಕಡೆಗೆ ಹೆಂಡತಿ ಹಾಗೂ ಮಕ್ಕಳು ಸೇವಿಸುವ ಆಹಾರದಲ್ಲಿ ಕ್ರಿ-ಮಿನಾಶಕವನ್ನು ಬೆರೆಸಿ ತಿನ್ನಲು ಕೊಟ್ಟಿದ್ದಾನೆ. ಇದನ್ನು ಸೇವಿಸಿದ ವಿಜಯ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಮೃ-ತರಾಗಿದ್ದಾರೆ.
ಹೆಂಡತಿ ಹಾಗೂ ಮಕ್ಕಳಿಗೆ ವಿಷ ಕೊಟ್ಟಿದ್ದು ಮಾತ್ರವಲ್ಲದೆ ನಾಗೇಂದ್ರ ಕೂಡ ವಿಷ ಸೇವಿಸಿ ಕೊನೆಗೆ ನೇಣು ಹಾಕಿಕೊಂಡು ಆ-ತ್ಮ-ಹ-ತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಅದೃಷ್ಟವೂ ದುರಾದೃಷ್ಟವೋ ಗೊತ್ತಿಲ್ಲ ಆತ ಬದುಕುಳಿತಿದ್ದಾನೆ. ಇದೀಗ ಸಾ-ವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿರುವ ನಾಗೇಂದ್ರ ಹಾಗೂ ಈ ಕೇಸ್ ಗೆ ಸಂಬಂಧಪಟ್ಟ ಹಾಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾಗೇಂದ್ರ ಚೇತರಿಕೆ ಕಂಡ ನಂತರ ಪೊಲೀಸರು ವಿಚಾರಣೆ ಮುಂದುವರಿಸಲಿದ್ದಾರೆ. ಇನ್ನು ನಾಗೇಂದ್ರ ಹೆಂಡತಿ ಹಾಗೂ ಮಕ್ಕಳನ್ನ ಸಾ-ಯಿ-ಸಲು ಬಯಸಿದ್ದ ಕ್ರಿಮಿನಾಶಕ ಯಾವುದು ಎಂಬುದು ಗೊತ್ತಾಗಿಲ್ಲ ಈಗಾಗಲೇ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಫಲಿತಾಂಶಕ್ಕಾಗಿ ಪೊಲೀಸರು ನಿರೀಕ್ಷಿಸುತ್ತಿದ್ದಾರೆ.