PV Sindhu: ಇದು Reels ಯುಗ ಅಂತ ಹೇಳಿದ್ರೂ ತಪ್ಪಾಗಲ್ಲ. ಜನರು ತಮ್ಮ ಆಫೀಸ್ ಕೆಲ್ಸ, ಅಥವಾ ಬೇರೆ ಯಾವುದೇ ಕೆಲ್ಸದಲ್ಲಿ ಅದೆಷ್ಟೇ ಬ್ಯುಸಿ ಇದ್ರೂ ಈ Social media ದಲ್ಲಿ Top ನಲ್ಲಿರುವ reels ಅನ್ನು ಬಳಸದೆ ಇರದವರೇ ಇಲ್ಲ. ಪ್ರತಿ ನಿಮಿಷಕ್ಕೊಮ್ಮೆಯಾದರೂ ರೀಲ್ಸ್ ಓಪನ್ ಮಾಡಿ ನೋಡುತ್ತಾರೆ, ಇನ್ನು ಹಲವಾರು ಮಂದಿ ಫ್ರೀ ಆದಾಗ ಏನಾದರೂ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ಯಾರೆ. ಹೀಗೆ ರೀಲ್ಸ್ ಎಲ್ಲರಿಗೂ ಮೋಡಿ ಮಾಡಿರುವ ಸಮಯದಲ್ಲಿ ಇದೀಗ ರೀಲ್ಸ್ ಓಪನ್ ಮಾಡಿದರೆ ಸಾಕು ಬರುವ ಒಂದು ಹಾಡೆಂದರೆ ಕಚ್ಚಾ ಬಾದಮ್. (Badminton player)
ಸಾಮಾನ್ಯ ಜನರಿಂದ ಸಿನಿಮಾ ತಾರೆಯರು ಕೂಡ ಈ ಹಾಡಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡುತ್ತಿದ್ದಾರೆ. ಹೌದು, ಇದೀಗ ಕಚ್ಚಾ ಬಾದಾಮ್ ಹಾಡು ಗೊತ್ತಿಲ್ಲದವರೇ ಇಲ್ಲ. ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಕಚ್ಚಾ ಬಾದಾಮ್ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಈ ಹಾಡನ್ನು ಭುವನ್ ಬದ್ಯಕರ್ ಎಂಬುವವರು ಬೈಕ್‌ನಲ್ಲಿ ಶೇಂಗಾ ವನ್ನು ಊರು ಊರಿಗೆ ತೆರಳಿ ಅಲ್ಲಿನ ದೇವಸ್ಥಾನ, ಅಂಗಡಿಗಳಿಗೆ, ಜನರಿಗೆ ಮಾರುವಾಗ ಅವರು ಒಂದು ಹಾಡು ಹಾಡಿದ್ದರು. ಅದನ್ನೇ ಯಾರೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಅಷ್ಟೇ ಭುವನ್ ಅವರ ಅದೃಷ್ಟವೇ ಖುಲಾಯಿಸಿ ಬಿಟ್ಟಿತ್ತು.

ಅವರು ಜಗತ್ ಫೇಮಸ್ ಆಗಿ ಅವರ ಆ ಹಾಡು ಹಿಟ್ ಆಗಿ ಬಿಡ್ತು. ಎಲ್ಲರ ಫೆವರಿಟ್ ಹಾಡಾಗಿ ರೀಲ್ಸ್ ಆಗಿ ಅನೇಕರು ವಿಡಿಯೋ ಮಾಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ badminton ತಾರೆ PV Sindhu ಸಹ ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಳದಿ ಬಣ್ಣದ ಸೂಪರ್ ಆಗಿರುವ ಡ್ರೆಸ್ ಧರಿಸಿರುವ ಪಿ.ವಿ.ಸಿಂಧು ಸಖತಾಗಿಯೇ ಈ ಕಚ್ಚಾ ಬಾದಾಮ್ ಗೆ ರೀಲ್ಸ್ ಮಾಡಿದ್ದಾರೆ. ಈ ಮೂಲಕ ತಾನೂ ರೀಲ್ಸ್ ಮಾಡುವುದರಲ್ಲಿ ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಂಡಿದ್ದಾರೆ.
ಈ ವಿಡಿಯೋ ಈಗಾಗಲೇ ಮೂವತ್ತತು ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದ್ದು ಐದು ವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಇನ್ನು, ಈ ವಿಡಿಯೋ ನೋಡಿದ ನೆಟ್ಟಿಗರು, ಇದೊಂದು ಕ್ಯೂಟ್ ಡ್ಯಾನ್ಸ್ ಅಂತ ಕಮೆಂಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಅವರ ಕಚ್ಚಾ ಬಾದಮ್ ರೀಲ್ಸ್ ನೋಡಿ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.