PhotoGrid Site 1676628296519

ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವಾ? ಗಮನಿಸಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿ ಮಲಗಿ ಸಾಕು, ಹೆಂಡತಿ ಬಡಿದು ಎಬ್ಬಿಸಿದರೂ ನಿದ್ದೆ ಬರುತ್ತೆ ನೋಡಿ!!

ಸುದ್ದಿ

ಇತ್ತೀಚಿಗೆ ಸಾಕಷ್ಟು ಜನ ರಾತ್ರಿ ನಿದ್ದೆ ಬರುವುದಿಲ್ಲ ಎನ್ನುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇವಲ ವಯಸ್ಸಾದವರು ಮಾತ್ರವಲ್ಲ ಯುವ ಯುವತಿಯರು ಕೂಡ ಮಲಗಿದರೆ ಕೂಡಲೇ ನಿದ್ದೆ ಬರ್ತಿಲ್ಲವಲ್ಲಾ ಅಂತ ಯೋಚನೆ ಮಾಡುವ ಹಾಗಾಗಿದೆ. ಇದಕ್ಕೆ ಮುಖ್ಯ ಕಾರಣ ಏನು ಗೊತ್ತಾ? ನಮ್ಮ ಒತ್ತಡದ ಜೀವನ. ಇನ್ನು ಕೆಲವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ.

ಮನೆಯಲ್ಲಿ ಕಿರಿಕಿರಿ, ಸಂಸಾರದ ತಾಪತ್ರಯ ಹೀಗೆ ಮೊದಲಾದ ಕಾರಣಗಳಿಂದ ಮಲಗಿದ ಕೂಡಲೇ ನಿದ್ದೆ ಬಾರದ ಪರಿಸ್ಥಿತಿ ಇದೆ. ಆದರೆ ಈ ನಿದ್ರಾಹೀನತೆ ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ರಾತ್ರಿ ಮಲಗಿದ ಕೂಡಲೇ ನಿದ್ರೆ ಬರಬೇಕು ಅಂದ್ರೆ ಏನು ಮಾಡಬೇಕು ಈ ಕೆಲವು ಆರೋಗ್ಯಕರ ಆಯುರ್ವೇದಿಕ್ ಟಿಪ್ಸ್ (Ayurvedic Tips)ಅನುಸರಿಸಿ ನೋಡಿ ನಿಮಗೆ ಕೂಡಲೇ ಸುಖ ನಿದ್ದೆಗೆ ಜಾರುತ್ತೀರಿ.

ಎಳ್ಳೆಣ್ಣೆ ಮಸಾಜ್; ಮೊದಲನೇದಾಗಿ ರಾತ್ರಿ ಮಲಗುವುದಕ್ಕೂ ಮುನ್ನ ಕಾಲಿಗೆ ಚೆನ್ನಾಗಿ ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆ ಹಾಗೆ ಬಿಟ್ಟು ನಂತರ ಕಾಲನ್ನ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡ್ತಾ ಬಂದ್ರೆ ನಿದ್ದೆ ಸುಲಭವಾಗಿ ಬರುತ್ತೆ ನಿದ್ದೆ ಬರುವ ಹಾರ್ಮೋನ್ ಗಳು ತಕ್ಷಣಕ್ಕೆ ಆಕ್ಟಿವೇಟ್ ಆಗಿ ನಿದ್ದೆ ಬರುತ್ತದೆ.

ಹಾಲು-ಜೇನು: ನಿದ್ದೆ ಬಾರದ ಸಮಸ್ಯೆಯಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿ (Milk)ಗೆ ಒಂದು ಚಮಚದಷ್ಟು ಜೇನುತುಪ್ಪ (Honey) ವನ್ನು ಸೇರಿಸಿಕೊಂಡು ಕುಡಿದು ಮಲಗಿ. ಇದರಿಂದ ನಿದ್ದೆ ಸುಲಭವಾಗಿ ಬರುತ್ತದೆ. ಹಾಲಿನಲ್ಲಿರುವ ಟ್ರಿಫ್ಟೋಫ್ಯಾನ್ ನ್ನು ದೇಹ ಹೀರಿಕೊಳ್ಳಲು ಜೇನುತುಪ್ಪ ನೆರವಾಗುತ್ತದೆ. ಹಾಗಾಗಿ ದೇಹದಲ್ಲಿ ನಿದ್ರೆಗೆ ಸಂಬಂಧಪಟ್ಟ ಹಾರ್ಮೋನ್ ಬಿಡುಗಡೆಯಾಗುತ್ತದೆ.

ಬಾಳೆಹಣ್ಣು ಸೇವನೆ; ರಾತ್ರಿ ಮಲಗುವುದಕ್ಕೂ ಮೊದಲು ಒಂದು ಲೋಟ ಹಾಲು ಹಾಗೂ ಬಾಳೆಹಣ್ಣ (Banana) ನ್ನು ತಿಂದು ಮಲಗುವುದು ಒಳ್ಳೆಯದು. ಖನಿಜಗಳು, ಪೊಟ್ಯಾಶಿಯಂ, ಕ್ಯಾಲ್ಸಿಯಂ ಇನ್ನು ಹಲವಾರು ರೀತಿಯ ಪೋಷಕಾಂಶಗಳ ಆಗರವಾಗಿರುವ ಬಾಳೆಹಣ್ಣು ಎಲ್ಲಾ ಕಾಲದಲ್ಲಿಯೂ ಬೆಲೆಯಲ್ಲಿ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ ಹಾಗಾಗಿ ದಿನವೂ ಒಂದು ಸಣ್ಣ ಬಾಳೆಹಣ್ಣನ್ನು ಹಾಲಿನ ಜೊತೆಗೆ ಕುಡಿಯುವುದರ ಅಭ್ಯಾಸ ಮಾಡಿಕೊಳ್ಳಿ ಇದರಿಂದಲೂ ಕೂಡ ಸುಲಭವಾಗಿ ನಿದ್ದೆಗೆ ಜಾರಬಹುದು.

ಅರಿಶಿನದ ಹಾಲು; ರಾತ್ರಿ ನಿದ್ದೆ ಬರುತ್ತಿಲ್ಲ ಎನ್ನುವವರು ಇದನ್ನು ಒಮ್ಮೆ ಟ್ರೈ ಮಾಡಿ. ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕೆ ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ ಕುಡಿಯಿರಿ. ಅರಿಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಇದರಲ್ಲಿ ಇರುವಂತಹ ಹಲವಾರು ಆರೋಗ್ಯಕರ ಲಕ್ಷಣಗಳು ನಿದ್ದೆ ಬರುವ ಹಾರ್ಮೋನ್ ಆಕ್ಟಿವೇಟ್ ಮಾಡುವಲ್ಲಿಯೂ ಕೂಡ ಸಹಕಾರಿಯಾಗಿದೆ.

ಈ ಒಳ್ಳೆಯ ಅಭ್ಯಾಸಗಳ ಜೊತೆಗೆ ನಿಮ್ಮಲ್ಲಿ ಇರುವ ಕೆಟ್ಟ ಅಭ್ಯಾಸಗಳನ್ನು ಕೂಡ ಬಿಡಬೇಕು. ಮೊದಲನೆಯದಾಗಿ ಆಗಾಗ ಟೀ ಕಾಫಿ ಕುಡಿಯುವುದನ್ನು ಬಿಡಬೇಕು ಇದರಿಂದ ದೇಹಕ್ಕೆ ಹೆಚ್ಚು ಕೆಫೆನ್ ಅಂಶ ಸೇರುತ್ತದೆ. ಇದರಿಂದ ನಿದ್ರೆ ಬಾರದ ಸ್ಥಿತಿ ಉಂಟಾಗಬಹುದು. ಅದೇ ರೀತಿಯಾಗಿ ರಾತ್ರಿ ಲೇಟಾಗಿ ಊಟ ಮಾಡುವುದನ್ನ ತಪ್ಪಿಸಬೇಕು ಜೊತೆಗೆ ಎಣ್ಣೆಯಲ್ಲಿ ಕರಿದ ವಸ್ತುಗಳನ್ನು ತಿನ್ನುವುದನ್ನು ಕೂಡ ಬಿಡಬೇಕು ಇಲ್ಲವಾದರೆ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ.

ಸರಿಯಾಗಿ ನಾವು ತಿಂದ ಆಹಾರ ಜೀರ್ಣವಾಗದೆ ಇದ್ದಲ್ಲಿ ನಿದ್ದೆ ಬರುವುದು ಕೂಡ ವಿಳಂಬವಾಗುತ್ತದೆ. ಹಾಗಾಗಿ ನೀವು ಮಲಗುವುದಕ್ಕೆ ಹೋಗುವುದಕ್ಕೂ ಕನಿಷ್ಠ ಒಂದರಿಂದ ಎರಡು ಗಂಟೆ ಮೊದಲು ಊಟ ಮಾಡಬೇಕು. ಈ ರೀತಿಯ ಕೆಲವು ಒಳ್ಳೆಯ ಅಭ್ಯಾಸಗಳು ನಿಮಗೆ ಇರುವ ದೀರ್ಘಕಾಲದ ನಿದ್ರಾಹೀನ ಸಮಸ್ಯೆಯನ್ನು ಕೂಡ ಸುಲಭವಾಗಿ ನಿವಾರಿಸಬಲ್ಲದು

Leave a Reply

Your email address will not be published. Required fields are marked *