ಸ್ಯಾಂಡಲ್ ವುಡ್ (Sandalwood) ನಲ್ಲಿ ಇತ್ತೀಚಿಗೆ ಹೊಸ ಮುಖಗಳಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಒಂದು ಸಿನಿಮಾದಲ್ಲಿ ಹಿಟ್ ಆದ್ರೂ ಸಾಕು, ಅವರ ಹವಾ ಬದಲಾಗಿ ಹೋಗುತ್ತೆ. ಸದ್ಯ ಚಂದನವನದ ಚಂದನದ ಗೊಂಬೆ ಅಂದ್ರೆ ಅದು ಆಶಿಕಾ ರಂಗನಾಥ್. ನೋಡೊದಕ್ಕೆ ಬಹಳ ಮುದ್ದಾಗಿರುವ ಆಶಿಕಾ ರಂಗನಾಥ್ ಕನ್ನಡದ ಉದಯೋನ್ಮುಖ ನಟಿ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಸಿನಿಮಾ (Film) ಗಳಲ್ಲಿ ನಟಿಸುತ್ತಿರುವ ಅಶಿಕಾ ಕರ್ನಾಟಕದ ಕ್ರಷ್ (Crush) ಆಗಿದ್ದಾರೆ.
ಮುದ್ದಾದ ಅಶಿಕಾ ಸದ್ಯ ಕನ್ನಡದಲ್ಲಿ ಇರುವ ಟಾಪ್ ನಟಿ (Top Actress) ಯರಲ್ಲಿ ಒಬ್ಬರು. ಅಶಿಕಾ ರಂಗನಾಥ್ ಅವರಿಗೂ ಮೊದಲೇ ಅವರ ಸಹೋದರಿ ಅನುಷಾ ರಂಗನಾಥ್ (Anusha ranganath) ಆಕ್ಟಿಂಗ್ ಫೀಲ್ಡ್ ಗೆ ಇಳಿದವರು. ಧಾರಾವಾಹಿಯ ಮೂಲಕ ವೃತ್ತಿ ಆರಂಭಿಸಿದರು. ಇದೀಗ ಅಕ್ಕಾ ತಂಗಿ ಇಬ್ಬರೂ ಕನ್ನಡಿಗರ ಮೆಚ್ಚಿನ ನಟಿಯರು ಎನಿಸಿದ್ದಾರೆ.
ನಟಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್. ಬಹಳ ಪ್ರತಿಭಾನ್ವಿತ ನಟಿ ಆಗಿರುವ ಆಶಿಕಾ 2014ರಲ್ಲಿ ‘ ಕ್ಲೀನ್ ಎಂಡ್ ಕ್ಲಿಯರ್ ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ವನ್ನೂ ಕೂಡ ಗಳಿಸಿದ್ದರು. 2016ದಲ್ಲಿ ಕ್ರೇಜಿ ಬಾಯ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ತೆರೆದುಕೊಂಡರು. ನಿರ್ದೇಶಕ ಮಹೇಶ್ ಬಾಬು ಆಶಿಕಾ ರಂಗನಾಥ್ ಅವರಿಗೆ ಮೊದಲು ಅವಕಾಶ ನೀಡಿದರು.
ಅಲ್ಲಿಂದ ಆಶಿಕಾ ಅವರಿಗೆ ಅವಕಾಶಗಳು ಬರಲು ಆರಂಭವಾದವು. ಆಶಿಕಾ ರಂಗನಾಥ್ ಜನಿಸಿದ್ದು ಆಗಸ್ಟ್ 5, 1996ರಲ್ಲಿ ಹಾಸನದಲ್ಲಿ. ಇವರ ತಂದೆ ರಂಗನಾಥ್ ಹಾಗೂ ತಾಯಿ ಸುಧಾ. ರಂಗನಾಥ್ ಅವರು ಸಿವಿಲ್ ಕಾಂಟ್ರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಜನರ ಮನಸ್ಸನ್ನ ಕದ್ದ ಆಶಿಕಾ, ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ, ಕಾಣೆಯಾದವರ ಬಗ್ಗೆ ಪ್ರಕಟಣೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶರಣ್ ಅಭಿನಯದ ರಾಂಬೊ ಸಿನಿಮಾದಿಂದ ಆಶಿಕಾ ಅವರ ದೆಸೆಯೇ ಬದಲಾಗಿ ಹೋಯ್ತು. ಶರಣ್ ಹಾಗೂ ಆಶಿಕಾ ಅವರ ಕಾಂಬಿನೇಶನ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಹಾಗಾಗಿ ಆಶಿಕಾರಿಗೆ ಸಾಕಷ್ಟು ಅವಕಾಶಗಳೂ ಅರಸಿ ಬಂದಿವೆ. ಇನ್ನು ನಟಿ ಆಶಿಕಾ ರಂಗನಾಥ್ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆಶಿಕಾ ರಂಗನಾಥ್ ಅವರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.6 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಅವರು ಶೇರ್ ಮಾಡುವ ಫೋಟೊಗಳು ಅಭಿಮಾನಿಗಳ ಊಟ ನಿದ್ದೆ ಹಸಿದುಕೊಳ್ಳುತ್ತವೆ. ಇತ್ತೀಚಿಗೆ ಸಿಮಾ ಅವಾರ್ಡ್ 2022ರಲ್ಲಿ ಅಪ್ಪು ಹಾಡೊಂದಕ್ಕೆ ಆಶಿಕಾ ಎರ್ರಾಬಿರ್ರಿ ನೃತ್ಯ ಮಾಡಿದ್ದಾರೆ. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
View this post on Instagram