ಸ್ಯಾಂಡಲ್ ವುಡ್ ಮಿಲ್ಕಿ ಬ್ಯೂಟಿ ಅಶಿಕಾ ರಂಗನಾಥ್ ಯೋಗ ಮಾಡುತ್ತಿರುವ ವಿಡಿಯೋ ನೋಡಿ! ಯಾವ ಬಾಲಿವುಡ್ ನಟಿಯರಿಗೂ ಕಮ್ಮಿ ಇಲ್ಲ ನಮ್ಮೂರ ಹುಡ್ಗಿ ನೋಡಿ!!

ಸುದ್ದಿ

ಕರ್ನಾಟಕದ ಕ್ರಷ್, ಕನ್ನಡದ ಮಿಲ್ಕ್ ಬ್ಯೂಟಿ ನಟಿ ಆಶಿಕಾ ರಂಗನಾಥ್. ಈಗಾಗಲೇ ಸಾಕಷ್ಟು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ನಟಿ ಆಶಿಕಾ ರಂಗನಾಥ್ ಕನ್ನಡದ ಬಹುಬೇಡಿಕೆಯ ನಟಿ. ನೋಡಲು ತುಂಬಾನೇ ಮುದ್ದಾಗಿರುವ ಅಶಿಕಾ ರಂಗನಾಥ್ ಕನ್ನಡ ಮಾತ್ರವಲ್ಲದೇ ತೆಲಗು ಚಿತ್ರರಂಗ (Telugu Film Industry) ಕ್ಕೂ ಕೂಡ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಕನ್ನಡದಲ್ಲಿ ಇರುವ ಟಾಪ್ ನಟಿಯರಲ್ಲಿ ಒಬ್ಬರು ಅಶಿಕಾ ರಂಗನಾಥ್. ಅವರ ಸಹೋದರಿ ಅನುಷಾ (Anusha Ranganath) ಕೂಡ ಸಿನಿಮಾ ರಂಗದಲ್ಲಿಯೇ ವೃತ್ತಿ ಮಾಡುತ್ತಿದ್ದಾರೆ.

ಕನ್ನಡಿಗರ ಮೆಚ್ಚಿನ ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ ವುಡ್ (Sandalwood) ನ ಮಿಲ್ಕ್ ಬ್ಯೂಟಿ ಎಂದೇ ಕರೆಸಿಕೊಂಡಿದ್ದಾರೆ. ಬಹಳ ಮುದ್ದಾದ ಹಾಗೂ ಪ್ರತಿಭಾನ್ವಿತ ನಟಿ ಆಶಿಕಾ. ಇಂದು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ 2014ರಲ್ಲಿ ‘ ಕ್ಲೀನ್ ಎಂಡ್ ಕ್ಲಿಯರ್ (Clean and clear) ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ ಅಪ್ (Runner up) ಆಗಿದ್ದವರು. ಇನ್ನು ಆಶಿಕಾ 2016ದಲ್ಲಿ ಕ್ರೇಜಿ ಬಾಯ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ರು. ನಿರ್ದೇಶಕ ಮಹೇಶ್ ಬಾಬು (Mahesh Babu) ಅವರು ಆಶಿಕಾ ರಂಗನಾಥ್ ಅವರನ್ನು ಇಂಡಸ್ಟ್ರಿಗೆ ಪರಿಚಯ ಮಾಡಿಸಿದವರು.

ಕನ್ನಡದ ಮುದ್ದಾದ ಚೆಲುವೆ ಆಶಿಕಾ ರಂಗನಾಥ್ ಹಾಸನದಲ್ಲಿ ಆಗಸ್ಟ್ 5, 1996ರಂದು ಜನಿಸಿದರು. ಇವರ ತಂದೆ ರಂಗನಾಥ್ ಹಾಗೂ ತಾಯಿ ಸುಧಾ. ರಂಗನಾಥ್ ಅವರು ಸಿವಿಲ್ ಕಾಂಟ್ರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಶಿಕಾ ರಂಗನಾಥ್ ಬೆಂಗಳೂರಿನಲ್ಲಿಯೇ (Bengaluru) ವಿದ್ಯಾಭ್ಯಾಸ ಮುಗಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಜನರ ಮನಸ್ಸನ್ನ ಕದ್ದ ಆಶಿಕಾ, ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ, ಕಾಣೆಯಾದವರ ಬಗ್ಗೆ ಪ್ರಕಟಣೆ ಮೊದಲಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಆಶಿಕಾ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿಟ್ತ ಸಿನಿಮಾ ರಾಂಬ್ಯೋ ಸರಣಿ ಚಿತ್ರಗಳು. ಈ ಸಿನಿಮಾದಲ್ಲಿ ಆಶಿಕಾ ಹಾಗೂ ಶರಣ್ ಅವರ ಕಾಂಬಿನೇಶನ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಇನ್ನು ಆಶಿಕಾ ಅವರ ಸಹೋದರಿ ಅನುಷಾ ಕೂಡ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಹೆಸರು ಗಳಿಸಿದವರು.

ನಟಿ ಆಶಿಕಾ ರಂಗನಾಥ್ ಕನ್ನಡದಲ್ಲಿ ಮಾತ್ರವಲ್ಲದೆ ಸೌತ್ ನ ಇತರ ಭಾಷಾ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಅವರು ತಮ್ಮ ಇನ್ಸ್ಟಾ (Instagram) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಂದಹಾಗೆ ಆಶಿಕಾ ಕೂಡ ಇತರ ಸೆಲಿಬ್ರೆಟಿಗಳಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.6 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದು, ಸಾಕಷ್ಟು ಪೊಟೋ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

ಆಶಿಕಾ ಅವರ ಅದ್ಭುತ ಫೊಟೋ ವಿಡಿಯೋಗಳು ಅವರ ವಾಲ್ ನಲ್ಲಿದ್ದು, ಅವುಗಳನ್ನು ನೋಡಿದ ಜನ ಮತ್ತೆ ಮತ್ತೆ ಆಶಿಕಾ ಅವರಿಗೆ ಫಿದಾ ಆಗುತ್ತಿದ್ದಾರೆ.ಇನ್ನು ಯೋಗ, ವ್ಯಾಯಾಮ ಎಲ್ಲವನ್ನೂ ತಪ್ಪದೇ ತಮ್ಮ ನಿತ್ಯದ ಜೀವನಕ್ರಮದಲ್ಲಿ ರೂಢಿಸಿಕೊಂಡಿರುವ ನಟಿ ಆಶಿಕಾ ಈಗಾಗಲೇ ಸಾಕಷ್ಟು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದೀಗ ಆಶಿಕಾ ಅವರ ಯೋಗ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Reply

Your email address will not be published. Required fields are marked *