ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೇಮ್ ಕಹಾನಿ ಗಳಿಗೇನೂ ಕಡಿಮೆ ಇಲ್ಲ ಕನ್ನಡ ಹಿಂದಿ, ತಮಿಳು, ತೆಲುಗು ಯಾವುದೇ ಸಿನಿಮಾ ಕ್ಷೇತ್ರವಾಗಿರಲಿ ಎಲ್ಲಾ ಕಲಾವಿದರ ನಡುವೆ ಒಂದಲ್ಲ ಒಂದು ರೀತಿಯ ಬಾಂಡಿಂಗ್ (Bonding) ಇರುತ್ತೆ ಅದನ್ನ ಕೆಲವರು ಪ್ರೀತಿ- ಪ್ರೇಮವಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಕೆಲವರು ಡೇಟಿಂಗ್ (dating) ಆರಂಭಿಸಿ ಕೊನೆಗೆ ದಾಂಪತ್ಯ ಜೀವನಕ್ಕೂ ಕಾಲಿಡುತ್ತಾರೆ ಆದರೆ ಕೆಲವರು ಹತ್ತಾರು ಜನರ ಜೊತೆ ಡೇಟಿಂಗ್ ಮಾತ್ರ ಮಾಡುತ್ತಾರೆ.
ಇದೀಗ ಬಾಲಿವುಡ್ ನಲ್ಲಿ ಸ್ಟಾರ್ ಕಿಡ್ (Star Kid) ಗಳ ಡೇಟಿಂಗ್ ವಿಚಾರ ತುಂಬಾನೇ ವೈರಲ್ (Viral) ಆಗುತ್ತಿದೆ. ಅದರಲ್ಲೂ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan), ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಜೊತೆ ಡೇಟಿಂಗ್ ನಲ್ಲಿ ಇರುವ ವಿಚಾರ ಬಿ ಟೌನ್ ತುಂಬಾ ಸುದ್ದಿ ಮಾಡಿದೆ. ಹೌದು ಇತ್ತೀಚೆಗೆ ಶಾರುಖ್ ಖಾನ್ ಅವರ ಪುತ್ರಿ ಸುಹಾನ ಖಾನ್ ತನ್ನ ಜೊತೆ ಆಕ್ಟ್ ಮಾಡಿದ ಅಮಿತಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ಬಚ್ಚನ್ (Agastya Bachhan) ಜೊತೆ ಡೇಟಿಂಗ್ ಮಾಡುವ ಸುದ್ದಿ ವೈರಲ್ ಆಗಿದೆ.
ಅದರ ಹಿನ್ನೆಲೆಯಲ್ಲಿಯೇ ಆರ್ಯನ್ ಖಾನ್ ಅವರ ಡೇಟಿಂಗ್ ವಿಚಾರ ಕೂಡ ಮೈನ್ ಸ್ಟ್ರೀಮ್ ಗೆ ಬಂದಿದೆ. ಇನ್ನು ಇತ್ತೀಚೆಗೆ ತನಗಿಂತ ವಯಸ್ಸಿನಲ್ಲಿ ದೊಡ್ಡವರಾದ ಹುಡುಗಿಯರನ್ನ ಸೆಲೆಬ್ರಿಟಿಗಳು ಪ್ರೀತಿಸುವುದು ಕಾಮನ್ ಆಗಿಬಿಟ್ಟಿದೆ. ಬಾಲಿವುಡ್ ನ ಸ್ಟಾರ್ ನಟಿ ತನಗಿಂತ ಐದು ವರ್ಷ ಚಿಕ್ಕ ವಯಸ್ಸಿನ ಆರ್ಯನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಹೌದು ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಯಾವ ಸಿನಿಮಾದಲ್ಲಿಯೂ ಅಭಿನಯಿಸುತ್ತಿಲ್ಲ. ಅವರಿಗೆ ತಂದೆಯಂತೆ ಮುನ್ನೆಲೆಗೆ ಬಂದು ಅಭಿನಯಿಸುವ ಆಸೆ ಇಲ್ಲವಂತೆ. ಬದಲಾಗಿ ಸಿನಿಮಾ ನಿರ್ದೇಶನ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕು ಎನ್ನುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಶಾರುಖ್ ಪಠಾಣ್ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದರೆ ಶಾರುಖ್ ಅವರ ಮಕ್ಕಳು ಕೂಡ ಡೇಟಿಂಗ್ ವಿಚಾರಕ್ಕೆ ಹೆಚ್ಚು ಸೌಂಡ್ ಮಾಡುತ್ತಿದ್ದಾರೆ.
ಪಠಾಣ್ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಶಾರುಖ್ ಖಾನ್ ಗೆ ಬ್ಯಾನ್ ಆಗುವ ಬಿಸಿ ತಟ್ಟಿದೆ. ಅವರು ತಲೆಕೆಡಿಸಿಕೊಂಡಿದ್ದರೆ ಇತ್ತ ಆರ್ಯನ್ ಮಾತ್ರ ಕೂಲ್ ಆಗಿ ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದಾನೆ ಇವರಿಬ್ಬರ ವಿಡಿಯೋಗಳು ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು ತನಗಿಂತ 5 ವರ್ಷ ದೊಡ್ಡವಳಾಗಿರುವ ನಟಿಯ ಜೊತೆ ಆರ್ಯನ್ ಖಾನ್ ಯಾಕೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಆಶ್ಚರ್ಯವಾಗಿದೆ. ಹಾಗಾಗಿ ಈ ಹಾಟ್ ಟಾಪಿಕ್ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವು ತಿಂಗಳ ಹಿಂದೆ ಡ್ರ-ಗ್ಸ್ ಪ್ರಕರಣದಲ್ಲಿ ಖುಲಾಸೆಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸತಿಯ ಡೇಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರಂತೆ. ಆರ್ಯನ್ ಖಾನ್ ಸುಮಾರು 25 ವರ್ಷದ ಯುವಕ.
30 ವರ್ಷದ ನೋರಾ ಫತೇಹಿ ಜೊತೆಗೆ ತಿರುಗಾಡುತ್ತಿದ್ದಾನೆ? ಅನೇಕ ಪಾರ್ಟಿಗಳಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ತಮ್ಮ ಡೇಟಿಂಗ್ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಡೇಟಿಂಗ್ ಕುರಿತಂತೆ ಸಾಕಷ್ಟು ಕಮೆಂಟ್ಗಳು ಕೂಡ ಬರುತ್ತವೆ. ನಟನೆ ಮಾಡೋದನ್ನ ಬಿಟ್ಟು ಡೇಟಿಂಗ್ ನಲ್ಲಿ ಬ್ಯುಸಿ ಆಗಿದ್ದಾನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ.