ಬಾಲಿವುಡ್ ನ ಬಾದ್ ಷಾ ಎಂದೆ ಹೆಸರು ಮಾಡಿರುವ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಮುಂಬೈ ಐಷಾರಾಮಿ ಹಡಗಿನಲ್ಲಿ ನಡೆದ ಡ್ರ-ಗ್ಸ್ ಪಾ-ರ್ಟಿ ಪ್ರ-ಕರಣ ಒಂದರಲ್ಲಿ ಆರ್ಯನ್ ಖಾನ್ ಸಿಲುಕಿಕೊಂಡಿದ್ದರು. ಇದೀಗ ಆ ಆರೋಪದಿಂದ ಆಚೆ ಬಂದ ಆರ್ಯನ್ ಇನ್ನೇನು ಸಿನಿಮಾದಲ್ಲಿ ನಟಿಸಬಹುದು ಎಂದು ಎಲ್ಲರೂ ಊಹಿಸಿದ್ದರು.
ಆದರೆ ಇದೀಗ ಎಲ್ಲರ ಊಹೆ ತಪ್ಪಾಗಿದೆ ಆರ್ಯನ್ ಸಿನಿಮಾಕ್ಕೆ ಎಂಟ್ರಿ ಕೊಡೋದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ ಯಾಕಂತೆ ಗೊತ್ತಾ? ತಂದೆ ತಾಯಿ ಅಥವಾ ಕುಟುಂಬದವರು ಯಾವ ವೃತ್ತಿ ಮಾಡುತ್ತಾರೋ ಅವರ ಮಕ್ಕಳು ಅದನ್ನೇ ಮುಂದುವರಿಸಿಕೊಂಡು ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ಡಾಕ್ಟರ್ ಮಕ್ಕಳು ಡಾಕ್ಟರೇ ಆಗುತ್ತಾರೆ, ರಾಜಕಾರಣಿ ಮಕ್ಕಳು ರಾಜಕೀಯಕ್ಕೆ ಇಳಿಯುತ್ತಾರೆ.ಅದೇ ರೀತಿ ಹೀರೋ ಮಕ್ಕಳು ಕೂಡ ಸಿನಿಮಾಕ್ಕೆ ಎಂಟ್ರಿ ಕೊಡುತ್ತಾರೆ.
ಅದರಲ್ಲೂ ಕರಣ್ ಜೋಹರ್ ನಂತಹ ಸೆಲೆಬ್ರಿಟಿ ನಿರ್ಮಾಪಕರು ಆರ್ಯನ್ ನಂತಹ ನವ ಪೀಳಿಗೆಯನ್ನು ಸಿನಿಮಾದಲ್ಲಿ ಲಾಂಚ್ ಮಾಡುತ್ತಾರೆ. ಹೌದು, ಬಾಲಿವುಡ್ ನಲ್ಲಿ ನೆಪೋಟಿಸಂಗೇನು ಕಡಿಮೆ ಇಲ್ಲ. ಸಾಮಾನ್ಯವಾಗಿ ಇಲ್ಲಿ ತಂದೆ ಅಥವಾ ತಾಯಿ ಸಿನಿಮಾದಲ್ಲಿ ಇದ್ರೆ ಮಕ್ಕಳು ಕೂಡ ಮುಂದೆ ಸಿನಿಮಾ ರಂಗ ಪ್ರವೇಶ ಮಾಡುತ್ತಾರೆ.
ಹಾಗಾಗಿ ಆರ್ಯನ್ ಖಾನ್ ಕೂಡ ಸದ್ಯದಲ್ಲೇ ಸಿನಿಮಾದಲ್ಲಿ ಲಾಂಚ್ ಆಗಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ಆರ್ಯನ್ ಅವರನ್ನು ಲಾಂಚ್ ಮಾಡೋದಕ್ಕೆ ಮುಂದಾಗಿದ್ರು. ಶಾರುಖ್ ಖಾನ್ ಫ್ಯಾಮಿಲಿ ಗೆ ತುಂಬಾ ಕ್ಲೋಸ್ ಇರುವ ಕಾರಣ ಜೋಹರ್ 25 ವರ್ಷದ ಆರ್ಯನ್ ನನ್ನು ಸದ್ಯದಲ್ಲೇ ಸಿನಿಮಾಕ್ಕೆ ಪರಿಚಯ ಮಾಡುತ್ತಾರೆ ಎನ್ನುವ ವದಂತಿ ಇತ್ತು.
ಆದರೆ ಆರ್ಯನ್ ಇದನ್ನ ರಿಜೆಕ್ಟ್ ಮಾಡಿದ್ದಾರೆ. ನಿರ್ದೇಶಕಿ ಜೋಯಾ ಅಖ್ತರ್ ಕೂಡ ಆರ್ಯನ್ ಗಾಗಿ ಒಂದು ಕಥೆ ಸಿದ್ಧಪಡಿಸಿಕೊಂಡಿದ್ದರಂತೆ. ಅವರ ದಿ ಆರ್ಚಿಸ್ ಎನ್ನುವ ಸಿನಿಮಾದಲ್ಲಿ ಆರ್ಯನ್ ಖಾನ್ ಕೂಡ ನಟಿಸಬೇಕಿತ್ತು. ಆದರೆ ಆರ್ಯನಿಗೆ ಇದು ಇಷ್ಟ ಇರಲಿಲ್ಲ. ಸುಹಾನಾ ಖಾನ್ ಕೂಡ ಡಿ ಆರ್ಚಿಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಅದೇನೇ ಇದ್ರೂ ಆರ್ಯನ್ ಮಾತ್ರ ತಾನು ಬಣ್ಣ ಹಚ್ಚಲ್ಲ ಅಂತ ಖಡಕ್ ಆಗಿ ಹೇಳಿದ್ದಾರೆ.
ಹಾಗಾದರೆ ಸಿನಿಮಾ ರಂಗದಿಂದ ಆರ್ಯನ್ ದೂರ ಇರ್ತಾರ ಎನ್ನುವುದು ಹಲವರ ಡೌಟ್. ಆದರೆ ಆರ್ಯನ್ ಖಾನ್ ನಟಿಸುವುದಿಲ್ಲ ಅಷ್ಟೇ. ಹಾಗಂತ ಸಿನಿಮಾ ರಂಗದಿಂದ ದೂರ ಉಳಿಯಲ್ಲ. ಈ ಹಿಂದೆ ಆರ್ಯನ್ ನಿರ್ದೇಶನ ಮಾಡಬೇಕು ಎನ್ನುವ ಬಯಕೆ ಇಟ್ಟುಕೊಂಡಿದ್ದಾನೆ ಚಿತ್ರಕಥೆ ಬರೆಯುವುದು, ನಿರ್ದೇಶನದ ಬಗ್ಗೆ ನಾಲ್ಕು ವರ್ಷಗಳ ಕಾಲ ತರಬೇತಿ ಪಡೆದಿದ್ದಾನೆ ಎಂದು ಶಾರುಖ್ ಖಾನ್ ಹೇಳಿದ್ರು. ಅದರಂತೆ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ನಿರ್ದೇಶನಕ್ಕೆ ಇಳಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕು.