ಸಿನಿಮಾ ಜಗತ್ತಿನಲ್ಲಿ ಇರುವವರು ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಹೆಚ್ಚಾಗಿ ಟ್ರೋಲ್ ಆಗೋದೇ ಹೆಚ್ವು. ಸಿನಿಮಾ ತಾರೆಯರು ಅಂದರೆ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಆಕ್ಟೀವ್ ಆಗಿರಲೇ ಬೇಕು. ಹಾಗಿದ್ದಾಗ ಮಾತ್ರ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಸಾಧ್ಯ.ಇತ್ತೀಚೆಗಂತೂ ಈ ಇನ್ಸ್ಟಾಗ್ರಾಂ, ಟ್ವಿಟರ್ ಗಳಲ್ಲಿ ಸೆಲೆಬ್ರಿಟಿಗಳು ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.
ತಮ್ಮ ಫೋಟೋಗಳನ್ನು, ಡ್ಯಾನ್ಸ್ ವಿಡಿಯೋ ಗಳನ್ನು, ವರ್ಕೌಟ್ ವಿಡಿಯೋಗಳನ್ನು, ಶೂಟಿಂಗ್ ಕ್ಲಿಪ್ ಗಳನ್ನು, ಪಾರ್ಟಿ ಕ್ಲಿಪ್ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅದರ ಜೊತೆ ಆಗಾಗ್ಗೆ ಅನೇಕ ನಟಿಯರು ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಈ ವೇಲೆ ಕೆಲ ಅಭಿಮಾನಿಗಳು ಪ್ರೀತಿಯಿಂದ ಕಾಮೆಂಟ್ ಮಾಡಿದರೆ ಇನ್ನು ಕೆಲವರು ತೀರಾ ಕೆಟ್ಟದಾಗಿ ಮೆಸೆಜ್ ಕಳುಹಿಸುತ್ತಾರೆ.
ಈಗಾಗಲೇ ಅನೇಕ ನಟಿಯರು ಇಂತಹ ಅವಹೇಳನಕಾರಿ ಕಾಮೆಂಟ್ ಗಳನ್ನು ಎದುರಿಸಿದ್ದಾರೆ. ಕೆಲವರು ಆ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗದೆ ಸುಮ್ಮನಿದ್ದರೆ, ಇನ್ನು ಕೆಲ ನಟಿಯರು ಮುಟ್ಟಿ ನೋಡುವಂತೆ ರಿಪ್ಲೈ ಕೊಡುತ್ತಾರೆ. ಇದೀಗ ಮಲಯಾಳಂ ಹಾಗೂ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಅನುಪಮಾ ಪರಮೇಶ್ವರನ್ ಕೂಡ ಇಂತಹ ಕೆಟ್ಟ ಪ್ರಶ್ನೆ ಎದುರಿಸಿದ್ದು, ಅದಕ್ಕೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ.
ಹೌದು ಕೇರಳ ಮೂಲದ ನಟಿ ಅನುಪಮಾ ಪರಮೇಶ್ವರನ್ ಅವರು ನಿವಿನ ಪೌಲಿ ಅಭಿನಯದ `ಪ್ರೇಮಂ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರದ ಮೇರಿ’ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.ಈ ಚಿತ್ರದ ನಂತರ ಮೂರು ತೆಲಗು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಇನ್ನು,2019 ರಲ್ಲಿ ಪವರಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ `ನಟಸಾರ್ವಭೌಮ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.
ಅನುಪಮಾ ಪರಮೇಶ್ವರನ್ ಅತೀ ಕಡಿಮೆ ಸಮಯದಲ್ಲಿ ಸಿಕ್ಕಾಪಟ್ಟೆ ಜನಪ್ರಿಯಗೊಂಡ ನಟಿ. ಇವರನ್ನು ಕನ್ನಡದ ಪ್ರೇಕ್ಷಕರು ಕೂಡ ಇಷ್ಟಪಟ್ಟಿದ್ದಾರೆ.. ಇಂತಹ ಖ್ಯಾತ ನಟಿ ಅನುಪಮಾ ಅವರು ಡ್ರೆಸ್ಸಿಂಗ್ ಸೆನ್ಸ್ ಎಲ್ಲರಿಗೂ ಇಷ್ಟ. ತುಂಬಾ ಚೆನ್ನಾಗಿ ಡ್ರೆಸ್ಸಿಂಗ್ ಹಾಗೂ ಸಾರಿ ಉಡುವ ಅನುಪಮಾ ಹೆಚ್ಚಾಗಿ ಸಾಂಪ್ರಾದಾಯಿಕ ಉಡುಗೆಯಲ್ಲಿಯೇ ಕಂಗೊಳಿಸ್ತಾರೆ.
ಹೀಗಿರುವಾಗ ಅನುಪಮಾ ಅವರಿಗೆ ಸೋಶಿಯಲ್ ಮೀಡಿಯಾ ದಲ್ಲಿ ಒಬ್ಬ ನೆಟ್ಟಿಗ ನೀವ್ಯಾಕೆ ಸಾಂಪ್ರಾದಾಯಿಕ ಉಡುಗೆ ಹಾಕಿಕೊಂಡೇ ಫೋಟೋ ತೆಗೆಯುತ್ತೀರಾ? ಬಿಕಿನಿ ಹಾಕಿ ಪೋಟೋ ತೆಗೆದು ಅಪ್ಲೋಡ್ ಮಾಡಿ ಎಂದು ಕಾಮೆಂಟ್ ಹಾಕಿದ್ದ. ಈ ಕಾಮೆಂಟ್ ನೋಡಿ ಕೆಂಡಾಮಂಡಲರಾದ ಅನುಪಮಾ ಪರಮೇಶ್ವರ್, ನಿಮ್ಮ ಮನೆ ಅಡ್ರೆಸ್ ಕೊಡಿ, ಬಿಕಿನಿ ಹಾಕಿ ಪೋಟೋ ಕಳಿಸ್ತೀನಿ, ಫ್ರೇಮ್‌ಹಾಕಿ ಮನೆಯಲ್ಲಿಡಿ ಎಂದು ಹೇಳಿದ್ದಾರೆ.
ಈ ಮೂಲಕ ಆ ನೆಟ್ಟಿಗನಿಗೆ ಚಾರ್ಜ್ ಮಾಡಿದ್ದಾರೆ. ಸೆಲೆಬ್ರಿಟಿ ಗಳಿಗೆ ಅದೇ ರೀತಿ ಕಲಾವಿದರಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಕೆಟ್ಟದಾಗಿ ಕಾಮೆಂಟ್ ಕೊಡುವವರ ಬಗ್ಗೆ ಹಾಗೂ ನಟಿ ಅನುಪಮಾ ಕುರಿತು ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.