ಸಿನಿಮಾ ಇಂಡಸ್ಟ್ರಿ ಅಂದರೆ ಅದರಲ್ಲಿ ಅವಕಾಶಗಳನ್ನು ಗಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವರು ಅದಕ್ಕಾಗಿ ಸಾಕಷ್ಟು ಸ್ಟ್ರಗಲ್ ಮಾಡುತ್ತಾರೆ. ಕೆಲವರಿಗೆ ಕಷ್ಟ ಪಟ್ಟ ಮೇಲೆ ಒಂದು ಉತ್ತಮ ಪ್ರತಿಫಲ ಸಿಕ್ಕರೆ ಇನ್ನು ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರು ಅವಕಾಶಗಳು ಸಿಗುವುದೇ ಇಲ್ಲ. ಹೀಗೆ ಇಷ್ಟವಿಲ್ಲದಿದ್ದರೂ ಸಿನಿಮಾ ಇಂಡಸ್ಟ್ರಿಗೆ ಬಂದು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ ಅಷ್ಟಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದೆ ಹಿಂತಿರುಗಿದ ಈ ನಟಿ ಇದೀಗ ಮತ್ತೆ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ ಅವರೇ ನಟಿ ಮಲೆನಾಡಿನ ಕುವರಿ ಅನಿತಾ ಭಟ್.
ಅನಿತಾ ಭಟ್ ಸೈಕೋ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ರು. ಈ ಸಿನಿಮಾದಲ್ಲಿ ರಘು ದೀಕ್ಷಿತ್ ಹಾಡಿರುವ ’ನಿನ್ನ ಪೂಜೆಗೆ ಬಂದೆ ಮಹಾದೇಶ್ವರ’ ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಆದರೆ ಈ ಸಿನಿಮಾವಾಗಲಿ ಅಥವಾ ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರಿಗೆ ಆಗಲಿ ಅಷ್ಟೊಂದು ಹೈಪ್ ಸಿಕ್ಕಿರಲಿಲ್ಲ. ಆ ಸಿನಿಮಾದ ಬಳಿಕ ಇನ್ನು ಕೆಲವು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಅನಿತಾ ಭಟ್.
ನಂತರ ಸ್ವಲ್ಪ ಸಮಯ ಚಿತ್ರರಂಗದಿಂದ ದೂರವಾಗಿದ್ದ ಅನಿತಾ, ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸುವುದರ ಮೂಲಕ ಮತ್ತೆ ಕನ್ನಡಿಗರಿಗೆ ಪರಿಚಿತರಾಗುತ್ತಾರೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಹೋದ ಬಳಿಕ ತನಗೆ ಇನ್ನಷ್ಟು ಅವಕಾಶಗಳು ಸಿಕ್ಕಿರುವುದಾಗಿ ಅನಿತಾ ಈ ಹಿಂದೆ ಹೇಳಿಕೊಂಡಿದ್ದಾರೆ. ನಂತರ ಅನಿತಾ ಅವರು ಹೊಸ ಕ್ಲೈಮ್ಯಾಕ್ಸ್, ನಗೆ ಬಾಂಬ್, ಕನ್ನೆರಿ, ಶಟರ್ ದುಲಾಯಿ, ಡೇಸ್ ಆಫ್ ಬೊರಪೂರ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ನಟಿ ಅನಿತಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುತ್ತಾರೆ. ಇನ್ನು ಅನಿತಾ ಭಟ್ ಅವರಿಗೆ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನವಿದೆ ಅವರು ಯೋಗಾಪಟು ಕೂಡ ಹೌದು ಈಗಾಗಲೇ ತಮ್ಮ ಸ್ವಂತ ಯೋಗ ತರಬೇತಿ ಕೂಡ ಆರಂಭಿಸಿದ್ದಾರೆ. ಜೊತೆಗೆ ಮೇಕಪ್ ಬ್ಯೂಟಿ ಇವುಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೂಡ ನೀಡುತ್ತಾರೆ.
ಅನಿತಾ ಭಟ್ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ನಟಿ .ಇವರ ಸಿನಿಮಾಗಳಲ್ಲಿ ಬೋಲ್ಡ್ ಪಾತ್ರದಿಂದಾಗಿ ಕೆಲವು ನೆಗೆಟಿವ್ ಕಾಮೆಂಟ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ, ಇವರ ಬಗ್ಗೆ ಸಾಕಷ್ಟು ಟ್ರೂಲ್ ಗಳು ಕೂಡ ಆಗಿವೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಅನಿತಾ ಭಟ್ ಅವರ ಬಗ್ಗೆ ಕೆಲವು ಟೀಕೆಗಳು ಬಂದಿದ್ದವು.
ನಿರಂತರವಾಗಿ ತನ್ನ ಬಗ್ಗೆ ನೆಗೆಟಿವ್ ಆಗಿ ಮಾತನಾಡುವ ಕೆಲವು ಖಾತೆಯನ್ನು ಟ್ವಿಟರ್ ನಲ್ಲಿ ಮೆನ್ಷನ್ ಮಾಡಿರುವ ನಟಿ ಅನಿತಾ ಭಟ್, ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಅಂತಹ ಚಿತ್ರದಲ್ಲಿ ಅಭಿನಯಿಸಿರುವ ರೀತಿ ಕಾಣಿಸುತ್ತದೆ ಎಂದು ಒಬ್ಬ ಕಾಮೆಂಟ್ ಮಾಡಿದ್ದ ಇದಕ್ಕೆ ಉತ್ತರಿಸಿರುವ ಅವರು ಯಾವ ಸಿನಿಮಾದಲ್ಲಿ ತೋರಿಸಿ ಎಂದು ಹೇಳಿದ್ದಾರೆ.
ಜೊತೆಗೆ ಪೊಲೀಸರಿಗೆ ಈ ಒಂದು ಪೋಸ್ಟ್ ಟ್ಯಾಗ್ ಮಾಡಿ ದೂರನ್ನು ಕೂಡ ಸಲ್ಲಿಸಿದ್ದಾರೆ. ಇದಕ್ಕೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಬರವಣಿಗೆಯಲ್ಲಿ ಕಂಪ್ಲೇಂಟ್ ದಾಖಲಿಸುವಂತೆ ಕೇಳಿದ್ದಾರೆ. ಮುಂದಿನ ಕ್ರಮವನ್ನು ತಾವು ಕೈಗೊಳ್ಳುತ್ತೇವೆ ಆದರೆ ಬರಹದ ರೂಪದಲ್ಲಿ ನಿಮ್ಮ ದೂರು ದಾಖಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಒಬ್ಬ ನಟಿ ಬೋಲ್ಡ್ ಆಗಿ ನಟಿಸುತ್ತಾರೆ ಅಂದ್ರೆ ಅವರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಬೇಕೆಂದೇನೂ ಇಲ್ಲ ಕಲೆಯನ್ನು ಆರಾಧಿಸುವವರಿಗೆ ನಟನೆ ಒಂದು ಕಲೆ ಅಷ್ಟೇ. ಅದು ನಿಜ ಜೀವನದ ಘಟನೆಗಳು ಆಗಿರುವುದಿಲ್ಲ ಹಾಗಾಗಿ ಒಬ್ಬ ಕಲಾವಿದೆಯನ್ನ ಬೇರೆ ರೀತಿ ನೋಡುವುದರ ಬದಲು ಅವರನ್ನು ಕಲಾವಿದೆಯಾಗಿ ಅಷ್ಟೇ ನೋಡಿದರೆ ಅವರಿಗೂ ಗೌರವ ನೀಡಿದ ಹಾಗೆ ಆಗುತ್ತೆ ಅಲ್ವಾ?