PhotoGrid Site 1678422335704

ನಟಿಯನ್ನು ಹೋಟೆಲ್ ರೂಮಿಗೆ ಕರೆದೊಯ್ದು ಮನಬಂದಂತೆ ಗುದ್ದಿದ ಬಾಯ್ ಫ್ರೆಂಡ್! ಗುದ್ದಿದ ಬೆನ್ನಲ್ಲೇ ವಾಟ್ಸಪ್ ಫೋಟೋಸ್ ಮತ್ತು ಮೆಸ್ಸೇಜ್ ಲೀಕ್, ಏನಾಗಿದೆ ನೋಡಿ!!

ಸುದ್ದಿ

ಆಕೆ ಒಬ್ಬ ಖ್ಯಾತ ನಟಿ. ಸಿನಿಮಾದಲ್ಲಿ ನಟಿಸುತ್ತಿರುವ ಆಕೆಯ ವಯಕ್ತಿಕ ಜೀವನ ನಟನೆಯಲ್ಲಿಯೇ ಮುಗಿಯುವಂತಾಗಿದೆ. ತಾನು ನಿನ್ನನು ಪ್ರೀತಿಸುತ್ತೇನೆ ಎಂದು ಹೇಳಿಕೊಂಡು ನಟಿಸುತ್ತಾ ಬಂದ ಆ ಬಾಯ್ ಫ್ರೆಂಡ್ ಆಕೆಗೆ ಎಂಥ ಸ್ಥಿತಿ ತಂದಿದ್ದಾನೆ ನೋಡಿ. ಆಕೆಯ ಕಣ್ಣಿನ ಸುತ್ತ ಕಲೆಗಳು. ಮುಖ ಊದಿಕೊಂಡಿದೆ. ಮೈಯೆಲ್ಲ ಗಾಯದ ಗುರುತು. ಆಕೆಯ ದೇಹ ಮಾತ್ರವಲ್ಲ ಮನಸ್ಸು ಕೂಡ ಕಪ್ಪಾಗಿದೆ.

ಆಕೆಯ ಫೋಟೋ ನೋಡಿದರೆ ಸಾಕು ಎಂಥವರ ಕಣ್ಣಲ್ಲಾದರೂ ನೀರು ಬರಬಹುದು ತಾನು ಇದುವರೆಗೆ ಅನುಭವಿಸಿದ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಹಂಚಿಕೊಂಡಿದ್ದಾಳೆ. ಆ ನಟಿಯ ಹೆಸರು ಅನಿಕ ವಿಜಯ್ ವಿಕ್ರಮನ್. ಆಕೆಯ ಪ್ರಿಯಕರ ಅನಿಕಾ ಮೇಲೆ ಮಾ-ರ-ಣಾಂ-ತಿಕ ಹ-ಲ್ಲೆ ಮಾಡಿದ್ದಾನೆ. ಕಣ್ಣು. ಮುಖ ದೇಹದ ಭಾಗಗಳಿಗೆ ಗುದ್ಧಿ ಗಾಯಗೊಳಿಸಿದ್ದಾನೆ.

ಮೈಯಲ್ಲೆಲ್ಲಾ ಬ್ಲ-ಡ್ ಕ್ಲಾ-ಟ್ ಆಗಿದೆ. ಆತ ಒಂದೆರಡು ಬಾರಿ ಅಲ್ಲ ಹಲವಾರು ಬಾರಿ ಆಕೆಯ ಮೇಲೆ ದೈಹಿಕವಾಗಿ ಹ-ಲ್ಲೆ ನಡೆಸಿದ್ದಾನೆ. ಮೊದಲು ಮಾನಸಿಕವಾಗಿ ಹಿಂ-ಸೆ ಕೊಡುತ್ತಿದ್ದ ನಂತರ ದೈಹಿಕವಾಗಿ ಚಿ-ತ್ರಹಿಂ-ಸೆ ಕೊಟ್ಟಿದ್ದಾನೆ ಎಂದು ಅನಿಕಾ ವಿಕ್ರಮನ್ ಇದೀಗ ಅನುಪ್ ಮೇಲೆ ದೂರು ದಾಖಲಿಸಿದ್ದಾರೆ.

ತನ್ನ ಮಾಜಿ ಗೆಳೆಯ ತೀವ್ರವಾಗಿ ಥಳಿಸಿ, ದೈಹಿಕ ಹಾಗೂ ಮಾನಸಿಕ ಹಿಂ-ಸೆ ನೀಡಿದ್ದಾನೆ ಎಂದು ಅನಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಬೋಲ್ಡ್ ಆಗಿ ಅಭಿನಯಿಸುವ ಅನಿಕಾ instagram ನಲ್ಲಿ ಹಲವಾರು ಗ್ಲಾಮರಸ್ ಫೋಟೋಗಳನ್ನ ಶೇರ್ ಮಾಡಿದ್ದಾರೆ.

ಈ ನಡುವೆ ಆಕೆಯ ಬಾಯ್ ಫ್ರೆಂಡ್ ಆಕೆಯ ಮೇಲೆ ಹ-ಲ್ಲೆ ಮಾಡಿದ್ದನ್ನು ಕೂಡ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಅನಿಕಾ ಈಗಾಗಲೇ ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಅನಿಕಾ ತನ್ನ ಬಾಯ್ ಫ್ರೆಂಡ್ ಮೇಲೆ ದೂರು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನೀಡಿದ್ದರು ಆದರೆ ಆತ ಇದೆಲ್ಲ ನನ್ನ ಹುಚ್ಚುತನ ನಾನು ಸರಿ ಆಗುತ್ತೇನೆ ಎಂದು ಆಕೆಯ ಕಾಲು ಹಿಡಿದು ಕಣ್ಣೀರು ಹಾಕಿ ಬೇಡಿಕೊಂಡಿದ್ದನಂತೆ.

ಇದೇ ಕಾರಣಕ್ಕೆ ಆಕೆ ಆತನನ್ನು ಕ್ಷಮಿಸಿದ್ದಳು. ಆದರೆ ಮತ್ತೆ ಆತ ವರಸೆ ಮುಂದುವರಿಸಿದ್ದಾನೆ. ನಾನು ದೂರು ನೀಡಲು ಹೋದರೆ ಪೊಲೀಸರು ಆತನಿಂದ ದೂರ ಇರು ಎಂದು ನನಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು ಎಂದು ಅನಿಕಾ ಬೇಸರದಿಂದ ಹೇಳಿಕೊಂಡಿದ್ದಾರೆ. ನಟಿ ಅನಿಕ ಆಕೆಯ ಮಾಜಿ ಪ್ರಿಯಕರನ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆತನಿಂದ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆಯಂತೆ.

ಈಗಾಗಲೇ ತಲೆಮರಿಸಿಕೊಂಡು ನ್ಯೂಯಾರ್ಕ್ ನಲ್ಲಿ ಹೋಗಿ ಕುಳಿತಿದ್ದಾನೆ ಎಂದು ಅನಿಕಾ ಹೇಳಿದ್ದಾರೆ. ಬೆಂಗಳೂರು ಮೂಲದ ಅನಿಕಾ ವಿಕ್ರಮನ್ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಬೆಂಗಳೂರಿನಲ್ಲಿ ವಾಸವಾಗಿರುವ ಅನಿಕಾ ಅನೂಪ್ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

Leave a Reply

Your email address will not be published. Required fields are marked *