ದೇಶದಲ್ಲಿ ಮದ್ಯಪ್ರಿಯರ ಸಂಖ್ಯೆ ಬಹುದೊಡ್ಡದು. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಶೇಕಡ 30ರಷ್ಟು ಆದಾಯ ಅಬಕಾರಿಯಿಂದಲೇ ತಲುಪುತ್ತೆ ಹಾಗಾಗಿ ಇದೀಗ ಮಧ್ಯಪ್ರಿಯರು ಸರ್ಕಾರದ ಎದುರು ಬಹುದೊಡ್ಡ ಬೇಡಿಕೆಯನ್ನು ಇಟ್ಟಿದ್ದಾರೆ. ಸರ್ಕಾರ ನಮ್ಮ ಈ ಬೇಡಿಕೆ ಈಡೇರಿಸದಿದ್ದರೆ ನಾವು ಹೋರಾಟ ಮಾಡುವುದಾಗಿ ಹೇಳಿದ್ದಾರೆ ಹಾಗಾದ್ರೆ ಮಧ್ಯಪ್ರಿಯರ ಬೇಡಿಕೆ ಏನು ಸರ್ಕಾರ ಅದನ್ನು ಈಡೇರಿಸುತ್ತಾ?
ಮದ್ಯಪ್ರಿಯರ ಬೇಡಿಕೆಗಳು;
ಹಾಸನದಲ್ಲಿ ಏರ್ಪಡಿಸಲಾಗಿದ್ದ ಮದ್ಯಪ್ರಿಯರ ಬೇಡಿಕೆಯ ಸಭೆಯಲ್ಲಿ ಅದರ ಮುತುವರ್ಜಿ ವಹಿಸಿದ ವ್ಯಕ್ತಿ ಮಾತನಾಡಿ ಮದ್ಯಪ್ರಿಯರಿಗೆ ಸಾಕಷ್ಟು ಬೇಡಿಕೆಗಳು ಇವೆ ಸರ್ಕಾರ ಅದನ್ನ ಈಡೇರಿಸಬೇಕು ಎಂಬುದಾಗಿ ಹೇಳಿದ್ದಾರೆ. ಮೊದಲನೆಯದಾಗಿ ಮಧ್ಯದ ಬಾಟಲಿಯ ಮೇಲೆ ಒಂದು ಲಕ್ಷದ ಇನ್ಸೂರೆನ್ಸ್ ಕೊಡಬೇಕು ಒಂದು ವೇಳೆ ಮಧ್ಯ ಪಾನಿ ಆಸು ನೀಗಿದರೆ ಆ ಹಣ ಆತನ ಪತ್ನಿಗೆ ಸೇರುವಂತೆ ಆಗಬೇಕು. ಇದು ಮದ್ಯಪ್ರಿಯರ ಮೊದಲ ಬೇಡಿಕೆಯಾಗಿದೆ.
ಇನ್ನು ಎರಡನೆಯದಾಗಿ ವೈನ್ ಶಾಪ್ ಗಳಲ್ಲಿ ಫಿಲ್ಟರ್ ನೀರನ್ನು ಒದಗಿಸಬೇಕು. ಹಾಗೆಯೇ ಪಾನಮತ್ತ ಕುಡುಕರು ಕುಡಿತ ಹೆಚ್ಚಾಗಿ ತೂರಾಡಿಕೊಂಡು ಇದ್ರೆ ವೈನ್ ಶಾಪಿನಿಂದ ಅವರನ್ನು ಹೊರಗೆ ಹಾಕುತ್ತಾರೆ. ವೈನ್ ಶಾಪ್ ನವರು ಹೀಗೆ ಮಾಡಬಾರದು. ಅದರ ಬದಲು ನಾಲ್ಕರಿಂದ ಐದು ಗಂಟೆ ಮಧ್ಯ ಪಾನಿ ವೈನ್ ಶಾಪ್ ನಲ್ಲಿ ರೆಸ್ಟ್ ಮಾಡುವಂತೆ ನಾಲ್ಕರಿಂದ ಐದು ಬೆಡ್ ಗಳ ವ್ಯವಸ್ಥೆ ಮಾಡಬೇಕು.
ಕುಳಿತು ಕೊಳ್ಳಲು ವ್ಯವಸ್ಥೆ ಮಾಡಬೇಕು.ಅದೇ ರೀತಿ ಸ್ವಚ್ಛವಾದ ಶೌಚಾಲಯದ ವ್ಯವಸ್ಥೆ ಮಾಡಬೇಕು. ಇನ್ನು ಮದ್ಯಪಾನ ಪ್ರಿಯರು ಸಾಕಷ್ಟು ಜನ ಕುಡಿದು ರಾತ್ರಿ ಮನೆಯಲ್ಲಿ ಗಲಾಟೆ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ತೊಂದರೆ ಆಗುತ್ತೆ ಹಾಗಾಗಿ ಹಾಸ್ಟೆಲ್ ಗಳಲ್ಲಿ ಇಂಥವರ ಮಕ್ಕಳಿಗಾಗಿ ಪ್ರತಿಶತ 10% ರಿಯಾಯಿತಿ ನೀಡಬೇಕು ಎಂಬುದಾಗಿಯೂ ಬೇಡಿಕೆ ಮುಂದೆ ಇಟ್ಟಿದ್ದಾರೆ.
ಇನ್ನು ಮದ್ಯಪಾನ ಪ್ರಿಯರಿಗಾಗಿ ಒಂದು ನಿಗಮವನ್ನು ಮಾಡಬೇಕು ಈ ನಿಗಮದ ಅಡಿಯಲ್ಲಿ ಪ್ರತಿ ವರ್ಷ ಒಂದು ಲಕ್ಷ ಮನೆಯನ್ನು ನೀಡಬೇಕು ಎಂಬುದಾಗಿ ಮುಂದಿನ ಬೇಡಿಕೆಯ ಬಗ್ಗೆ ವಿವರಣೆ ನೀಡಲಾಗಿದೆ. ಅದೇ ರೀತಿಯಾಗಿ ಮದ್ಯಪಾನಗಳ ಲಿವರ್ ಅಥವಾ ಇತರ ಆಪರೇಷನ್ ಗಳಿಗೆ ನಾಲ್ಕರಿಂದ ಐದು ಲಕ್ಷ ಖರ್ಚಾಗುತ್ತದೆ ಎಂಬುದು ಮದ್ಯಪಾನೀಯರ ಮುಂದಿನ ಬೇಡಿಕೆ.
ಇನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ, ಮದ್ಯಪಾನೀಯರ ಆರೋಗ್ಯ ತಪಾಸಣೆಯನ್ನು ಮಾಡಬೇಕು. ಇವಿಷ್ಟು ಮದ್ಯಪಾನೀಯರ ಬೇಡಿಕೆಗಳಾಗಿದ್ದು, ಸರ್ಕಾರ ಇದನ್ನು ಈಡೇರಿಸುತ್ತಾ ಅನ್ನೋದನ್ನು ಕಾದು ನೋಡಬೇಕು. ಮದ್ಯಪಾನೀಯರ ಈ ಬೇಡಿಕೆಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.