PhotoGrid Site 1672995213077

ವಿಮಲ್ ತಿನ್ನೋದನ್ನ ಬಿಟ್ಟು, ಮೊದಲು ಮಗಳ ಕಡೆ ಗಮನ ಕೊಡಿ ಎಂದು ಅಜಯ್ ದೇವಗನ್ ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು! ಅಜಯ್ ದೇವಗನ್ ಹೇಳಿದ್ದೇನು ನೋಡಿ!!

ಸುದ್ದಿ

ಸಿನಿಮಾ ಲೋಕವು ಬಹಳ ಸುಂದರವಾಗಿದ್ದು, ಈ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹಲವರು ಇದ್ದಾರೆ. ಆದರೆ ಸಿನಿಮಾ ಲೋಕ ಹೇಳಿಕೊಳ್ಳುವಷ್ಟು ಸುಲಭವೇನಿಲ್ಲ. ಆದರೆ ಮನಸ್ಸು ಮಾಡಿದರೆ ಎಲ್ವನ್ನು ಸಾಧಿಸಲು ಸಾಧ್ಯ. ಆದರೆ ಒಮ್ಮೆ ಸೆಲೆಬ್ರಿಟಿಗಳಾದ ಮೇಲೆ ಸಾಮಾನ್ಯರಂತೆ ಬದುಕು ಇರುವುದಿಲ್ಲ. ಹೀಗಾಗಿ ಸೆಲೆಬ್ರಿಟಿಗಳಾದ ಮೇಲೆ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿಯು ಇರುತ್ತದೆ.

ಒಮ್ಮೆ ಸೆಲೆಬ್ರಿಟಿಗಳಾದ ಮೇಲೆ ಅಭಿಮಾನಿಗಳಿಗೆ ಅವರ ವೈಯುಕ್ತಿಕ ಬದುಕಿನ ಕುರಿತು ಕುತೂಹಲ ಹೆಚ್ಚು. ಇನ್ನು ಸೆಲೆಬ್ರಿಟಿಗಳ ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿಲ್ಲವಾದರೂ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿರುತ್ತಾರೆ. ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.

ಆದರೆ ತಮ್ಮ ನೆಚ್ಚಿನ ನಟ ನಟಿಯರ ಮಕ್ಕಳು ಸಿನಿಮಾರಂಗಕ್ಕೆ ಯಾವಾಗ ಬರುತ್ತಾರೆ ಎನ್ನುವ ಕುತೂಹಲವಿರುತ್ತದೆ. ಇನ್ನೊಂದೆಡೆ ಸೆಲೆಬ್ರಿಟಿಗಳ ಮಕ್ಕಳು ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸುವುದನ್ನು ಕಾಣಬಹುದು. ಪಬ್ ಹಾಗೂ ಪಾರ್ಟಿ ಎಂದು ಸುದ್ದಿಯಾಗುವ ಸೆಲೆಬ್ರಿಟಿಗಳ ಮಕ್ಕಳು ಟ್ರೋಲ್ ಆಗುವುದಿದೆ. ಆದರೆ ಇದೀಗ ಹೊಸ ವರ್ಷಕ್ಕೆ ಅಜಯ್ ದೇವಗನ್ ಮಗಳು ಒಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಜಯ್ ದೇವಗನ್ ಮಗಳನ್ನು ಹಿಗ್ಗಾ ಮುಗ್ಗ ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ಸಿನಿಮಾರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಇದೀಗ ನಟ ಅಜಯ್ ದೇವಗನ್ ಅವರನ್ನು ತಮ್ಮ ಮಗಳ ವಿಚಾರಕ್ಕಾಗಿ ಟ್ರೋಲ್ ಮಾಡಲಾಗುತ್ತಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇನ್ನು, ಅಜಯ್ ದೇವಗನ್ ಹಾಗೂ ಕಾಜೋಲ್ ಮಗಳು ನಿಸಾ ಅವರು ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದರು.

ಈ ಬಾರಿ ಹೊಸ ವರ್ಷವನ್ನು ಸ್ನೇಹಿತರ ಜೊತೆಗೆ ಪಾರ್ಟಿ ಮೂಲಕ ಸ್ವಾಗತಿಸಿದ್ದಾರೆ.ಈ ಪಾರ್ಟಿಯಲ್ಲಿ ನಿಸಾ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಡೀಪ್ ನೆಕ್ ಕಪ್ಪು ಬಣ್ಣದ ಸಿಂಗಲ್ ಟಾಪ್ ಧರಿಸಿದ್ದು, ಸಖತ್ ಎಂಜಾಯ್ ಮಾಡಿರುವ ಪಾರ್ಟಿಯ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ನೇಹಿತರ ಜೊತೆಗೆ ಆಪ್ತವಾಗಿ ಕಾಣಿಸಿಕೊಂಡಿರುವುದು ಈ ಫೋಟೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

ಆದರೆ ಇದೀಗ ನೆಟ್ಟಿಗರು ನಿಸಾ ಅವರನ್ನು ಈ ರೀತಿ ನೋಡಿದ ಕೆಲವು ನೆಟ್ಟಿಗರು ಅಜಯ್ ದೇವಗನ್ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು, ಕೇವಲ ಪಾನ್ ಜಾಹೀರಾತಿನ ಮೇಲೆ ಘಮನ ಹರಿಸುವುದನ್ನು ಬಿಟ್ಟು ನಿಮ್ಮ ಮಗಳ ಮೇಲೆ ಸಹ ಕೊಂಚ ಗಮನಹರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಗಳ ವಿಚಾರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಟ್ರೋಲ್ ಆಗುತ್ತಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *