ನೀವು ಬಾಲಿವುಡ್ ನ ತೆಗೆದುಕೊಂಡ್ರೆ ಅಲ್ಲಿ ಸದ್ಯಕ್ಕೆ ಸ್ಟಾರ್ ಕಿಡ್ಸ್ ಗಳ ಹವಾ ಜೋರಾಗಿದೆ. ಎಲ್ಲಾ ಸ್ಟಾರ್ ಮಕ್ಕಳನ್ನ ಇಟ್ಟುಕೊಂಡು ’ದಿ ಆರ್ಚಿಸ್’ ಎನ್ನುವ ಸಿನಿಮಾ ಒಂದನ್ನ ಮಾಡಲಾಗಿದೆ. ಈ ಸಿನಿಮಾದ ಬಳಿಕ ಈ ಸ್ಟಾರ್ ಮಕ್ಕಳೆಲ್ಲಾ ಎಲ್ಲಿ ಸಿಕ್ತಾರಪ್ಪಾ ಅಂತ ಕೇಳಿದ್ರೆ ಒಂದಲ್ಲಾ ಒಂದು ಪಾರ್ಟಿಯಲ್ಲಿ ಎನ್ನುವಂತಾಗಿದೆ. ಎಷ್ಟಂದ್ರೂ ಸೆಲೆಬ್ರಿಟಿ (celebrity) ಗಳ ಮಕ್ಕಳು ಏನೇ ಮಾಡಿದ್ರೂ ಎಲ್ಲೇ ಹೋದರು ಸುದ್ದಿ ಅಂತೂ ಆಗುತ್ತಾರೆ.
ಇತ್ತೀಚೆಗಷ್ಟೇ ನ್ಯಾಸಾ ದೇವ್ ಗನ್, ಸುಹಾನಾ ಖಾನ್, ಅಲಾಯಾ ಎಫ್, ಆರ್ಯನ್ ಖಾನ್, ಓಹಾನ್ ಅವತ್ರಮಣಿ ಮೊದಲಾದ ಸ್ಟಾರ್ ಕಿಡ್ ಗಳು ಸೇರ್ ಪಾರ್ಟಿ ಮಾಡಿದ್ದರು. ಇದೇನೂ ಬಾಲಿವುಡ್ ನವರಿಗೆ ಹೊಸತಲ್ಲ, ಆದರೆ ಇಷ್ಟು ದಿನ ಸ್ಟಾರ್ ಗಳನ್ನು ಒಟ್ಟಾಗಿ ನೋಡುತ್ತಿದ್ದವವರಿಗೆ ಇದೀಗ ಅವರ ಮಕ್ಕಳನ್ನು ಪಾರ್ಟಿ ಪಬ್ ಗಳಲ್ಲಿ ನೋಡುವ ಅದೃಷ್ಟ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಜಯ್ ದೇವಗನ್ ಮತ್ತು ಸ್ಟಾರ್ ನಟಿ ಕಾಜೊಲ್ ಪುತ್ರಿ ನ್ಯಾಸಾ ಮೊದಲಾದವರು ಈಗ ಆಗಾಗ ಪಾಪಾರಾಜಿಗಳ ಕಣ್ಣಿಗೆ ಬೀಳುತ್ತಿದ್ದಾರೆ. ಒಂದಾದ ಮೇಲೆ ಒಂದರಂತೆ ಪಾರ್ಟಿ ಮಾಡುತ್ತ, ಎಂಜಾಯ್ ಮಾಡುತ್ತಿರುವ ದೃಶ್ಯಗಳು ಹೆಚ್ಚಾಗಿ ಸೋಶಿಯಲ್ ಮೀಡಿಯಾವನ್ನು ಆವರಿಸಿವೆ. ಬಾಲಿವುಡ್ ನ ಬಹುತೇಕ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಿನಿಮಾಗಿಂತ ಪಾರ್ಟಿನೇ ಜಾಸ್ತಿಯಾಯ್ತಲ್ಲ ಅಂತ ನೆಟ್ಟಿಗರ ಕ್ಲಾಸ್ ಶುರುವಾಗಿದೆ.
ಇತ್ತೀಚಿಗೆ ಎಲ್ಲಾ ಸ್ಟಾರ್ ಕಿಡ್ ಸೇರಿ ಹೊಸ ವರ್ಷದ ಅದ್ದೂರಿ ಆಚರಣೆ ಮಾಡಿದರು. ಪಬ್ಬು ಪಾರ್ಟಿ ಅಂತ ಎಲ್ಲಾ ಕಡೆ ಕಾಣಿಸಿಕೊಂಡಿದ್ದರು. ಮುಂಬೈ ದೆಹಲಿ ಬೀದಿಗಳಲ್ಲಿ ಸೆಲಿಬ್ರೆಟಿಗಳ ಮಕ್ಕಳು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಅಲ್ಲದೇ ಪಾರ್ಟಿ ಮತ್ತಿನಲ್ಲಿ ಇದ್ದ ನಟ ನಟಿಯರನ್ನ ಸಂಬಾಳಿಸುವುದೇ ಅವರ ಗಾರ್ಡ್ ಗಳಿಗೆ ಕಷ್ಟವಾದಂತೆ ಭಾಸವಾಗುತ್ತಿತ್ತು. ಹೊಸ ವರ್ಷದ ಆರಂಭದಲ್ಲಿ ಅಜಯ್ ದೇವಗನ್ ಅವರ ಮಗಳು ನ್ಯಾಸ ದೇವಗನ್ (Nyasa Devgan) ಕೂಡ ಪಾರ್ಟಿ ಒಂದರಲ್ಲಿ ಕಾಣಿಸಿಕೊಂಡಿದ್ದು, ಅವರ ಹಾಟ್ ಡ್ರೆಸ್ ಹಾಗೂ ನಡೆದುಕೊಂಡು ಬಂದಿದ್ದ ರೀತಿ ನೋಡಿ ಜನ ’ಫುಲ ಟೈಟ್’ ಎಂದು ಕಮೆಂಟ್ ಮಾಡಿದ್ದಾರೆ.
ಕಾಜಲ್ (Kajal) ಹಾಗೂ ಅಜಯ್ ದೇವಗನ್ (Ajay Devgan) ಇಬ್ಬರು ಬಾಲಿವುಡ್ ನಲ್ಲಿ ಬೆಸ್ಟ್ ಕಲಾವಿದರು ಎನಿಸಿಕೊಂಡಿದ್ದಾರೆ ಆದರೆ 19 ವರ್ಷದ ಅವರ ಮಗಳು ನ್ಯಾಸಾ ಮಾತ್ರಾ ಇದ್ಯಾವುದರ ಪರಿವೆಯೂ ಇಲ್ಲದೇ ಪಾರ್ಟಿ (party) (Friends), ಫ್ರೆಂಡ್ಸ್ ಅಂತ ಕಾಲಕಳೆಯೋದೆ ಹೆಚ್ಚಾಗಿದ್ಯಾ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತಿಚಿಗೆ ಪಿಂಕ್ ಬಣ್ಣದ ಡ್ರೆಸ್ ಧರಿಸಿ ಪಾರ್ಟಿಯಿಂದ ಆಚೆ ಬಂದ ನ್ಯಾಸಾ ದೇವಗನ್ ಅವರ ಬೋಲ್ಡ್ ಹಾಗೂ ಹಾಟ್ ಲುಕ್ ನಲ್ಲಿ ಗಮನ ಸೆಳೆದಿದೆ.
ಪಾರ್ಟಿ ಮುಗಿಸಿ ಹೊರಗಡೆ ಬಂದ ನ್ಯಾಸಾ ಓಡಾಡಲು ಕೂಡ ಕಷ್ಟಪಡುತ್ತಿದ್ದರು. ಆ ವೇಳೆ ಸೆಕ್ಯುರಿಟಿ ಗಾರ್ಡ್ ನ್ಯಾಸಾ ಕೈಹಿಡಿದು ಕಾರಿನಲ್ಲಿ ಕೂರಿಸಿದರು. ಅವರಿಗೆ ಫೊನ್ ಸರಿಯಾಗಿ ಹಿಡಿದುಕೊಳ್ಳುವುದಕ್ಕೂ ಕಷ್ಟವಾಗುತ್ತಿತ್ತು. ಹೀಲ್ಸ್ ಧರಿಸಿದ್ದ ನ್ಯಾಸಾ ಅದಕ್ಕಾಗಿ ನಡೆಯಲು ಕಷ್ಟಪಡುತ್ತಿದ್ದರೋ ಕುಡಿದು ತೂರಾಡುತ್ತಿದ್ದರೊ ಗೊತ್ತಿಲ್ಲ. ಒಟ್ಟಿನಲ್ಲಿ ಅಜಯ್ ಹಾಗೂ ಕಾಜಲ್ ಮಗಳು ಇಂತಹ ವಿಷಯಗಳಿಗೇ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ.