PhotoGrid Site 1671859429316

ಕೆಲಸದಿಂದ ರಿಲ್ಯಾಕ್ಸ್ ಆಗಲು ಈ ಒಂದು ನಷೆಯಲ್ಲಿ ಮುಳುಗುತ್ತೆನೆ ಎಂದ ಖ್ಯಾತ ನಟಿ ವಿನಯ ಪ್ರಸಾದ್! ಯಾವ ನಶೆ ಅಂತೆ ಗೊತ್ತಾ?

Cinema entertainment

vinaya prasad actress: ಕನ್ನಡ ಚಿತ್ರರಂಗದಲ್ಲಿ, ಕಿರುತೆರೆ (Serial) ಲೋಕದಲ್ಲಿ ಹೆಸರು ಮಾಡಿರುವ ನಟಿ ವಿನಯ ಪ್ರಸಾದ್ (Vinaya Prasad) ಅಂದ್ರೆ ಎಲ್ಲರಿಗೂ ಗೊತ್ತು ಕನ್ನಡಿಗರ ಮನ ಗೆದ್ದಿರುವ ಈ ಅದ್ಭುತ ನಟಿ ಬಹುಭಾಷಾ ತಾರೆ ಕೂಡ ಹೌದು. ನಟಿ ವಿನಯ ಪ್ರಸಾದ್ ಇಲ್ಲಿಯವರಿಗೆ ಸಾಕಷ್ಟು ಸಿನಿಮಾ (Film) ಗಳಲ್ಲಿ ಅಭಿನಯಿಸಿದ್ದಾರೆ ಇದೀಗ ಧಾರಾವಾಹಿಯಲ್ಲಿ ಗತ್ತಿನ ಪಾತ್ರ ನಿಭಾಯಿಸುತ್ತ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಎಂಬತ್ತರ ದಶಕ (80s) ದಲ್ಲಿ ಖ್ಯಾತ ನಟಿ ಎನಿಸಿಕೊಂಡ ವಿನಯ ಪ್ರಸಾದ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಮಧ್ವಾಚಾರ್ಯ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಗಣೇಶನ ಮದುವೆ ಎನ್ನುವ ಸಿನಿಮಾದಲ್ಲಿ ಅನಂತನಾಗ್ (Ananthnag) ಅವರ ಜೋಡಿಯಾಗಿ ಪೂರ್ಣ ಪ್ರಮಾಣದ ನಾಯಕಿ ಆಗಿ ಅದಾದ ಬಳಿಕ ಇನ್ನೂ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಇನ್ನು ಇತ್ತೀಚಿಗೆ ಧಾರಾವಾಹಿ ಅಖಿಲಾಂಡೇಶ್ವರಿಯಾಗಿ ಗುರುತಿಸಿಕೊಂಡಿದ್ದಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರವಾಹಿಯಲ್ಲಿ ಅಖಿಲಾಂಡೇಶ್ವರಿ ಅವರ ಗತ್ತು ಗಾಂಭೀರ್ಯ ಜನರಿಗೆ ಬಹಳ ಇಷ್ಟವಾಗಿದೆ.

vinaya prasad actress
vinaya prasad actress

ಆ ಪಾತ್ರದಲ್ಲಿ, ವಿನಯ ಪ್ರಸಾದ್ ಅವರನ್ನ ಹೊರತುಪಡಿಸಿ ಬೇರೆ ಯಾರೇ ನಟಿಸಿದರೂ ಅಷ್ಟು ಎಫೆಕ್ಟಿವ್ ಆಗಿ ಇರ್ತಾ ಇರ್ಲಿಲ್ಲ ಎನ್ನುವ ಮಟ್ಟಿಗೆ ಛಾಪು ಮೂಡಿಸಿದ್ದಾರೆ. ವಿನಯ ಪ್ರಸಾದ್ ಅವರು 1988ರಲ್ಲಿ ವಿ ಆರ್ ಕೆ ಪ್ರಸಾದ್ ಅವರನ್ನ ಮದುವೆ ಆಗುತ್ತಾರೆ. ಸುಂದರ ಸಂಸಾರ ನಡೆಸುತ್ತಿದ್ದ ಇವರಿಗೆ ಪ್ರಥಮ (Prathama) ಎನ್ನುವ ಮಗಳು ಇದ್ದಾಳೆ ದೂರದೃಷ್ಟವಶಾತ್ 1995 ರಲ್ಲಿ ವಿನಯ ಪ್ರಸಾದ್ ಅವರ ಪತಿ ತೀರಿಕೊಳ್ಳುತ್ತಾರೆ.

ನಂತರ 2002ರಲ್ಲಿ ಜ್ಯೋತಿ ಪ್ರಕಾಶ್ (Jyoti Prakash) ಎನ್ನುವರ ಜೊತೆಗೆ ವಿನಯ ಪ್ರಸಾದ್ ಎರಡನೇ ವಿವಾಹವಾಗಿದ್ದಾರೆ. ಇನ್ನು ವಿನಯ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಕೂಡ ಸಿನಿಮಾ ಹಾಗೂ ಕಿರುತೆರೆ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಅತ್ಯುತ್ತಮ ನಟಿ ಹಾಗೂ ನೃತ್ಯಗಾರ್ತಿ (Dancer) ಆಗಿರುವ ಪ್ರಥಮ ಪ್ರಸಾದ್ 2010ರಲ್ಲಿ ನಿರ್ದೇಶಕ ಪ್ರಕಾಶ್ ಅವರ ಬೊಂಬೆಯಾಟವಯ್ಯ ಎನ್ನುವ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಅಭಿನಯಿಸಿದರು.

Famous actress Vinaya Prasad says that she gets acting to relax from work! Do you know what addiction?

ಇನ್ನು 10 ವರ್ಷಗಳ ಹಿಂದೆ ನಟನೆಯನ್ನು ಆರಂಭಿಸುವ ಪ್ರಥಮ ಪ್ರಸಾದ್ ತಾಯಿಯಂತೆ ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಮಾಯಾ ರಾವ್ ಎನ್ನುವವರ ಬಳಿ ಕಥಕ್ (Kathak) ನೃತ್ಯವನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ ಕ್ಲಾಸಿಕಲ್ ಡ್ಯಾನ್ಸ್ ಅಂದ್ರೆ ಪ್ರಥಮ ಪ್ರಸಾದ್ ಅವರಿಗೆ ಬಹಳ ಇಷ್ಟವಂತೆ. ಚೌಕ ಬಾರ್ ಸಿನಿಮಾದಲ್ಲಿ ಅಭಿನಯಿಸಿದ ಪ್ರಥಮ ಎಂಎಂಸಿಹೆಚ್ ಎನ್ನುವ ಸಿನಿಮಾದಲ್ಲಿಯೂ ಕೂಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ಇದೀಗ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯಲ್ಲಿ ದೇವಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಪ್ರಥಮ ಪ್ರಸಾದ್. ಇನ್ನು ಬ್ರಹ್ಮಗಂಟು ಧಾರವಾಹಿಯಲ್ಲಿ ಪುಟ್ಟತ್ತೆ ಪಾತ್ರವನ್ನು ನಿಭಾಯಿಸಿದ ಪ್ರಥಮ ಅವರು ಈಗಲೂ ಅದೇ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ ಅಷ್ಟರಮಟ್ಟಿಗೆ ಅವರಿಗೆ ಜನಪ್ರಿಯತೆ ತಂದುಕೊಟ್ಟಿದೆ..ಈ ಪಾತ್ರ.

ತನ್ನಂತೆ ಮಗಳನ್ನು ಕೂಡ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ವಿನಯಪ್ರಸಾದ್ ಅವರ ಪಾಲು ಬಹಳ ದೊಡ್ಡದು. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ವಿನಯ ಪ್ರಸಾದ್ ಅವರನ್ನ ಒಂದು ಪ್ರಶ್ನೆ ಕೇಳಲಾಗಿತ್ತು ನೀವು ಇಡೀ ದಿನ ಕೆಲಸ ಮಾಡಿ ಸುಸ್ತಾಗಿರ್ತಿರಾ ಆಗ ರಿಲಾಕ್ಸ್ ಆಗುವುದಕ್ಕೆ ಏನು ಮಾಡ್ತೀರಾ ಯಾವ ನಶೆ ತೆಗೆದುಕೊಳ್ತೀರಾ ಅಂತ. ಅದಕ್ಕೆ ನಟಿ ವಿನಯ ಪ್ರಸಾದ ಕೊಟ್ಟ ಉತ್ತರ ಏನು ಗೊತ್ತಾ?

ಹೆಣ್ಣು ಮಕ್ಕಳು ಪ್ರತಿದಿನ ಈ ಒಂದು ವಿಷಯವನ್ನು ಮೊಬೈಲ್ ನಲ್ಲಿ ಸರ್ಚ್ ಮಾಡದೆ ಅವರ ದಿನ ಮುಗಿಯೋದೆ ಇಲ್ಲವಂತೆ! ಯಾವ ವಿಷಯ ಗೊತ್ತಾ? ಇಲ್ಲಿದೆ ನೋಡಿ ವರದಿ!!

ಹೌದು ನಶೆ ಬಗ್ಗೆ ಕೇಳಿದರೆ ವಿನಯ ಪ್ರಸಾದ್ ಆಶ್ಚರ್ಯಕರವಾಗುವಂತ ಉತ್ತರ ನೀಡಿದ್ದಾರೆ. ಕಲೆ ಎಂಬ ಮಹಾ ನಶೆ ತೆಗೆದುಕೊಂಡು ನಾನು ರಿಲ್ಯಾಕ್ಸ್ ಆಗ್ತೀನಿ ಎಂದಿದ್ದಾರೆ ಸಂಗೀತ ನೃತ್ಯ ಇವೆಲ್ಲವೂ ಕಲೆಯ ಬೇರೆ ಬೇರೆ ರೂಪಗಳು. ನಾನು ಒಂದು ಪಾತ್ರದಲ್ಲಿ ಅಭಿನಯಿಸುತ್ತೇನೆ ಅಂದ್ರೆ ಆ ಪಾತ್ರದಲ್ಲಿ ಮುಳುಗಿ ಹೋಗುತ್ತೇನೆ ನಟನೆಯ ನಶೆಯಾಗಿಸಿಕೊಂಡಿರುವ ನನಗೆ ಬೇರೆ ಯಾವ ನಶೆಯ ಅಗತ್ಯವು ಇಲ್ಲ ಎಂದಿದ್ದಾರೆ ವಿನಯ ಪ್ರಸಾದ್ ಅವರು ಕೊಟ್ಟಿರುವ ಈ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕಷ್ಟು ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿರುವ ವಿನಯಪ್ರಸಾದ್ ಕನ್ನಡಿಗರ ಮೆಚ್ಚಿನ ಮನೆಮಗಳು.

Leave a Reply

Your email address will not be published. Required fields are marked *