ಧಾರಾವಾಹಿಯಲ್ಲಿ ಇಂದು ಅಭಿನಯಿಸುತ್ತಿರುವ ಬಹುತೇಕ ನಟಿಯರು ಸೋಶಿಯಲ್ ಮೀಡಿಯಾ (Social mEdia) ದಲ್ಲಿಯೂ ಆಕ್ಟಿವ್ (Active) ಆಗಿರುತ್ತಾರೆ. ಆ ಮೂಲಕ ಅಭಿಮಾನಿಗಳ ಜೊತೆಗೆ ಹೆಚ್ಚು ಸಂಪರ್ಕದಲ್ಲಿಯೂ ಇರುತ್ತಾರೆ. ಶೂಟಿಂಗ್ (Shooting) ಸಮಯದಲ್ಲಿ ಕೂಡ ಸಾಕಷ್ಟು ರಿಲೀಸ್ ಮಾಡಿ ಪೋಸ್ಟ್ ಮಾಡುತ್ತಾರೆ. 111k ಫಾಲೋವರ್ಸ್ (followers) ಹೊಂದಿರುವ ನಟಿ, ಗೀತಾ ಧಾರಾವಾಹಿಯಲ್ಲಿ ಭಾನುಮತಿ ಪಾತ್ರದ ಮೂಲಕ ಫೇಮಸ್ ಆಗಿರುವ ಶರ್ಮಿತಾ ಗೌಡ.
ಶರ್ಮಿತ ಗೌಡ ಚಿಕ್ಕಮಂಗಳೂರಿನ ಬಡಗಿ ಬಿಎಸ್ಸಿ ಪದವಿಯಲ್ಲಿ ಗೋಲ್ಡ್ ಮೆಡಲ್ ಇವರು ಬಯೋಕೆಮೆಸ್ಟ್ರಿಯಲ್ಲಿ (Biochemistry) ಎಂಎಸ್ಇ ಮಾಡಿದ್ದು ಇದರಲ್ಲಿಯೂ ಕೂಡ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ. ಇವರು ಕಿರುತೆರೆಗೆ ಬರುವುದಕ್ಕೂ ನ್ಯೂಟ್ರಿಶಿಯನ್ ಆಗಿಯೂ ಕೆಲಸ ಮಾಡಿದ್ದಾರೆ. ಜಾನಕಿ ರಾಘವ ಧಾರವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಶರ್ಮಿತ ಗೌಡ.
ನಂತರ ಮನೆಯೇ ಮಂತ್ರಾಲಯ ಎನ್ನುವ ಧಾರಾವಾಹಿಯಲ್ಲಿಯೂ ಕೂಡ ನಟಿಸಿದರು. ಇನ್ನು ಶರ್ಮಿತ ಗೌಡ ತಮಿಳು ಧಾರಾವಾಹಿಗಳಲ್ಲಿಯೂ ಕೂಡ ನಟಿಸಿ ಗುರುತಿಸಿಕೊಂಡಿದ್ದಾರೆ. ಯಾರಿವಳು ಎನ್ನುವ ಧಾರಾವಾಹಿಯಲ್ಲಿಯೂ ಕೂಡ ನಟಿಸುತ್ತಿದ್ದಾರೆ. ಇನ್ನು ಶರ್ಮಿತ ಗೌಡ ಅವರಿಗೆ ಉತ್ತಮ ಹೆಸರು ತಂದುಕೊಟ್ಟ ಪಾತ್ರ ಭಾನುಮತಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿಯಲ್ಲಿ ಲೇಡಿ ವಿಲನ್ ಆಗಿ ಶರ್ಮಿತ ಗೌಡ ಅಭಿನಯಿಸಿದ್ದಾರೆ.
ಇನ್ನು ಶರ್ಮಿತ ಗೌಡ ಹೆಚ್ಚಾಗಿ ತಮ್ಮ ವಯಸ್ಸಿಗೆ ಮೀರಿದ ಪಾತ್ರವನ್ನೇ ಅಭಿನಯಿಸುತ್ತಾರೆ. ಗೀತಾ ಧಾರಾವಾಹಿಯಲ್ಲಿ ಹೀರೋ ತಾಯಿಯಾಗಿ ಅಭಿನಯಿಸಿರುವ ಶರ್ಮಿತ ಗೌಡ ಬಹಳ ಯಂಗ್ ಅಂಡ್ ಎನರ್ಜೆಟಿಕ್. ಇನ್ನು ಎಲ್ಲಿಗೆ ಹೋದರು ಹೊಂದಿಕೊಳ್ಳುವ ಸ್ವಭಾವ ಹೊಂದಿರುವ ಶರ್ಮಿತ ಗೌಡ ಅವರು ಸದಾ ಎಲ್ಲರನ್ನೂ ನಗಿಸುತ್ತ ನಗುತ್ತಾ ಸುತ್ತಲಿನ ವಾತಾವರಣವನ್ನು ಹಸಿರಾಗಿರಿಸುತ್ತಾರೆ.
ಅವರು ನಿಜ ಜೀವನದಲ್ಲಿ ಬಹಳ ಸಾಫ್ಟ್ ಹಾಗೂ ಉತ್ತಮ ಸ್ವಭಾವ ಹೊಂದಿರುವವರು. ಹಾಗಾಗಿ ಧಾರಾವಾಹಿ ಸೆಟ್ ನಲ್ಲಿ ಶರ್ಮಿತ ಗೌಡ ಇದ್ರೆ ಎಲ್ಲರಿಗೂ ಖುಷಿಯಂತೆ. ಇನ್ನು ಶಮಿತಾ ಗೌಡ ಗೀತಾ ದಾರವಾಹಿಯಲ್ಲಿ ಭಾನುಮತಿ ಪಾತ್ರದಲ್ಲಿ ಸೀರೆ ಉಟ್ಟು ಬೀಗುತ್ತಾರೆ. ಆದರೆ ನಿಜ ಜೀವನದಲ್ಲಿ ಅವರು ತುಂಬಾನೇ ಮಾರ್ಡನ್. ಬಹಳ ಆಧುನಿಕ ರೀತಿಯ ಉಡುಗೆಗಳನ್ನ ಶರ್ಮಿತ ಗೌಡ ತೊಡುತ್ತಾರೆ.
ಫಿಟ್ನೆಸ್ ಗೆ ಹೆಚ್ಚು ಮಹತ್ವ ಕೊಡುವ ಶರ್ಮಿತ ಗೌಡ ಸೀತಾಯಣ, ಆಮ್ಲೆಟ್ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಇನ್ನು ಶರ್ಮಿತ ಗೌಡ ಅವರ ಗಂಡ ಒಬ್ಬ ಉದ್ಯಮಿ ಅವರಿಗೆ ನಾಲ್ಕನೇ ತರಗತಿಯಲ್ಲಿ ಓದುವ ಒಬ್ಬ ಮಗ ಕೂಡ ಇದ್ದಾನೆ ಆದರೆ ಶರ್ಮಿತ ಗೌಡ ಅವರನ್ನ ನೋಡಿದರೆ ಅವರಿಗೆ ಮದುವೆಯಾಗಿ ಒಂದು ಮಗು ಕೂಡ ಇದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಸಾಧ್ಯವಿಲ್ಲ ಅಷ್ಟು ಯಂಗ್ ಹಾಗೂ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ.
ಇನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಸಾಕಷ್ಟು ಫೋಟೋಗಳನ್ನ ಅಪ್ಲೋಡ್ ಮಾಡಿದ್ದಾರೆ ಶರ್ಮಿತ ಗೌಡ. ಜೊತೆಗೆ ಟ್ರೆಂಡಿ ಹಾಡುಗಳಿಗೆ ರಿಲ್ಸ್ ಕೂಡ ಮಾಡುತ್ತಾರೆ. ಇತ್ತೀಚಿಗೆ ಶರ್ಮಿಳಾ ಗೌಡ ಮಾಡಿರುವ ರೀಲ್ ತುಂಬಾನೇ ವೈರಲ್ ಆಗಿದೆ. ಶರ್ಮಿತಾ ಗೌಡ ಅವರು ಆಧುನಿಕ ಉಡುಗೆ ಹಾಗೂ ಸೀರೆಯಲ್ಲಿಯೂ ಕೂಡ ಮಿಂಚುತ್ತಾರೆ. ಉತ್ತಮ ಡ್ರೆಸ್ಸಿಂಗ್ ಸೆನ್ಸ್ ಇರುವ ಶರ್ಮಿತ ಗೌಡ ಅವರ ಪ್ರತಿಯೊಂದು ಹೊಸ ಪೋಸ್ಟ್ ಗಳಿಗೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ಗಳು ಬರುತ್ತವೆ. ಶರ್ಮಿತ ಗೌಡ ನಿಮಗೂ ಅಚ್ಚುಮೆಚ್ಚಿನ ನಟಿ ಆಗಿದ್ರೆ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ.
View this post on Instagram