ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯುತ್ತಮ ನಟಿ ಎನಿಸಿರುವ ನಟಿ ಪ್ರೇಮ (Prema) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 90ರ ದಶಕ (90th century) ದಲ್ಲಿ ಸಾಕಷ್ಟು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದ ನಟಿ ಪ್ರೇಮ ಅವರು ಇದೀಗ ತಮ್ಮ ಮದುವೆ (Marriage) ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ ಮೊದಲ ಮದುವೆ ಆಗಿ ವಿ-ಚ್ಛೇ-ದ-ನ ಪಡೆದುಕೊಂಡಿರುವ ನಟಿ ಪ್ರೇಮ ಈಗ ಎರಡನೇ ಮದುವೆಗೆ ಸಿದ್ದರಾಗಿದ್ದಾರೆ ಎನ್ನುವ ಮಾಹಿತಿ ಇದೆ.
ಕನ್ನಡದಲ್ಲಿ ಸಾಕಷ್ಟು ವರ್ಷ ಸಿನಿಮಾ (Film) ರಂಗದಲ್ಲಿ ಹಲವಾರು ಸಿನಿಮಾಗಳ ಮೂಲಕ ಮಿಂಚಿದ ನಟಿ ಪ್ರೇಮ. ಉಪೇಂದ್ರ (Upendra) ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivraj kUmar) ಅಭಿನಯದ ಓಂ ಸಿನಿಮಾ (Om Film)ದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಇದಾದ ಬಳಿಕ ಕನ್ನಡದ ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡಿದ್ದಾರೆ.
ನಟಿ ಪ್ರೇಮಾ ಬಹುಭಾಷಾ ನಟಿ. ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕೂಡ ಕೆಲಸ ಮಾಡಿದ್ದಾರೆ. 90ರ ದಶಕದ ಬೆಸ್ಟ್ ಹೀರೋಯಿನ್ ಎನಿಸಿಕೊಂಡಿದ್ದ ನಟಿ ಪ್ರೇಮ ಕಾಲಕಳೆದಂತೆ ಸಿನಿಮಾದಿಂದ ದೂರ ಉಳಿಯುವುದಕ್ಕೆ ಶುರುಮಾಡಿದರು.
ಶಿಶಿರ ಎನ್ನುವ ಸಿನಿಮಾ ಅಭಿನಯದ ನಂತರ ಸಿನಿಮಾದಿಂದ ದೂರವೇ ಉಳಿದರು. ಮದುವೆಯಾದ ನಂತರ ಸಿನಿಂಆಗಳಲ್ಲಿ ಹೆಚ್ಚಾಗಿ ನಟಿಸಲಿಲ್ಲ. ಬಹುತೇಕ ಹಿರೋಯಿನ್ ಗಳು ದಾಂಪತ್ಯ ಜೀವನ ಆರಂಭವಾದ ಮೇಲೆ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ನಟಿ ಪ್ರೇಮಾ ಕೂಡ ಈ ರೂಢಿಯಿಂದ ಹೊರತಾಗಿಲ್ಲ. ಇನ್ನು ಅವರಲ್ಲಿ ಆರೋಗ್ಯದ ಸಮಸ್ಯೆ ಕೂಡ ಕಾಡಿತ್ತು. ಹಾಗಾಘಿ ವೃತ್ತಿ ಬಗ್ಗೆ ಹೆಚ್ಚು ಗಮನ ನೀಡಲು ಸಾಧ್ಯವಾಗಲಿಲ್ಲ.
ಕೊನೆಗೆ ಮತ್ತೆ ಸಿನಿಮಾಕ್ಕೆ ಬರೋಬ್ಬರಿ ಎಂಟು ವರ್ಷಗಳ ನಂತರ ಪ್ರೇಮಾ ಬರುತ್ತಾರೆ ಉಪೇಂದ್ರ ಮತ್ತೆ ಹುಟ್ಟಿ ಬಾ ಎನ್ನುವ ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ರು. ಆದರೆ ಆಗಲೂ ಹ್ಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈ ವರ್ಷ ವೆಡ್ಡಿಂಗ್ ಗಿಫ್ಟ್ ಎನ್ನುವ ಚಿತ್ರದಲ್ಲಿ ಮುಖ್ಯವಾದ ಪಾತ್ರ ಒಂದನ್ನು ನಿಭಾಯಿಸಿದ್ದಾರೆ. ಇನ್ನು ಮುಂದೆ ಅವಕಾಶ ಸಿಕ್ಕರೆ ಉತ್ತಮ ಪಾತ್ರಗಳನ್ನು ನಿಭಾಯಿಸುವ ಆಸೆ ನಟಿ ಪ್ರೇಮ ಅವರದ್ದು.
ಅವರ ವೈಯಕ್ತಿಕ ಜೀವನ ನೋಡುವುದಾದರೆ ಅವರು ಇದುವರೆಗೆ ಯಾವತ್ತೂ ತಮ್ಮ ವೈವಾಹಿಕ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚಿಗೆ ತೆಲುಗು ಸಂದರ್ಶನ ಒಂದರಲ್ಲಿ ಓಪನ್ ಆಗಿ ಮಾತನಾಡಿದ್ದಾರೆ. 2006ರಲ್ಲಿ ಜೀವನ್ ಅಪ್ಪಚ್ಚು ಎನ್ನುವವರ ಜೊತೆ ಮದುವೆ ಆಗಿದ್ದರು. ಆಮೇಲೆ ವಿಚ್ಚೇ-ದ-ನ ಕೂಡ ಪಡೆದಿದ್ದಾರೆ. ಆ ಮದುವೆ ನನ್ನ ತಪ್ಪು ನಿರ್ಧಾರ ಎಂದು ಪ್ರೇಮಾ ಹೇಳಿದ್ದರು. ಇಷ್ಟು ವರ್ಷ ಒಂಟಿಯಾಗಿದ್ದ ಪ್ರೇಮಾ ಇದೀಗ ಎರಡನೇ ಮದುವೆಗೆ ಮನಸ್ಸು ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.
ಇತ್ತಿಚಿಗೆ ಇವೆಂಟ್ ಒಂದಕ್ಕೆ ಹೋಗಿದ್ದಾಗ ಕೊರಗಜ್ಜನ ಸನ್ನಿಧಾನಕ್ಕೂ ಹೋಗಿದ್ದರು. ಅಲ್ಲಿ ಕೊರಗಜ್ಜನ ಬಳಿ ಇನ್ನೊಂದು ಮದುವೆಗೆ ಒಪ್ಪಿಗೆ ಸೂಚಿಸುವಂತೆ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ. ಇನ್ನೊಂದು ಟಾಕ್ ಪ್ರಕಾರ ಈಗಾಗಲೇ ಹುಡುಗನನ್ನು ನೋಡಿದ್ದಾರೆ. ಅವನನ್ನೇ ಮದುವೆಯಾಗಲು ಕೊರಗಜ್ಜನ ಬಳಿ ಅನುಮತಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯ ಕಾಪುವಿನ ಕೊರಗಜ್ಜ ದೈವ ಸನ್ನಿಧಾನಕ್ಕೆ ಭೇಟಿ ನೀಡಿದ ಪ್ರೇಮಾ ಅಲ್ಲಿಂದ ಕಾಪುವಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಪ್ರೇಮಾ ಅವರ ಸಹೋದರ ಅಯ್ಯಪ್ಪ ಹಾಗೂ ಅಯ್ಯಪ್ಪ ಪತ್ನಿ ಅನು ಕೂಡ ಪ್ರೇಮಾ ಅವರ ಜೊತೆಗೆ ಬಂದಿದ್ದರು. ಸದ್ಯ ಪ್ರೇಮ ಹಾಗೂ ಸಹೋದರನ ದೇವಸ್ಥಾನದ ಭೇಟಿ ಪೋಟೊಗಳು ವೈರಲ್ ಆಗಿವೆ.