PhotoGrid Site 1673756332148

ಬರೋಬ್ಬರಿ 64ನೇ ವರ್ಷಕ್ಕೆ ಮೂರನೇ ಮದುವೆಯಾದ ನಟಿ ಜಯಸುಧಾ! ಈ ವಯಸ್ಸಿನಲ್ಲಿ ಇವರನ್ನು ಕೈಹಿಡಿದ ವ್ಯಕ್ತಿ ಇವರೇ ನೋಡಿ!!

ಸುದ್ದಿ

ಸೆಲೆಬ್ರಿಟಿಗಳ ಲೈಫ್ ನಲ್ಲಿ ಮದುವೆ ಬ್ರೇಕ್ ಆಫ್  ಡೈವೋರ್ಸ್, ಮತ್ತೊಂದು ಮದುವೆ ಇವೆಲ್ಲ ದೊಡ್ಡ ವಿಷಯವೇನೂ ಅಲ್ಲ. ಅಲ್ಲದೆ ಸೆಲೆಬ್ರಿಟಿಗಳು ಇಂಥ ವಿಷಯಕ್ಕೆ ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬಹುಭಾಷಾ ನಟಿ ಜಯಸುಧಾ ಅವರು ಮದುವೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಹೌದು, ಹಿರಿಯ ನಟಿ ಜಯಸುಧಾ ತಮಿಳು (Tamil) ತೆಲುಗು (Telugu) ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವ ಬಹು ಬೇಡಿಕೆಯ ಪೋಷಕ ನಟಿ. ಬಹುತೇಕ ಎಲ್ಲ ಯಂಗ್ ಸ್ಟಾರ್ (Young star) ನಟರ ತಾಯಿಯ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಬಹಳ ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿರುವ ಜಯಸುಧಾ ಇದೀಗ ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಯಾಗುವುದಕ್ಕೆ ಹೊರಟಿದ್ದಾರೆ. ಕಾಲಿವುಡ್ (Kollywood) ಅಂಗಳದಲ್ಲಿ ಈ ಸುದ್ದಿ ದೊಡ್ಡ ಟಾಕ್ ಕ್ರಿಯೇಟ್ ಮಾಡಿದೆ.

ನಟಿ ಜಯಸುಧಾ ಅವರಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇದೀಗ ಮೂರನೇ ಮದುವೆ ಆಗುತ್ತಿರುವ ಸುದ್ದಿ, ಕಾಲಿವುಡ್ ನಲ್ಲಿ ಭಾರಿ ಸುದ್ದಿಯಾಗಿದೆ. ಮೊದಲ ಎರಡೂ ಮದುವೆಯಿಂದ ಜಯಸುಧಾ ವಿಚ್ಛೇದನ ತೆಗೆದುಕೊಂಡಿದ್ದಾರೆ. ಇದೀಗ ಉದ್ಯಮಿಯೊಬ್ಬರ ಜೊತೆಗೆ ಮೂರನೇ ಮದುವೆಯಾಗುವುದಾಗಿ ವರದಿಯಾಗಿದೆ.

ಹೊಸ ಜೀವನಕ್ಕೆ ಕಾಲಿಟ್ಟಿರುವ ಜಯಸುಧಾ ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ (Vadde Ramesh) ಜೊತೆ ವಿವಾಹವಾಗಿದ್ದರು. ಕೆಲ ಸಮಯದ ನಂತರ ಇವರಿಬ್ಬರ ನಡುವೆ ಹೊಂದಾಣಿಕೆಯಲ್ಲಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಇವರಿಬ್ಬರ ಸಂಬಂಧ ವಿಚ್ಛೇದನದ ಮೂಲಕ ಬೇರ್ಪಟ್ಟಿತ್ತು. ರಮೇಶ್ ಅವರಿಂದ ವಿಚ್ಚೇದನೆ ಪಡೆದುಕೊಂಡ ನಂತರ ಒಂಟಿಯಾಗಿದ್ದ ಜಯಸುಧಾ ಅವರು.

ಬಾಲಿವುಡ್ ನಟ ಜಿತೇಂದ್ರ ಕಪೂರ್ ಸಹೋದರ ಸಂಬಂಧಿ ನಿತಿನ್ ಕಪೂರ್ (Nitin Kumar) ಜೊತೆ ಹೊಸ ಜೀವನ ಆರಂಭಿಸಿದ್ದರು. ಆದರೆ ದುರದೃಷ್ಟವಶಾತ್ ನಿತಿನ್ ಅಚಾನಕ್ ಆಗಿ ಆ-ತ್ಮ-ಹ-ತ್ಯೆ ಗೆ ಶರಣಾದರು ಇದರಿಂದ ನಟಿ ಜಯಸುಧಾ ಮತ್ತೆ ಒಂಟಿ ಜೀವನ ನಡೆಸುವಂತಾಯಿತು. ಪ್ರೀತಿಸಿ ಮದುವೆಯಾಗಿದ್ದ ನಿತಿನ್ ಅವರು ತೀರಿಕೊಂಡ ಮೇಲೆ ನಟಿ ಜಯಸುಧಾ ಮಕ್ಕಳ ಜೊತೆಗೆ ಕಾಲ ಕಳೆಯುತ್ತಿದ್ದರು.

ಜೊತೆಗೆ ಸಿನಿಮಾದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಇದೀಗ ಒಬ್ಬ ಉದ್ಯಮಿಯ ಜೊತೆಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಜಯಸುಧಾ ಮತ್ತೊಂದು ಸಂಬಂಧ ಬೆಸೆದುಕೊಳ್ಳುತ್ತಿದ್ದಾರೆ ಎಂದು ಕಾಲಿವುಡ್ ಮಾತನಾಡಿಕೊಳ್ಳುತ್ತಿದೆ ಇದಕ್ಕೆ ಪುಷ್ಠಿ ನೀಡುವಂತೆ.ಇತ್ತೀಚಿಗೆ ನಡೆದ ಹಾಸ್ಯ ನಟ ಅಲಿ ಯವರ ಮಗಳ ಮದುವೆ ಸಮಾರಂಭದಲ್ಲಿ ಹಾಗೂ ವಾರಿಸು ಸಿನಿಮಾ ಇವೆಂಟ್ ನಲ್ಲಿಯೂ ಜಯಸುಧಾ ಆ ಉದ್ಯಮಿಯ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇವರಿಬ್ಬರ ನೂತನ ದಾಂಪತ್ಯ ಜೀವನ ಆರಂಭವಾಗಲಿದೆ ಎಂಬುದು ಸದ್ಯ ಕಾಲಿವುಡ್ ನಲ್ಲಿ ಸೌಂಡ್ ಮಾಡುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *