ಬಾಲಿವುಡ್ ರಂಗದಲ್ಲಿ ಬೇಡಿಕೆಯಲ್ಲಿ ನಟಿ ಜಾನ್ವಿ ಕಪೂರ್. ಫೋಟೋ ಶೂಟ್ ಮಾಡಿಸಿ ಪಡ್ಡೆ ಹೈಕಳ ನಿದ್ದೆ ಕದಿಯುವ ಈ ಬೆಡಗಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ನಟಿ ಜಾನ್ವಿ ಕಪೂರ್ ತನ್ನ ನೋಟ ಮತ್ತು ನಟನೆಯಿಂದ ಬಾಲಿವುಡ್‌ನಲ್ಲಿ ಹೆಸರು ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ನಟಿ ಈಗ ಪೊಂಗಲ್ ವಿಶ್ ಮಾಡಿದ್ದಾರೆ. ಹೌದು ಸಂಪ್ರದಾಯಿಕ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ನಟಿ ಜಾನ್ವಿ ಕಪೂರ್, ತಮಿಳಿನಲ್ಲಿ ಪೊಂಗಲ್ ಶುಭಾಶಯ ತಿಳಿಸಿದ್ದು ಅವರ ಕಾಲಿವುಡ್ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.
ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಗಳನ್ನು ಮಾಡುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಸೌತ್ ಸಿನಿಮಾ ಎಂಟ್ರಿಗೆ ರೆಡಿಯಾಗಿದ್ದಾರೆ. ಜೂನಿಯರ್ ಎನ್ಟಿಆರ್ ಮುಂದಿನ ಸಿನಿಮಾಗೆ ಹೀರೋಯಿನ್ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.ಇತ್ತೀಚೆಗಷ್ಟೇ ಇಂಡಿಯಾ ಟುಡೇ ಸಂದರ್ಶನದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದ ನಟಿ ಜಾನ್ವಿ ಕಪೂರ್, ಹೊಸಬ್ಬರು ಕಷ್ಟ ಪಡುತ್ತಾರೆ ಎನ್ನುವ ಮಾತುಗಳಿದೆ.
ಇಂಡಸ್ಟ್ರಿಯಲ್ಲಿ ಈ ಮಾತುಗಳಿಲ್ಲ ಏನೂ ತಿಳಿಯದ ಜನರು ಇದರ ಬಗ್ಗೆ ಮಾತನಾಡುತ್ತಿದ್ದಾರೆ ಅನಿಸುತ್ತಿದ್ಯಾ’ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ” ಇದೊಂದು ಟ್ರಿಕಿ ಪ್ರಶ್ನೆ ಉತ್ತರ ಕೊಡಲು ಕಷ್ಟವಾಗುತ್ತದೆ. ನನ್ನ ಜೊತೆ ಕೆಲಸ ಮಾಡಲು ಮನಸ್ಸಿನಿಂದ ಒಪ್ಪಿಕೊಂಡ ಖುಷಿಯಾಗಿ ನಟರು ಕೆಲಸ ಮಾಡಿದ್ದಾರೆ ಅಂದುಕೊಂಡಿರುವೆ. ಆರಂಭದಲ್ಲಿ ಎಲ್ಲವೂ ಸುಲಭವಾಗಿತ್ತು. ಮೊದಲ ಅವಕಾಶ ಸುಲಭವಾಗಿ ನಮ್ಮ ಮನೆ ಬಾಗಿಲಿಗೆ ಬಂತು ಬೇರೆ ಅವರಿಗೆ ಮೊದಲ ಅವಕಾಶ ಸಿಗುವುದು ತುಂಬಾನೇ ಕಷ್ಟ.
ನಾನು ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಎಂದು ಜನ ಕರೆಯಲೇ ಬೇಕು ಏಕೆಂದರೆ ನಾನು ಅವರಿಗೆ ಹುಟ್ಟಿರುವವಳು. ಅವರ ಮಗಳು ಎನ್ನದೆ ಇನ್ಯಾರ ಮಗಳು ಎಂದು ಹೇಳಿಕೊಳ್ಳುತ್ತಾರೆ? ಪ್ರತಿ ದಿನ ಜನರು ನನ್ನನ್ನು ಜಡ್ಜ್ ಮಾಡುತ್ತಾರೆ ಇದು ನನ್ನ ಜೀವನ ನಾನು ಬದಲಾಯಿಸಲು ಆಗುವುದಿಲ್ಲ. ಒಳ್ಳೆ ಮನತನದಿಂದ ಬಂದಿರುವೆ ಎಂದು ನನ್ನ ಗುರುತನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ ನೆಗೆಟಿವ್ ಆಗಿ ಯೋಚನೆ ಮಾಡುವ ಬದಲು ಪಾಸಿಟಿವ್ ಆಗಿ ಸ್ವೀಕರಿಸುವೆ.
ನನಗೆ ಇರುವುದು ಒಂದೇ ಥ್ರಿಲ್ ಜೀವನದಲ್ಲಿ ಇರುವುದು ಒಂದೇ ಗುರಿ ನನ್ನ ಹೆಮ್ಮೆ ಇರುವುದು. ಸಿನಿಮಾ ಮಾಡುವುದು ಅಂದ್ರೆ ನನಗೆ ತುಂಬಾನೇ ಇಷ್ಟ ಪ್ರತಿ ದಿನ ಸಿನಿಮಾ ಹೊರತು ಪಡಿಸಿ ಏನೂ ಯೋಚನೆ ಮಾಡಲು ಆಗುವುದಿಲ್ಲ. ನೋಡುವವರು ನನ್ನನ್ನು ಏನ್ ಬೇಕಿದ್ದರೂ ಕರೆಯಬಹುದು ಆದರೆ ನನ್ನ ಜೊತೆ ಕೆಲಸ ಮಾಡುವವರು ನೆಗೆಟಿವ್ ಆಗಿ ಒಂದು ಮಾತು ಹೇಳಲಿ ಆಗ ನಾನು ನಿಜಕ್ಕೂ ಬದಲಾಗುವೆ’ ಎಂದಿದ್ದರು.
ಅದಲ್ಲದೇ, ಜಿಮ್‌ನಿಂದ ಹೊರ ಬಂದರೂ ಟ್ರೋಲ್, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರೂ ಟ್ರೋಲ್…ಹೀಗೆ ಸಣ್ಣ ಪುಟ್ಟ ವಿಚಾರಕ್ಕೂ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದಕ್ಕೆ ನಾನು ಸತ್ಯವ್ನು ರಕ್ತದಲ್ಲಿ ಬರೆದುಕೊಡುತ್ತೀನಿ. ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಾನು ಎಷ್ಟು ಕಷ್ಟ ಪಡುತ್ತೀನಿ ಎಂದು ನನ್ನ ರಕ್ತದಿಂದ ಬೇಕಿದ್ದರೆ ಬರೆದು ಕೊಡುತ್ತೇನೆ. ನನ್ನ ಕೆಲಸದ ಬಗ್ಗೆ ಯಾರಿಗೂ ಅನುಮಾನ ಬೇಡ ಯಾರು ಅನುಮಾನ ಪಡುವ ಅಗತ್ಯವಿಲ್ಲ.
ನನಗೆ ಒಂದೇ ವಿಷಯವನ್ನು ಪದೇ ಪದೇ ಹೇಳುವುದು ಬೇಸರ ತರುತ್ತದೆ . ಏನೋ ವಿಚಾರ ಗೊತ್ತಿದೆ ಅಂತ ಅದನ್ನು ಹೈಪ್ ಕೊಟ್ಟು ಗೊತ್ತು ಮಾಡುವುದು ಇಷ್ಟವಿಲ್ಲ. ನನಗಾಗಿ ನಾನು ಸವಾಲುಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ಈಗಷ್ಟೆ ನಾನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದೇನೆ ಎನ್ನುವುದು ಗೊತ್ತಿದೆ ಅಂದ್ಮೇಲೆ ಯಾಕೆ ಸ್ಟಾರ್ ಕಿಡ್ ಅಂತ ಹೇಳಿ ಅವಕಾಶ ಕಿತ್ತುಕೊಳ್ಳುತ್ತಿರುವುದು’ ಎಂದು ಹೇಳಿದ್ದಾರೆ ನಟಿ ಜಾನ್ವಿ ಕಪೂರ್.
ಆಗಾಗ ಫೋಟೋ ಶೂಟ್ ಮೂಲಕ ಪಡ್ಡೆ ಹೈಕಳ ನಿದ್ದೆ ಕದಿಯುವ ಈ ಬೆಡಗಿ ಜಾನ್ವಿ ಕಪೂರ್, ಕೆಂಪು ಬಣ್ಣದ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ ತೊಟ್ಟು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದೂ, ಕ್ಯಾಮೆರಾಗೆ ಹಾಟ್ ಆಗಿ ಪೋಸ್ ಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕ್ಯಾಮೆರಾಗೆ ಹಾಟ್ ಆಗಿ ಪೋಸ್ ಕೊಡುತ್ತಿರುವ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿಯ ಹಾಟ್ ಅವತಾರಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
View this post on Instagram