PhotoGrid Site 1664269621056

ಎರಡನೇ ಮದುವೆ ನಾನು ಆಗಬಾರದಿತ್ತು, ಅಂಬುಜಾಳಿಗೆ ಕೊಡಬಾರದ ನೋವು ಕೊಟ್ಟೆ! ಮನದ ನೋವನ್ನು ತೋಡಿಕೊಂಡ ನಟ ದ್ವಾರಕೀಶ್, ಹೇಳಿದ್ದೇನು ನೋಡಿ!!

ಸುದ್ದಿ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯುತ್ತಮ ನಿರ್ಮಾಪಕ ಹಾಗೂ ಹಾಸ್ಯ ನಟ ಎನಿಸಿಕೊಂಡ ದ್ವಾರಕೀಶ್ ಕನ್ನಡಿಗರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದಾರೆ. ಅವರ ಅತ್ಯದ್ಭುತ ಅಭಿನಯ ಜನರಿಗೆ ಬಹಳ ಇಷ್ಟವಾಗಿತ್ತು. ದ್ವಾರಕೀಶ ಅವರಿಗೆ ಇದೀಗ 80ರ ಹರಯ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅಥವಾ ದ್ವಾರಕೀಶ್ ಅವರು ತಮ್ಮ ಜೀವನದ ಹಲವಾರು ಏಳು ಬೀಳು, ಮಹತ್ವದ ಘಟನೆಗಳನ್ನೂ, ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಹೌದು ದ್ವಾರಕೀಶ್ ಅವರಿಗೆ ನಿಮ್ಮ ಪ್ರೀತಿಯ ಜೀವನದ ಬಗ್ಗೆ ಹೇಳಿ ಅಂತ ಸಂದರ್ಶಕರು ಪ್ರಶ್ನೆ ಮಾಡುತ್ತಾರೆ ಆಗ ತಮ್ಮ ಅದ್ಭುತ ನೆನಪುಗಳನ್ನ ಮೆಲಕು ಹಾಕುತ್ತಾರೆ. ದ್ವಾರಕೀಶ ತಮ್ಮ 27ನೇ ವಯಸ್ಸಿನಲ್ಲಿ ಕನ್ನಡದ ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ಹಾಸ್ಯ ನಟ ಎನಿಸಿಕೊಂಡವರು. ಹಣ ಹೆಸರು, ಆಸ್ತಿ ಈ ಎಲ್ಲವೂ ಬಹಳ ಚಿಕ್ಕ ವಯಸ್ಸಿನಲ್ಲಿ ದ್ವಾರಕೀಶ್ ಅವರ ಪಾಲಿಕೆ ಒಳಿತು ಬಂದಿತ್ತು.

ಆ ಸಂದರ್ಭದಲ್ಲಿ ದ್ವಾರಕೀಶ್ ಅವರು ಕೆಲವು ಚೇಷ್ಟೆಗಳನ್ನು ಮಾಡಿದ್ದೇನೆ ಅಂತ ಹೇಳಿಕೊಂಡಿದ್ದಾರೆ. ಅಂದರೆ ಇತರ ಹುಡುಗೀರ ಜೊತೆಗೆ ಕಾಲ ಕಳೆಯುವುದು ದುಂದು ವೆಚ್ಚ ಮಾಡುವುದು ಇಂಥವುಗಳನ್ನು ಕೂಡ ಮಾಡಿದ್ದಾರೆ. ಆಗಿನ ಕಾಲದಲ್ಲಿಯೇ ಇಂಪೋರ್ಟೆಡ್ ಹೋಂಡಾ ಕಾರನ್ನು ಏಳು ಲಕ್ಷ ರುಫಾಯಿಗೆ ಖರೀದಿ ಮಾಡಿದ್ದರಂತೆ.

ಇಷ್ಟೇಲ್ಲಾ ಐಷಾರಾಮಿ ಜೀವನವನ್ನು ಕಂಡ ಕನ್ನಡದ ಕುಳ್ಳ ದ್ವಾರಕೀಶ್ ಅವರು ಮನಸಾರೆ ಅತ್ಯಂತ ಹೆಚ್ಚಾಗಿ ಪ್ರೀತಿಸಿದ್ದು ಅಂದ್ರೆ ಅಂಬುಜಾ ಎನ್ನುವ ಹುಡುಗಿಯನ್ನು. ಅಂಬುಜಾ ಆಗಿನ ಕಾಲದಲ್ಲೇ ಎಂಎಸ್‌ಸಿ ಗ್ರಾಜುಯೇಟ್ ಮಾಡಿ ಲೆಕ್ಚರರ್ ಆಗಿದ್ದವರು. ಅವರು ಚಿಕ್ಕಮಗಳೂರು ಮೂಲದವರು. ಅವರನ್ನು ಪ್ರೀತಿಸಿ ದ್ವಾರಕೀಶ್ ಅವರು ಮದುವೆಯಾಗುತ್ತಾರೆ. ನಟ ದ್ವಾರಕೀಶ್ ಅವರ ಎಲ್ಲಾ ಏಳು ಬೀಳುಗಳಲ್ಲಿ ಅಂಬುಜಾ ಜೊತೆಗಿದ್ದರು.

ಅಂಬುಜ ಅವರು ದ್ವಾರಕೀಶ ಅವರ ಹೆಜ್ಜೆ ಹೆಜ್ಜೆಯಾಗಿ ನಡೆದವರು. ನಾನು ಸಿನಿಮಾದಲ್ಲಿ ಯಾವುದಾದರೂ ನಾಯಕಿಯ ಬಗ್ಗೆ ಹೆಚ್ಚು ಮಾತನಾಡುತ್ತಾ ಇದ್ದರೆ ಅವರನ್ನು ನೇರವಾಗಿ ಮನೆಗೆ ಕರೆಸುತ್ತಿದ್ದಳು ಅಂಬುಜಾ ನಿಮ್ಮ ಬಗ್ಗೆ ನನ್ನ ಪತಿ ತುಂಬಾ ಮಾತನಾಡುತ್ತಿದ್ದಾರೆ ಅಂತ ಅವರನ್ನು ಕರೆದು ಊಟ ಹಾಕುತ್ತಿದ್ದಳು ಅಂತ ಅತ್ಯುತ್ತ ಮನಸ್ಥಿತಿ ಇದ್ದ ಹೆಣ್ಣು ಆಕೆ ಇಂದು ದ್ವಾರಕೀಶ್ ಅವರು ತಮ್ಮ ಪತ್ನಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ.

ಅಂಬಿಜಾ ಜೊತೆಗೆ 62 ವರ್ಷ ದ್ವಾರಕೀಶ್ ಅವರು ಜೀವನ ಮಾಡಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ ಅವರು ತೀರಿಕೊಳ್ಳುತ್ತಾರೆ. ಅವರನ್ನ ನೆನಪಿಸಿಕೊಂಡು ದ್ವಾರಕೀಶ್ ಈಗಲೂ ಕಣ್ಣೀರು ಹಾಕಿತ್ತಾರೆ! ಇನ್ನು ದ್ವಾರಕೀಶ್ ಅವರು ಅಂಬುಜ ಅವರು ಜೊತೆಗೆ ಇರುವಾಗಲೇ ಇನ್ನೊಂದು ಮದುವೆಯನ್ನು ಕೂಡ ಆಗುತ್ತಾರೆ.

ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡದೆ ಇದ್ದರೂ ದ್ವಾರಕೀಶ್ ಅವರು ಇದು ತನ್ನ ಜೀವನದ ಕೆಟ್ಟ ಡಿಸಿಶನ್ ಅಂತ ಒಪ್ಪಿಕೊಂಡಿದ್ದಾರೆ. ಇದರಿಂದ ಅಂಬುಜಾಗೆ ಬಹಳ ನೋವಾಗಿತ್ತು. ನಾನು ಹಾಗೆ ಮಾಡಬಾರದಿತ್ತು ಅಂತ ದ್ವಾರಕೇಶ್ ಅವರು ಎರಡನೇ ಮದುವೆ ಆಗಿದ್ದು ತಪ್ಪು ಎಂಬುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *