Picsart 22 08 12 19 24 55 818 scaled

80 ಹಾಗೂ 90 ದಶಕದಲ್ಲಿ ಮಿಂಚಿದ ಅಪ್ಸರೆಯಂತಹ ನಟಿಯರು ಈಗ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಎಲ್ಲರ ಫೋಟೋಸ್!!

ಸುದ್ದಿ

ಸಿನಿಮಾ ರಂಗದಲ್ಲಿ ಅದು ಯಾವ ಕ್ಷೇತ್ರವೇ ಆಗಿರಲಿ ಕಾಲ‌ಕಾಲಕ್ಕೆ ಕಲಾವಿದರು ಕೂಡ ಬದಲಾಗುತ್ತಾರೆ. ಇನ್ನು 80 ಹಾಗೂ 90 ರ ದಶಕದ ನಟಿಯರನ್ನು‌ ಇಂದಿಗೂ ಮರೆಯಲು ಸಾಧ್ತ ಇಲ್ಲ.‌ ಅಷ್ಟರ ಮಟ್ಟಿಗೆ ಅವರು ತಮ್ಮ ನಟನೆಯಿಂದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.‌ ಹೀಗಾಗಿ ಇವತ್ತು ನಾವು 80-90 ರ ದಶಕದಲ್ಲಿ ಕನ್ನಡ ‌ಸಿನಿಮಾ ರಂಗದಲ್ಲಿ ಬಹಳ ಫೇಮ್ ಪಡೆದಿದ್ದ ನಟಿಯರು ಇದೀಗ ಹೇಗಿದ್ದಾರೆ ಅನ್ನುವುದನ್ನು ಹೇಳಲಿದ್ದೇವೆ.

ಅದರಲ್ಲಿ ಮೊದಲನೆಯದಾಗಿ ಖುಷ್ಬೂ. ದಕ್ಷಿಣ ಭಾರತದ ನಟಿಯಾದ ಖುಷ್ಬು ರಣಧೀರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ಅವರು ಸರಿ ಸುಮಾರು 20ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಬಳುಕುವ ಬಳ್ಳಿಯಂತಿದ್ದ ದುಂಡು ಮುಖದ ನಟಿ ಖುಷ್ಬೂ ಮದುವೆ, ಮಕ್ಕಳಾದ ಮೇಲೆ ಸಹಜವಾಗಿಯೇ ದಪ್ಪಗಾಗಿದ್ದರು.

ಸದ್ಯ ರಾಜಕೀಯ, ಚಿತ್ರರಂಗ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ತೂಕ ಇಳಿಸಿಕೊಂಡು ಇದೀಗ ಅಚ್ಚರಿ ಮೂಡಿಸುವಂತೆ ಬದಲಾಗಿದ್ದಾರೆ. ಇನ್ನು ಬಾಲಿವುಡ್ ನಟಿ ಜೂಹಿ ಚಾವ್ಲಾ ಕನ್ನಡದಲ್ಲಿ ರವಿಚಂದ್ರನ್ ಅವರ ಪ್ರೇಮಲೋಕಕ ಚಿತ್ರದಲ್ಲಿ ಮೊದಲ‌ ನಟಿಸಿದ್ದರು. ಆ ನಂತರ ಶಾಂತಿ ಕ್ರಾಂತಿ ಮತ್ತು ಕಿಂದರಜೋಗಿ ಚಿತ್ರಗಳಲ್ಲಿ ನಟಿಸಿದರು. ಇದೀಗ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಅದೇ ರೀತಿ ನಟಿ ಮಧುಬಾಲಾ. ಇವರು ದಕ್ಷಿಣ ಭಾರತದ ನಟಿ.

ಇವರು ಕನ್ನಡದ ಅಣ್ಣಯ್ಯ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ತನ್ನದೇ ಆದ ಸ್ಟೈಲ್ ಮತ್ತು ನಟನೆಯ ಮೂಲಕ ಹೆಸರುವಾಸಿಯಾದ ನಟಿ. ಜೊತೆಗೆ ರೋಜ ಚಿತ್ರದ ಮೂಲಕ ಇಡೀ ದಕ್ಷಿಣ ಭಾರತಕ್ಕೆ ಪೇಮಸ್ ಆದ ನಟಿ. ಈಗಲೂ ಇವರು ಅದ್ಭುತವಾಗಿ ತನ್ನ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. ನಟಿ ರೂಪಿಣಿ ಇವರು ಕನ್ನಡ, ತೆಲಗು, ತಮಿಳು ,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ನಟಿಸಿದ್ದಾರೆ.

ವಿಷ್ಣುವರ್ಧನ್ ರ `ಒಲವಿನ ಆಸರೆ’ ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ ರೂಪಿಣಿ ಹತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ಸಿಮ್ರಾನ್,ಇವರು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು. ಕನ್ನಡದಲ್ಲಿ ಶಿವರಾಜ್​​ಕುಮಾರ್ ಜೊತೆ ಸಿಂಹದಮರಿ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಲೂ ಸಿಮ್ರಾನ್ ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ.

ಹಾಗೆಯೇ ನಟಿ ವನಿತಾ ವಾಸು 1987 ರಲ್ಲಿ ತೆರೆಕಂಡ ಸುರೇಶ್ ಹೆಬ್ಬಳಿಕರ್ ನಿರ್ದೇಶನದ `ಅಗುಂತಕ’ ಚಿತ್ರದ ಮೂಲಕ ಪ್ರಸಿದ್ಧಿಗೆ ಬಂದರು. ನಂತರ `ಚೀರಂಜೀವಿ ಸುಧಾಕರ್’,` ಶಕ್ತಿ’,`ಕಾಡಿನ ಬೆಂಕಿ’, ‘ತರ್ಕ’, `ಉತ್ಕರ್ಷ’ ಮುಂತಾದ ಚಿತ್ರಗಳಲ್ಲಿ ನಟಿಸಿ ಮನ್ನಣೆಗೆ ಬಂದರು. ಈಗಲೂ ಕಿರುತೆರೆ ಹಾಗೂ ಸಿನಿಮಾ ಗಳಲ್ಲಿ ನಟಿಸುತ್ತಿದ್ದಾರೆ. ನಟಿ ಭಾಗ್ಯಶ್ರೀ ಕನ್ನಡದ ‘ಅಮ್ಮಾವ್ರ ಗಂಡ’ ಸಿನಿಮಾದಲ್ಲಿ ಮೊದಲ ಬಾರಿ ನಟಿಸಿದ್ದರು. ಇದೀಗ ಇವರು ಬಹಳಷ್ಟು ಬದಲಾಗಿದ್ದು ತುಂಬಾನೇ ಸುಂದರವಾಗಿ ತನ್ನ‌ ಸೌಂದರ್ಯ ಕಾಪಾಡಿಕೊಂಡಿದ್ದಾರೆ.

ಹಾಗೆಯೇ ನಟಿ ವಿಜಯಲಕ್ಷ್ಮಿ ಸಿಂಗ್. ಇದೀಗ ಕೇವಲ ನಟಿಯಾಗಿ ಮಾತ್ರವಲ್ಲದೇ, ನಿರ್ದೇಶಕಿಯಾಗಿ ಕೂಡ ಗುರುತಿಸಿಕೊಂಡಿರುವ ಇವರು ಶ್ರೀಮಾನ್ ಸಿನಿಮಾದ ಮೂಲಕ ನಾಯಕಿಯಾಗಿ ನಟಿಸಿದವರು. ಇವರು ಖ್ಯಾತ ನಟ ಜೈಜಗದೀಶ್ ರವರ ಧರ್ಮಪತ್ನಿ. ಇವರ ತಂದೆ ರಾಜೇಂದ್ರಸಿಂಗ್ ಬಾಬುರವರು ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರು. ಹಾಗೆಯೇ ನಟಿ ಮೂನ್ ಮೂನ್ ಸೇನ್. ಇವರುಕನ್ನಡ ಚಿತ್ರರಂಗದ ಸೂಪರ್ ಡೂಪರ್ ಸಿನಿಮಾ ‘ಯುಗಪುರುಷ’. ಚಿತ್ರದ ಕಾಮಿನಿ ದೇವಿ ಖ್ಯಾತಿಯ ನಟಿ. ಇದೀಗ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *