ಇನ್ಸ್ಟಾಗ್ರಾಂ ರೀಲ್ಸ್ ಇದೀಗ ಎಲ್ಲರ ಫೆವರಿಟ್ ಆಗಿ ಬಿಟ್ಟಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ರೀಲ್ಸ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಯಾವುದಾದರೂ ಟ್ರೆಂಡ್ ಆಗಿರುವ ಹಾಡುಗಳಿಗೆ ಅದೇ ರೀತಿ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವುದು, ಡ್ಯಾನ್ಸ್ ಮಾಡುವುದು ಒಂದು ಕ್ರೇಜ್ ಆಗಿಬಿಟ್ಟಿದೆ. ಈ ಮೂಲಕನೇ ಅನೇಕ ಮಂದಿ ರೀಲ್ಸ್ ಸ್ಟಾರ್ ಗಳಾಗಿದ್ದಾರೆ. ರೀಲ್ಸ್ ಮಾಡಿ ಅಪ್ಲೋಡ್ ಮಾಡಿದರೆ ಅದಕ್ಕೆ ಲಕ್ಷಾಂತರ ಮೆಚ್ಚುಗೆಗಳು ಬರುತ್ತವೆ.
ಈ ಮೂಲಕನೇ ಹೆಚ್ಚಿನ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇದರಲ್ಲಿ ನಮ್ಮ ಸ್ಯಾಂಡಲ್ ವುಡ್ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ಕೂಡ ಹೊರತಾಗಿಲ್ಲ. ಹೌದು, ಅವರು ಕೂಡ ರೀಲ್ಸ್ ನ ಫ್ಯಾನ್. ಹೀಗಾಗಿ ಆಗಾಗ ರೀಲ್ಸ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಶಾರ್ಟ್ ಜೀನ್ಸ್ ಹಾಗು ಲೂಸ್ ಟೀ ಶರ್ಟ್ ಹಾಕಿ ಟ್ರೆಂಡ್ ಆಗಿರುವ ಮ್ಯೂಸಿಕ್ ಗೆ ಸಕತ್ ಆಗಿ ಸ್ಟೆಪ್ ಹಾಕಿದ್ದಾರೆ.
ಈ ವಿಡಿಯೋ ಫುಲ್ ವೈರಲ್ ಆಗಿದೆ. ದಿವ್ಯಾ ಸುರೇಶ್ 2017 ರಲ್ಲಿ ತೆರೆಕಂಡಿದ್ದ `ಹಿಲ್ಟನ್ ಹೌಸ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು. `ಡಿಗ್ರಿ ಕಾಲೇಜ್’ ಎಂಬ ತೆಲುಗು ಚಿತ್ರದಲ್ಲಿ ಕೂಡ ಅವರು ನಟಿಸಿದ್ದಾರೆ. ನನ್ನ ಹೆಂಡ್ತಿ ಎಂಬಿಬಿಎಸ್ ಮತ್ತು ಜೋಡಿ ಹಕ್ಕಿ ಎಂಬ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಯಾಗಿದ್ದವರು.
ಅಲ್ಲಿ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ತುಂಬಾ ಆಪ್ತವಾಗಿದ್ದರು. ಅವರಿಬ್ಬರ ನಡುವಿನ ಸ್ನೇಹ-ಸಂಬಂಧವನ್ನು ಪ್ರೇಕ್ಷಕರು ನೂರಾರು ದಿನಗಳ ಕಾಲ ನೋಡಿದ್ದಾರೆ. ಅವರಿಬ್ಬರ ಸ್ನೇಹ ಅದರ ಜೊತೆ ಜಗಳ ಎಲ್ಲವೂ ಬಿಗ್ ಬಾಸ್ ಮನೆಯಲ್ಲಿ ಹೈಲೆಟ್ ಆಗಿದ್ದವು. ದಿವ್ಯಾ ಸುರೇಶ್ ಅವರು ಕೇವಲ ಮಂಜು ಪಾವಗಡ ಜೊತೆ ಮಾತ್ರ ಹೆಚ್ಚಾಗಿ ಇರುತ್ತಿರುವುದೇ ಸುದ್ದಿಯಾಗಿತ್ತು.
ಇನ್ನು ಇವರಿಬ್ಬರು ಕೇವಲ ಬಿಗ್ ಬಾಸ್ ಶೋಗಾಗಿ ಮಾತ್ರ ಕ್ಲೋಸ್ ಆಗಿದ್ದಾರೆ ಎಂದು ಕೆಲವರು ಟೀಕೆ ಕೂಡ ಮಾಡಿದ್ದರು. ಆದರೆ ಆ ಟೀಕೆಯನ್ನು ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಸುಳ್ಳಾಗಿಸಿದ್ದಾರೆ. ಅಲ್ಲಿಂದ ಹೊರ ಬಂದ ನಂತರವೂ ಇಬ್ಬರು ಪರಸ್ಪರ ಕ್ಲೋಸ್ ಆಗಿಯೇ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅವರ ಕೆಲವು ಫೋಟೋಗಳು ಸಖತ್ ವೈರಲ್ ಆಗಿದ್ದವು.
ಇನ್ನು ಬಿಗ್ಬಾಸ್ ಬಳಿಕ ದಿವ್ಯಾ ಸುರೇಶ್ ಚಿತ್ರರಂಗದಲ್ಲಿ ಸಕತ್ ಬ್ಯುಸಿ ಆಗಿದ್ದಾರೆ. ಬಿಗ್ ಬಾಸ್ ನಿಂದಾಗಿ ಅವರ ಅದೃಷ್ಟ ಖುಲಾಯಿಸಿದೆ ಎಂದೇ ಹೇಳಬಹುದು. ಹೌದು, ಹಲವು ಆಫರ್ಗಳು ದಿವ್ಯಾ ಸುರೇಶ್ರನ್ನು ಕೈಬೀಸಿ ಕರೀತಿದ್ದು, ಇತ್ತೀಚಿಗೆ ಅವರು ನಾಯಕ ನಟಿಯಾಗಿ ಅಭಿನಯಿಸಿರೋ ರೌಡಿ ಬೇಬಿ ಚಿತ್ರ ತೆರೆಗೆ ಬಂದಿದೆ, ಅದಾದ ನಂತರ ಮತ್ತೊಂದು ಬಹುನಿರೀಕ್ಷಿತ ಸಿನಿಮಾದಲ್ಲಿ ದಿವ್ಯಾ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹೀರೋ ಆಗಿರುವ ಹಿರಣ್ಯ ಅನ್ನುವ ಸಿನಿಮಾದಲ್ಲಿ ದಿವ್ಯಾ ಸುರೇಶ್ ಕೂಡ ಬಣ್ಣ ಹಚ್ಚಲಿದ್ದಾರೆ. ಹೀಗೆ ಒಂದಾದರ ಮೇಲೆ ಒಂದರಂತೆ ದಿವ್ಯಾ ಸುರೇಶ್ ಅವರಿಗೆ ಸಿನಿಮಾ ಅವಕಾಶಗಳು ಬರುತ್ತಿದೆ. ಇನ್ನು ಕಳೆದ ಜನವರಿಯಲ್ಲಿ ದಿವ್ಯಾ ಸುರೇಶ್ ಅವರಿಗೆ ಬೈಕ್ ಆಕ್ಸಿ-ಡೆಂಟ್ ಕೂಡ ಆಗಿತ್ತು. ಮುಖದ ಮೇಲೆ ಸಣ್ಣ ಪುಟ್ಟ ಗಾಯಗಳು ಆಗಿದ್ದವು. ಇದೀಗ ಮತ್ತೆ ಮೊದಲಿನಂತಾದ ದಿವ್ಯಾ ಸುರೇಶ್ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram