ಎಲ್ಲಾ ಟ್ರೊಲ್ ಪೇಜ್ ಅಡ್ಮಿನ್ ಗಳನ್ನ ಮನೆಗೆ ಕರೆಸಿ ಹೊಟ್ಟೆ ತುಂಬಾ ಊಟ ಬಡಿಸಿದ ಶಿವಣ್ಣ! ಇವರ ಸರಳತೆ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ

मनोरञ्जन

ಸ್ನೇಹಿತರೆ, ಕನ್ನಡದಲ್ಲಿ ಕೆಲವು ನಟರು ನಟನೆಯಲ್ಲಿ ಮಾತ್ರವಲ್ಲ ಅವರು ಮಾಡುವ ಉತ್ತಮ ಕೆಲಸಗಳಿಂದಲೂ ಕೂಡ ಜನರಿಗೆ ಇಷ್ಟವಾಗ್ತಾರೆ. ಅಂಥ ನಟರುಗಳಲ್ಲಿ ಕನ್ನಡದ ಅತ್ಯುತ್ತಮ ನಟ ಶಿವಣ್ಣ ಕೂಡ ಒಬ್ಬರು. ಶಿವಣ್ಣ ಜನ ಮೆಚ್ಚಿದ ನಾಯಕ. ಹೌದು ಶಿವಣ್ಣ ಅವರ ಸಿನಿಮಾ ಅಂದ್ರೆ ಸಾಕು ಜನ ಮುಗಿ ಬಿದ್ದು ನೋಡ್ತಾರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದ್ರೆ ಇಡೀ ದಕ್ಷಿಣ ಭಾರತದಲ್ಲಿಯೇ ಚಿರಪರಿಚಿತ ನಟ ಕೂಡ ಹೌದು. ಡಾ. ಶಿವರಾಜ್ ಕುಮಾರ್ ಅವರು ಅವರ ತಂದೆ ವರನಟ ರಾಜಕುಮಾರ್ ಅವರನ್ನ ನೆನಪಿಸುವಂಥ ಕ್ಯಾರೆಕ್ಟರ್.

ಶಿವರಾಜ್ ಕುಮಾರ್ ಅವರು ನಟನೆಯ ಜೊತೆ ಜೊತೆಗೆ ಸಾಕಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಕೂಡ ತೊಡಗಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಅವರದ್ದು ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಕೈ. ಹಾಗಾಗಿ ಕನ್ನಡ ನಾಡಿನಲ್ಲಿ ಶಿವಣ್ಣ ಫಾಲೋವರ್ಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಇತ್ತೀಚಿಗೆ ಶಿವಣ್ಣ ಮಾಡಿದ ಒಂದು ಕೆಲಸ ಎಲ್ಲರ ಮೆಚ್ಚುಗೆ ಗಳಿಸಿದೆ. ಹೌದು ನಟ ಶಿವಣ್ಣ, ಕನ್ನಡದ ಟ್ರೋಲ್ ಪೇಜ್ ಗಳ ಎಡ್ಮಿನ್ ಗಳನ್ನೇಲ್ಲಾ ಒಟ್ಟಾಗಿ ಕರೆದು ಭರ್ಜರಿ ಊಟ ಹಾಕಿ ಕಳುಹಿಸಿದ್ದಾರೆ.

ಟ್ರೋಲ್ ಮಾಡುವುದು ಎಂದ್ರೆ ಬರಿಯ ಕೆಟ್ಟದಾಗಿ ಟ್ರೋಲ್ ಮಾಡುವುದು ಮಾತ್ರವಲ್ಲ, ಉತ್ತಮ ವಿಷಯಗಳನ್ನೂ ಕೂಡ ಟ್ರೋಲ್ ಮಾಡಲಾಗುತ್ತೆ. ಉತ್ತಮ ಸಿನಿಮಾಗಳ ಬಗ್ಗೆ ಚೆನ್ನಾಗಿಯೇ ಟ್ರೋಲ್ ಮಾಡಲಾಗುತ್ತೆ. ಆದರೆ ಇದುವರೆಗೂ ಟ್ರೋಲ್ ಪೇಜ್ ನಡೆಸುವವರಿಗೆ ಇಷ್ಟು ಗೌರವ ನೀಡಿದ್ದು ಯಾರೂ ಇರಲಿಲ್ಲವೇನೋ. ಆದರೆ ಶಿವಣ್ಣ ಎಲ್ಲರಿಗಿಂಥ ವಿಭಿನ್ನ. ಟ್ರೋಲ್ ಪೇಜ್ ನಡೆಸುವ ಯುವಕರನ್ನೆಲ್ಲಾ ಕರೆದು ಊಟ ಹಾಕಿದ್ದಾರೆ ಶಿವಣ್ಣ. ಇನ್ನು ಶಿವಣ್ಣ ತಾವೇ ಸ್ವತಃ ಬಡಿಸಿದ್ದ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ. ಶಿವಣ್ಣ ಅವರ ಈ ಪ್ರೀತಿ ತುಂಬಿದ ಕಾರ್ಯಕ್ಕೆ ಅಭಿಮಾನಿಗಳು ಹೃದಯತುಂಬಿ ಹಾರೈಸಿದ್ದಾರೆ. ಅಂದಹಾಗೆ ಇತ್ತೀಚಿಗೆ ಶಿವಣ್ಣ ಅಭಿನಯದ ಬಜರಂಗಿ ೨ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ಅಭಿಮಾನಿಗಳು ಮೆಚ್ಚಿ ಕೊಂಡಾಡಿದ್ದ ಈ ಸಿನಿಮಾ ಶಿವಣ್ಣ ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿದೆ.

Leave a Reply

Your email address will not be published. Required fields are marked *