ಇದೀಗ ಸ-ಲಿಂ-ಗಿಗಳ ಮದುವೆಗೆ ಸರ್ಕಾರದಿಂದ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಇವರಿಗೆ ಹೇಳಿಕೊಳ್ಳುವುದಕ್ಕೂ ಅಂಜುತ್ತಿದ್ದ ಹುಡುಗರು ಅಥವಾ ಹುಡುಗಿಯರು ತಮ್ಮ ಪ್ರೀತಿಯ ವಿಚಾರವನ್ನ ಬಹಿರಂಗಪಡಿಸುತ್ತಿದ್ದಾರೆ. ಜೊತೆಗೆ ಎಲ್ಲರ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದಾರೆ. ಸಾಮಾನ್ಯವಾಗಿ ನಮಗೆ ಗೊತ್ತಿರುವುದು ಮದುವೆ ಅಂದರೆ ಒಬ್ಬ ಹುಡುಗ ಒಬ್ಬ ಹುಡುಗಿ ಜೊತೆಯಾಗಿ ಸಪ್ತಪದಿ ತುಳಿಯುವುದು ಆದರೆ, ಸೃಷ್ಟಿಯ ನಿಯಮದ ಅಚ್ಚರಿಯನ್ನ ಯಾರು ಅಳೆದು ತೂಗಲು ಸಾಧ್ಯವೇ ಇಲ್ಲ.
ಇಲ್ಲಿ ಗಂಡು ಹೆಣ್ಣು ಸೇರಿದ್ರೆ ಮಾತ್ರ ಮದುವೆ ಅಲ್ಲ ಇಲ್ಲಿ ಎರಡು ಮನಸ್ಸುಗಳು ಬೆರೆಯುವುದು ನಿಜವಾದ ಪ್ರೀತಿ ನಿಜವಾದ ಮದುವೆ ಹಾಗಾಗಿ, ಒಂದೇ ಲಿಂಗದ ಜನರು ಕೂಡ ಪ್ರೀತಿಸಿ ಮದುವೆಯಾಗುತ್ತಾರೆ. ಹುಡುಗರು ನನ್ನ ಹುಡುಗಿ ಹುಡುಗಿಯನ್ನು ಮದುವೆಯಾಗುವುದು ಇತ್ತೀಚಿಗೆ ಕಾಮನ್ ಆಗಿದೆ. ಇಂತಹ ಒಂದು ವಿಶೇಷ ಮದುವೆಗೆ ತಮಿಳುನಾಡು ಸಾಕ್ಷಿಯಾಗಿದೆ.
ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಯುವತಿಯರು ಇದೀಗ ತಮಿಳುನಾಡಿನ ಬ್ರಾಹ್ಮಣ ಕುಟುಂಬದ ಪದ್ಧತಿಯಂತೆ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಹೌದು, ಈ ಅಚ್ಚರಿಯ ಮದುವೆಗೆ ಯುವತಿಯರ ಎರಡೂ ಕುಟುಂಬದವರು ಸಾಕ್ಷಿಯಾಗಿದ್ದಾರೆ. ಸುಭಿಕ್ಷಾ ಸುಬ್ರಮಣಿ ಎನ್ನುವ ತಮಿಳುನಾಡಿನ ಯುವತಿ ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿದ್ದಾರೆ.
29 ವರ್ಷದ ಸುಭಿಕ್ಷಾ ಕೆನಡಾದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಸುಭಿಕ್ಷಾ ಅವರನ್ನ ಮದುವೆಯಾಗಿರುವ ಯುವತಿ ಬಾಂಗ್ಲಾದೇಶದವರು. 35 ವರ್ಷದ ಟೀನಾ ಅವರಿಗೆ ಅವರ ವಯಸ್ಸು ಹತ್ತೊಂಬತ್ತು ಇರುವಾಗಲೇ ಒಬ್ಬ ಹುಡುಗನ ಜೊತೆ ಮದುವೆಯಾಗಿತ್ತು. ಆದರೆ ಸ-ಲಿಂ-ಗಿಗಳ ಬಗ್ಗೆ ಹೆಚ್ಚು ಆಸಕ್ತಿ ಇದ್ದ ಟೀನಾ ಆ ಮದುವೆಯಿಂದ ದೂರ ಉಳಿದರು.
ಟೀನಾ ಹಾಗೂ ಸುಭಿಕ್ಷಾ ಒಂದು ಡೇಟಿಂಗ್ ಆಪ್ ಮೂಲಕ ಪರಿಚಯವಾದವರು. ವರ್ಷಗಳಿಂದ ಡೇಟಿಂಗ್ ಮಾಡುತ್ತಾ ಇದ್ದು ಇದೀಗ ಮದುವೆಯ ಮೂಲಕ ತಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಇವರಿಬ್ಬರ ಮದುವೆಗೆ ಮನೆಯವರ ವಿರೋಧ ಇರಲಿಲ್ಲ ಅನ್ನೋದು ಹಲವರ ಪ್ರಶ್ನೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಸುಭಿಕ್ಷಾ ಮದುವೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸುಭಿಕ್ಷಾ, ನನ್ನ ಪಾಲಕರು ಸಂಪ್ರದಾಯಸ್ಥರು ಹಾಗಾಗಿ ನಮ್ಮ ಮದುವೆ ನೆರವೇರಲು ಒಪ್ಪುತ್ತಾರೆಯೋ ಇಲ್ಲವೋ ಎನ್ನುವ ಆತಂಕವಿತ್ತು.
ಆದರೆ ಅವರು ಯಾವುದೇ ವಿರೋಧ ವ್ಯಕ್ತಪಡಿಸದೆ ನಮ್ಮ ಬೆಂಬಲಕ್ಕೆ ನಿಂತರು. ಎಲ್ಲರಂತೆ ನಾವು ಕೂಡ ನಮ್ಮ ಬ್ರಾಹ್ಮಣ ವಿವಾಹ ಕ್ರಮದಂತೆಯೇ ವಿಧಿ ವಿಧಾನಗಳನ್ನು ಅನುಸರಿಸಿ ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಟೀನ ಹಾಗೂ ಸುಭಿಕ್ಷ ಅವರ ಮದುವೆಗೆ ಸುಭಿಕ್ಷ ಅವರ ಸಹೋದರಿ ಮೊದಲು ವಿರೋಧ ವ್ಯಕ್ತಪಡಿಸಿದ್ದರಂತೆ.
ಆದರೆ ಸುಭಿಕ್ಷಾ ಅವರ 84 ವರ್ಷದ ಅಜ್ಜಿಯೇ ಈ ಮದುವೆಗೆ ಒಪ್ಪಿಗೆ ಸೂಚಿಸಿದ ನಂತರ ಮನೆಯವರು ಇನ್ನೊಂದು ಮಾತಿಲ್ಲದೆ ಮದುವೆಗೆ ಒಪ್ಪಿದ್ದಾರೆ. ಈದೀಗ ಸುಭಿಕ್ಷ ಕೆನಡಾದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ ಬಾಂಗ್ಲಾದೇಶದ ಟೀನಾ 2003ರಲ್ಲಿ ಕೆನಡಕ್ಕೆ ಬಂದು ನೆಲೆಸಿದವರು.
ಕೆನಡಾ ಫೋತ್ ಹಿಲ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮುತುವರ್ಜಿ ವಹಿಸುವ ಡಿಪಾರ್ಟ್ಮೆಂಟ್ ನ ಮುಖ್ಯಸ್ಥೆ ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸ-ಲಿಂ-ಗಿಗಳಾಗಿದ್ದರು ಕೊನೆಗೆ ಶಾಸ್ತ್ರೋತ್ತವಾಗಿ ಸಪ್ತಪದಿ ತುಳಿದು ಜೀವನ ನಡೆಸಲು ಮುಂದಾಗಿರುವ ಈ ಜೋಡಿಗೆ ನೆಟ್ಟಿಗರು ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಸದ್ಯ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ!