ತಾಯಿಯ ಹುಟ್ಟು ಹಬ್ಬದ ದಿನ ಅನುಶ್ರೀ ಮಾಡಿದ್ದೇನು ಗೊತ್ತಾ?

समाचार

ಸ್ನೇಹಿತರೆ, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಕುಟುಂಬದ ಜವಾಬ್ದಾರಿಯನ್ನು ಹೊತ್ತು ಬೆಂಗಳೂರಿಗೆ ಬಂದ ಅನು ಶ್ರೀ ತಮ್ಮ ಓದಿನ ಜೊತೆಗೆ ಅವಕಾಶಗಳಿಗಾಗಿ ಸಿಕ್ಕಾಪಟ್ಟೆ ಅಲೆದಾಡಿದರು. ಇಂದು ಎಷ್ಟರಮಟ್ಟಿಗೆ ಯಶಸ್ಸು ಪಡೆಯಲು ಅವರ ಶ್ರಮ ಮುಖ್ಯ ಕಾರಣವೆಂದರೆ ತಪ್ಪಾಗಲಾರದು. ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಂಬಲದಿಂದ ಹಗಲು-ರಾತ್ರಿ ಶ್ರಮಿಸಿ ಕೆಲಸ ಮಾಡುತ್ತಿರುವಂತಹ ಅನುಶ್ರೀ ಅವರ ಹುಟ್ಟುಹಬ್ಬ ದಿನದಂದು ನೀಡಿದ ಉಡುಗೊರೆ ಉಡುಗೊರೆ ಏನು? ಬರ್ಡೆ ಸೆಲೆಬ್ರೇಶನ್ ಹೇಗಿತ್ತು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಿರೂಪಕಿ ಅನುಶ್ರೀ ಅವರು ಸುಮಾರು ಒಂದು ದಶಕದಿಂದ ಕರ್ನಾಟಕದ ರಿಯಾಲಿಟಿ ಶೋಗಳಲ್ಲಿ ಮನೆಮಾತಾಗಿದ್ದಾರೆ. ಹಲವಾರು ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಸಿನಿಮಾದ ಪ್ರಮೋಶನ್ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಬೇಡಿಕೆಯ ನಿರೂಪಕಿಯಾಗಿ ಕಾಣಿಸಿಕೊಳ್ಳುವಂತಹ ಅನುಶ್ರೀ ಅವರ ಹಾಸ್ಯ ಭರಿತ ಮಾತುಗಳೆಂದರೆ ಜನರಿಗೆ ಅಚ್ಚುಮೆಚ್ಚು. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೀ ಕುಟುಂಬ ಅವಾರ್ಡ್ ಸೇರಿದಂತೆ ಹಲವಾರು ಕಾರ್ಯಕ್ರಮದಲ್ಲಿ ಚಿಟಪಟ ಮಾತಿನಿಂದ ಪ್ರೇಕ್ಷಕರನ್ನು ರಂಜಿಸುವಂತಹ ಅನುಶ್ರೀ ಕೀರ್ತಿ, ಯಶಸ್ಸು, ಜನಪ್ರಿಯತೆ, ಜನರ ಪ್ರೀತಿ ಒಲವು, ಹಿರಿಯರ ಆಶೀರ್ವಾದ ಹೀಗೆ ಎಲ್ಲವನ್ನೂ ಅಪಾರವಾಗಿ ಸಂಪಾದಿಸಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲೂ ಸಕ್ಕತ್ ಆಕ್ಟಿವಾಗಿ ಇರುವಂತಹ ಅನುಶ್ರೀ ಅವರು ಆಗಾಗ ತಮ್ಮ ಹಾಟ್ ಫೋಟೋಗಳು ಹಾಗೂ ರೀಲ್ಸ್ ವಿಡಿಯೋ ಅಥವಾ ನಡೆಸಿಕೊಡುವ ಮುಂದಿನ ಇವೆಂಟ್ ಕುರಿತು ಅಭಿಮಾನಿಗಳಿಗೆ ಮಾಹಿತಿ ನೀಡಿರುತ್ತಾರೆ. ಹೀಗೆ ಎಲ್ಲರನ್ನೂ ಪ್ರೀತಿ ಗೌರವದಿಂದ ಮಾತನಾಡಿಸುವ ಅನುಶ್ರೀ ಅವರಿಗೆ ಅಮ್ಮ ಎಂದರೆ ಪಂಚಪ್ರಾಣ. ತನ್ನ ತಾಯಿಯ ಹುಟ್ಟುಹಬ್ಬದ ದಿನದಂದು ಅಮ್ಮನ ಜೊತೆಗಿನ ಫೋಟೋ ಶೇರ್ ಮಾಡಿಕೊಂಡು ಬರ್ತಡೆ ವಿಶ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ತನ್ನ ತಾಯಿಗೆ ಪ್ರೀತಿಯಿಂದ ಹಸುವಿನ ಕರುವೊಂದನ್ನು ಉಡುಗೊರೆಯಾಗಿ ನೀಡಿರುವಂತಹ ಅನುಶ್ರೀಯವರು, ತನ್ನ ತಾಯಿಯ ಕೈಯಿಂದ ಸುಮಾರು 500ಕ್ಕೂ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಹಣ ಸಹಾಯ ಮಾಡಿ, ಅವರ ಸ್ಕೂಲ್ ಪೀಸ್ಗಳನ್ನು ಬರಿಸುವ ಮೂಲಕ ಕುಟುಂಬದವರಿಗೆ ಸಹಾಯ ಮಾಡಿದ್ದಾರೆ. ಅನುಶ್ರೀ ಅವರ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *