7 Hot News
A Karnataka Times Affiliate Kannada News Portal

ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಮಗಳ ಅದ್ದೂರಿ ಮದುವೆ ಸಂಭ್ರಮ! ಸುಂದರ ಕ್ಷಣಗಳು ಫೋಟೋಸ್ ವೈರಲ್!

advertisement

ಥ್ರಿಲ್ಲರ್ ಮಂಜು ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಅದೊಂದು ದಶಕದ ಅವರ ಸಾಹಸಮಯ ದೃಶ್ಯಗಳು ಕಣ್ಣ ಮುಂದೆ ಬಂದುಬಿಡುತ್ತದೆ. ಎಲ್ಲರೂ ಬಾಯಿ ಮೇಲೆ ಬೆರಳಿಟ್ಟು ನೋಡುವಂತಹ ಸ್ಟಂಟ್ ಗಳನ್ನು ಮಾಡುತ್ತಾ ಆಕ್ಷನ್ ಸಿನಿಮಾಗಳ ಥ್ರಿಲ್ ಏರಿಸುತ್ತ, ಕನ್ನಡ ಸಿನಿಮಾ ರಂಗದಲ್ಲಿ ಮನೆ ಮಾತಾಗಿದ್ದಂತಹ ಕನ್ನಡದ ಹೆಮ್ಮೆಯ ಫೈಟ್ ಮಾಸ್ಟರ್, ಸಹಾಸ ನಿರ್ದೇಶಕ ಹಾಗೂ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು (Thriller Manju) ಕನ್ನಡಕ್ಕೆ ನೀಡಿರುವಂತಹ ಕೊಡುಗೆ ಅಪಾರವಾದದ್ದು.

advertisement

ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳದು ಬಂದಂತಹ ಥ್ರಿಲ್ಲರ್ ಮಂಜು (Thriller Manju) ಅವರಿಗೆ ಚಿಕ್ಕಂದಿನಿಂದಲೂ ಫೈಟ್ ಮಾಸ್ಟರ್ (Fight master) ಆಗಬೇಕೆಂಬ ಕನಸಿರುತ್ತದೆ. ಹೌದು ಗೆಳೆಯರೇ ಸಿನಿಮಾದಲ್ಲಿ ಫೈಟಿಂಗ್ ಸೀನ್ಗಳು ಬರುತ್ತಿದ್ದಾರೆ ತಾವು ಕೂಡ ಟಿವಿ ಮುಂದೆ ನಿಂತು ಅಭ್ಯಾಸ ಮಾಡುತ್ತ ಹೆಸರಾಂತ ಆರ್ಟಿಸ್ಟ್ ಬ್ರುಸ್ಲಿ ಅವರನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಂಡು ತಾನು ಅವರಂತೆ ದೊಡ್ಡ ಫೈಟ್ ಮಾಸ್ಟರ್ ಆಗಬೇಕೆಂಬ ಕನಸನ್ನು ಹೊತ್ತು ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಸಿನಿಮಾ ಇಂಡಸ್ಟ್ರಿ ಗೆ ಪಾದರ್ಪಣೆ ಮಾಡುತ್ತಾರೆ.

advertisement

ಡಾಕ್ಟರ್ ರಾಜಕುಮಾರ್, ಅಂಬರೀಶ್, ಶಂಕರ್ ನಾಗ್ ಹಾಗೂ ಶಿವರಾಜಕುಮಾರ್ ಅವರಂತಹ ಸಾಕಷ್ಟು ಸ್ಟಾರ್ ನಟರಿಗೆ ಸಾಹಸ ನಿರ್ದೇಶನವನ್ನು ಮಾಡಿ ಪ್ರಸಿದ್ಧಿ ಪಡೆದು ಇಂದಿಗೂ ಕೂಡ ಚಲನಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ಥ್ರಿಲ್ಲರ್ ಮಂಜು (Thriller Manju) ಅವರ ವೈಯಕ್ತಿಕ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಸುದ್ದಿಗೊಳ್ಳಲಾಗುತ್ತಿದೆ.

advertisement

advertisement

advertisement

ಹೌದು ಗೆಳೆಯರೇ ಮಂಜು ಅವರ ಮುದ್ದಿನ ಮಗಳು ರಕ್ಷಿತಾ ಅವರ ಮದುವೆ ಕಾರ್ಯಕ್ರಮಗಳು ಕಳೆದ ಕೆಲವು ದಿನಗಳ ಹಿಂದೆ ಜರುಗಿದ್ಸು, ಮಗಳನ್ನು ಮೂಲತಃ ಮಂಗಳೂರಿನ ಉದ್ಯಮಿಯಾದ ದೀಪಕ್ ಬಾಳಿಗಾ ಎಂಬುವರಿಗೆ ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ದೀಪಕ್ ಬಾಳಿಗ ಅವರು ಸದ್ಯ ಐರ್ಲ್ಯಾಂಡ್ ನಲ್ಲಿ ನೆಲೆಸಿದ್ದು ಯು ಎಸ್ ನಲ್ಲಿ ತಮ್ಮದೇ ಆದ ಎರಡು ಮೂರು ಸ್ಟಾರ್ಟ್ ಕಂಪನಿ ಗಳನ್ನು ಕೂಡ ಪ್ರಾರಂಭಿಸಿದ್ದಾರೆ.

advertisement

advertisement

ಇವರಿಬ್ಬರದ್ದು ಪಕ್ಕ ಅರೇಂಜ್ ಮ್ಯಾರೇಜ್(Arrange marriage) ಆಗಿದ್ದು ಮಗಳ ಮದುವೆ ಸಂಭ್ರಮದಲ್ಲಿ ತ್ರಿಲ್ಲರ್ ಮಂಜು ಬಹಳ ಟ್ರೆಡಿಶನಲ್ಲಾಗಿ ಮಿಂಚಿದ್ದಾರೆ. ರಕ್ಷಿತ ಮತ್ತು ದೀಪಕ್ (Rakshitha-Deepak)ದಂಪತಿಗಳ ಅರಿಶಿಣ ಶಾಸ್ತ್ರದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪ್ಪ ತಮ್ಮ ಮುದ್ದಿನ ಮಗಳಿಗೆ ಅರಿಶಿನ ಹಚ್ಚಿ ಸಂಭ್ರಮಿಸುತ್ತಿರುವ ಖುಷಿಯನ್ನು ಈ ಪುಟದಲ್ಲಿರುವ ಫೋಟೋದ ಮುಖಾಂತರ ನೋಡಬಹುದಾಗಿದೆ.

advertisement

Leave A Reply

Your email address will not be published.