ನಟಿ ಲಾಸ್ಯ ನಾಗರಾಜ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಲಾಸ್ಯ ನಾಗರಾಜ್ ಅವರಿಗೆ ಫೋಟೋ ಶೂಟ್ ಕ್ರೇಜ್ ಹೆಚ್ಚೇ ಇದೆ. ಈ ಹಿಂದೆ ಲಾಸ್ಯ ನಾಗರಾಜ್ ಸಿಕ್ಕಾಪಟ್ಟೆ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿದ್ದರು. ಅವರ ಫೋಟೋವನ್ನು ತಮ್ಮ ಇನ್ಟಾಗ್ರಾಂ ಖಾತೆಯ ಶೇರ್ ಮಾಡಿಕೊಂಡು ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿದ್ದು ಇದೆ.
ಟ್ರೆಡಿಷನಲ್ (Traditional) ಹಾಗೂ ವೆಸ್ಟರ್ನ್ ಉಡುಗೆ (Western Dress) ಗಳಲ್ಲಿ ಸಖತ್ ಆಗಿ ಕಾಣುವ ನಟಿ ಲಾಸ್ಯ ನಾಗರಾಜ್ ಅವರ ಫೋಟೋಗಳು ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಗಮನ ಸೆಳೆಯುತ್ತಿದೆ. ಬೆಟ್ಟದ ತುದಿಯಲ್ಲಿ ನಿಂತು ಕೊಂಡು ಕಪ್ಪು ಬಣ್ಣದ ಉಡುಗೆ ತೊಟ್ಟು ವಿವಿಧ ಭಂಗಿಯಲ್ಲಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಪಡ್ಡೆ ಹೈಕಳ ನಿದ್ದೆ ಕೆಡಿಸುವಂತೆ ಮಾಡಿದೆ. ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟಿಜನ್ಸ್ ಪ್ರತಿಕ್ರಿಯೆ ನೀಡಿದ್ದು ಇಪ್ಪತ್ತೆರಡು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ (Banglore Mount Comerl College) ವಿದ್ಯಾಭ್ಯಾಸ ಮಾಡಿದ ಇವರು ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿಯು ಗುರುತಿಸಿಕೊಂಡಿದ್ದಾರೆ. ಮಿಸ್ ಕಾನ್ಫಿಡೆನ್ಸ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದ ನಟಿ ಲಾಸ್ಯ ನಾಗರಾಜ್ ಅವರು ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಕನ್ನಡ ಬಿಗ್ ಬಾಸ್ ಸೀಸನ್ 5 (Big Boss Sisan 5) ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಕನ್ನಡದಲ್ಲಿ ಅಸತೋಮ ಸದ್ಗಮಯ (Asatoma Sadgmaya), ಹೆಲೆನ್(Helen), ಆಪರೇಷನ್ ಯು (Operation You) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು, ಮಿಡ್ ನೈಟ್ ಚಿಲ್ಡ್ರನ್’ (Mid Night Childern) ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಎಲ್ಲರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ನಟಿ ಲಾಸ್ಯ ನಾಗರಾಜ್ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಿದ್ದರೂ ಫಿಟ್ ನೆಸ್ ಹೆಚ್ಚು ಮಹತ್ವ ನೀಡುತ್ತಾರೆ.
ಹೀಗಾಗಿ ದಿನನಿತ್ಯ ತಾವು ಸೇವಿಸುವ ಪ್ರತಿಯೊಂದು ಆಹಾರದ ಬಗ್ಗೆಯೂ ಕಾಳಜಿ ವಹಿಸುವ ಮೂಲಕ ತಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳುತ್ತಾರೆ. ಹದಿನೈದು ದಿನಕ್ಕೊಮ್ಮೆ ಡಯಟ್ ಬ್ರೇಕ್ ಮಾಡುತ್ತಾರೆಯಂತೆ. ಹೀಗಾಗಿ ತಮ್ಮ ಇಷ್ಟದ ಸ್ವೀಟ್ಸ್ ಹಾಗೂ ಚಾಟ್ಸ್ ಗಳನ್ನು ಇಷ್ಟಪಟ್ಟು ಸೇವಿಸುತ್ತಾರೆಯಂತೆ.
ಮನೆಯಲ್ಲಿ ಸಸ್ಯಾಹಾರಿಯಾಗಿದ್ದರೂ ಕೂಡ ಹೊರಗಡೆ ಹೋದಾಗ ನಾನ್ ವೆಜಿಟೇರಿಯನ್ ಅಂತೆ. ಆಹಾರದ ಜೊತೆಗೆ ಯೋಗ, ವರ್ಕ್ ಔಟ್ (Work Out) ಎಂದು ದೇಹವನ್ನು ದಂಡಿಸುತ್ತಾರೆ. ಸದ್ಯಕ್ಕೆ ನಟಿ ಲಾಸ್ಯ ನಾಗರಾಜ್ ಅವರು ಫೋಟೋಶೂಟ್ ಜೊತೆಗೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದು ಕೈ ತುಂಬಾ ಪ್ರಾಜೆಕ್ಟ್ ಗಳಿವೆ.