ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುವ ಹಬ್ಬವೇ ‘ರಕ್ಷಾ ಬಂಧನ’..ಇಂದು ಎಲ್ಲೆಡೆ ರಕ್ಷಾ ಬಂಧನ ಹಬ್ಬದ ಸಂಭ್ರಮವು ಮನೆ ಮಾಡಿದೆ. ಹೀಗಾಗಿ ಇಂದು (ಆಗಸ್ಟ್ 30) ದೇಶದ ಎಲ್ಲೆಡೆ ಅಕ್ಕ ತಂಗಿಯರು ಅಣ್ಣ ತಮ್ಮಂದಿಯರಿಗೆ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಚಂದನವನದ ಸೆಲೆಬ್ರಿಟಿಗಳು ಕೂಡ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ರಕ್ಷಾ ಬಂಧನ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಕೈ ತುಂಬಾ ರಾಖಿಗಳೇ ತುಂಬಿದೆ. ನಟ ದರ್ಶನ್ ಅವರಿಗೆ ನಟಿ ಸೋನಾಲಿ ಮಾಂಟೆರೊ (Sonali Mantero) ರಾಖಿ ಕಟ್ಟಿ ಸಿಹಿ ತಿನ್ನಿಸಿದ್ದಾರೆ. ನಟ ದರ್ಶನ್ ಹಾಗೂ ನಟಿ ಸೋನಾಲಿ ಮಾಂಟೆರೊ ಅವರ ರಾಖಿ ಕಟ್ಟಿದ ಸುಂದರ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರಾಖಿ ಹಬ್ಬದಂದು ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ನ್ ತಮ್ಮ ಅಭಿಮಾನಿಗಳಿಗೆ ಅಕ್ಕತಂಗಿಯಂದಿರಿಗೆ ದರ್ಶನ್ ರಕ್ಷಾ ಬಂಧನದ ಶುಭಾಶಯ (Wishes) ಗಳನ್ನು ತಿಳಿಸಿದ್ದಾರೆ. ರಕ್ಷಾ ಬಂಧನದ ಈ ಶುಭ ದಿನದಂದು ರಾಖಿ ಕಟ್ಟಿರುವ ಫೋಟೊವೊಂದನ್ನು ಶೇರ್ ಮಾಡಿದ್ದು, “ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು” ಎಂದು ಟ್ವೀಟ್ (Tweet) ಮಾಡಿದ್ದಾರೆ. ನಟ ದರ್ಶನ್ ಟ್ವೀಟ್‌ಗೆ ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ “ಕಾಲಾಯ ತಸ್ಮಯ್ ನಮಃ..” ಎಂದು ಟ್ವೀಟ್ ಮಾಡಿದ್ದರು. ಆದರೆ ನಟ ದರ್ಶನ್ ನ (ಆಗಸ್ಟ್ 28) ರಂದು ಏಕಾಂಗಿ ಚಿತ್ರದ ಹಾಡನ್ನು ಬರೆದು ಟ್ವೀಟ್ ಮಾಡಿದ್ದಾರೆ. ದರ್ಶನ್ ಅವರು ತಮ್ಮ ಸ್ಟೈಲಿಶ್ ಪೋಟೋ (Stylish Photo) ಹಾಕಿ ಅದರ ಮೇಲೆ ಏಕಾಂಗಿ ಚಿತ್ರದ ” ಬಿ ಅಲೋನ್ ಟು ಬಿ ಹ್ಯಾಪ್.. ಬಿ ಹ್ಯಾಪಿ ಟು ಬಿ ಅಲೋನ್.. ವಿಥ್ ಮೈ ಸೆಲೆಬ್ರೆಟೀಸ್” ಎಂದು ಬರೆದುಕೊಂಡಿದ್ದಾರೆ. ನನ್ನ ಸೆಲೆಬ್ರಿಟಿಗಳ ಜೊತೆ ಒಂಟಿಯಾಗಿರುವುದೇ ಉತ್ತಮ ಎನ್ನುವ ಅರ್ಥವನ್ನು ಈ ಟ್ವೀಟ್ ನೀಡುತ್ತಿದೆ. ಈ ಟ್ವೀಟ್ ನೋಡಿದ ಫ್ಯಾನ್ಸ್ ತಲೆ ಕೆಡಿಸಿಕೊಳ್ಳುವಂತಾಗಿದೆ.
ಸದ್ಯಕ್ಕೆ ದರ್ಶನ್ ಅವರು ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದು, ದರ್ಶನ್ ಅವರು ಕಾಟೇರ (Katera) ಸಿನಿಮಾದ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗ ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಟ ದರ್ಶನ್ ಹಾಗೂ ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್ನ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರಕ್ಕೆ ಕೆವಿಎನ್ (KVN) ಸಂಸ್ಥೆ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಕಾಟೇರ ಸಿನಿಮಾದ ಶೂಟಿಂಗ್ ಮುಗಿದ ಕೂಡಲೇ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.