ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಬೆಡಗಿ ರಶ್ಮಿಕಾ ಮಂದಣ್ಣರವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಕಿರಿಕ್ ಪಾರ್ಟಿ ಸಿನಿಮಾದ ಬಳಿಕ ಟಾಲಿವುಡ್ (Tollywood) ಹಾಗೂ ಬಾಲಿವುಡ್ (Bollywood) ನಲ್ಲಿ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗುವುದರ ಜೊತೆಗೆ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ, ಟ್ರೋಲ್ ಆಗುವುದೇ ಹೆಚ್ಚು ಎನ್ನಬಹುದು.
ಸೋಶಿಯಲ್ ಮೀಡಿಯಾದಲ್ಲಿಯು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಚೆಲುವೆ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ರಶ್ಮಿಕಾ ಮಂದಣ್ಣ ಶೇರ್ ಮಾಡಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಗಮನ ಸೆಳೆದು ಟ್ರೋಲ್ ಆಗುವುದೇ ಹೆಚ್ಚು. ಇದೀಗ ನಟಿ ರಶ್ಮಿಕಾ ಮಂದಣ್ಣನವರು ಅಡುಗೆ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ನಟಿ ಬಿಡುವು ಸಿಕ್ಕಾಗೆಲ್ಲಲ್ಲಾ ಅಡುಗೆ (Cooking) ಕೂಡ ಮಾಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡಬಹುದು. ನಟಿ ತನ್ನ ಬೆಳಗ್ಗಿನ ಉಪಹಾರವನ್ನು ಮಾಡಲು ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ಈ ಬ್ರೇಕ್ ಫಾಸ್ಟ್ ತನ್ನ ಸೀಕ್ರೆಟ್ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದು ಕೆಲವು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.ಅಷ್ಟೇ ಅಲ್ಲದೇ ನಟಿ ರಶ್ಮಿಕಾ ಮಂದಣ್ಣ ನಿನ್ನೆಯಷ್ಟೇ ಬೇಡದ ವಿಚಾರದಿಂದ ಸುದ್ದಿಯಾಗಿದ್ದಾರೆ.

ಹೌದು, ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ (Vijay Deavarakonda) ಡೇಟಿಂಗ್ ಮಾಡುತ್ತಿದ್ದಾರೆ. ಎಂಬ ಸುದ್ದಿ ಸಾಕಷ್ಟು ಸಮಯದಿಂದ ಹರಿದಾಡುತ್ತಿದೆ. ತೆಲುಗಿನ ‘ಗೀತಾ ಗೋವಿಂದಂ’ (Geetha Govindam) ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಟಿಸಿದ ಬಳಿಕ ಈ https://hindustanprime.in/business-money/know-todays-gold-price-across-india/ ಜೋಡಿಯ ನಡುವೆ ಏನೋ ಇದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಬಾರಿ ಸಿಕ್ಕಿ ಬಿದ್ದಿದ್ದಾರೆ.ಇತ್ತೀಚೆಗೆ ರಶ್ಮಿಕಾ ಏರ್‌ಪೋರ್ಟ್ (Airport) ನಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದು, ವಿಜಯ್ ದೇವರಕೊಂಡ ಅವರ ಶರ್ಟ್ ನನ್ನು ತಾನು ಧರಿಸಿದ್ದು ಈ ಮೂಲಕ ಸುದ್ದಿಯಾಗಿದ್ದಾರೆ.
ವಿಜಯ್ ದೇವರಕೊಂಡ ಈ ಹಿಂದೆ ಪರ್ಪಲ್ ಕಲರ್ ಶರ್ಟ್ ಅನ್ನು ಏರ್‌ಪೋರ್ಟ್‌ನಿಂದ ಬರುವಾಗ ತೊಟ್ಟಿದ್ದು, ಇದೀಗ ಆ ಶರ್ಟ್ ನನ್ನೇ ಕೊಡಗಿನ ಬೆಡಗಿ ತೊಟ್ಟಿದ್ದಾರೆ. ಇವರಿಬ್ಬರ ನಡುವೆ ಪ್ರೀತಿಯಿದೆ ಎನ್ನುವುದು ಪಕ್ಕಾ ಆಗಿದೆ.ನಟಿ ರಶ್ಮಿಕಾ ಮಂದಣ್ಣ ಈ ಶರ್ಟ್ ಧರಿಸಿರುವುದನ್ನು ನೋಡಿದ ನೆಟ್ಟಿಗರು, “ಇದು ದೇವರಕೊಂಡ ಅವರ ಅಂಗಿಯಲ್ಲವೇ?” ಎಂದು ಕೇಳಿದ್ದಾರೆ. ನಿಮ್ಮಿಬ್ಬರದ್ದು ನಿಜವಾದ ಪ್ರೀತಿ ಬಿಡಿ ಎಂದು ಕೆಲವರು ಹೇಳಿದರೆ.

ಇನ್ನು ಕೆಲವರು ನಿಮಗೆ ಬೇರೆ ಅಂಗಿ ಸಿಗಲಿಲ್ವಾ ಎಂದೂ ಕಾಮೆಂಟ್ ಮಾಡಿದ್ದಾರೆ. ಇತ್ತ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ರಣಬೀರ್ ಕಪೂರ್ (Ranabir Kapoor) ಜೊತೆಗೆ ಅನಿಮಲ್ (Animal) ಸಿನಿಮಾದಲ್ಲಿ ನಟಿಸಿದ್ದು ಇದೀಗ ಶೂಟಿಂಗ್ ಮುಗಿಸಿದ್ದಾರೆ. ಸದ್ಯಕ್ಕೆ ನಟಿಯು ತೆಲುಗಿನಲ್ಲಿ ಪುಷ್ಪ 2 (Pushpa 2) ಹಾಗೂ ಗೀತ ಗೋವಿಂದಂ 2 (Geetha Govindam 2) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.