7 Hot News
A Karnataka Times Affiliate Kannada News Portal

ಅಕ್ಷರಶಃ ಬಾಕ್ಸ್ ಆಫೀಸ್ ನಲ್ಲಿ ಸುಂಟರಗಾಳಿ ಎಬ್ಬಿಸಿದ ಕಾಟೇರ ಸಿನಿಮಾ ಒಂದೇ ಒಂದು ದಿನಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತೆ? ಆಸ್ಟ್ರೇಲಿಯಾದಿಂದ ಬಂದು ಕನ್ನಡ ಚಿತ್ರ ವೀಕ್ಷಿಸಿದ ಯುವತಿ ಹೇಳಿದ್ದೇನು ನೋಡಿ!!

advertisement

ಸ್ನೇಹಿತರೆ ಡಿಸೆಂಬರ್ 29, 2023 ಶುಕ್ರವಾರದಂದು ರಾಜ್ಯದಾದ್ಯಂತ ತೆರೆಕಂಡಂತಹ ದರ್ಶನ್ ಅವರ ಕಾಟೇರ ಸಿನಿಮಾ ಕೇವಲ ಕನ್ನಡ ಭಾಷೆ ಒಂದರಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ನಲ್ಲಿ ದುಳೆಬ್ಬಿಸುತ್ತಿದೆ. ಬಿಡುಗಡೆಗೊಂಡ ಮೊದಲ ದಿನವೇ ಅಭಿಮಾನಿ ದೇವರುಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮ ರಿಲೀಸ್ ಗು ಮುನ್ನವೇ ಇದ್ದಂತಹ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿ ಥಿಯೇಟರ್ ಮಾಲೀಕರು ಹೌಸ್ ಫುಲ್ ಎಂದು ಬೋರ್ಡ್ ಹಿಡಿದು ಹೊರ ನಿಲ್ಲುವಂತಾಗಿತ್ತು.

advertisement

ಸಿನಿಮಾ ನೋಡಿ ಬಂದಂತಹ ಪ್ರೇಕ್ಷಕರು ಕೂಡ ಅದ್ಭುತ ರೆಸ್ಪಾನ್ಸ್ ನೀಡುತ್ತಿದ್ದು, ವಿಮರ್ಷಿಕರಿಂದಲೂ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗ ನಾವಿವತ್ತು ಡಿ ಬಾಸ್ ದರ್ಶನ್ ಅವರ ಕಾಟೇರ ಸಿನಿಮಾ(Kateera Cinema) ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು ಕೋಟಿ? (First day collection) ಎಂಬ ಅಸಲಿ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

ಹೌದು ಗೆಳೆಯರೇ ಸಿನಿಮಾ ಬಿಡುಗಡೆಗು ಮುನ್ನ ಇಡೀ ತಂಡ ಅದ್ಬುತ ಪ್ರಚಾರದ ಕೆಲಸಗಳನ್ನು ನಡೆಸಿದರು, ಸಾಕಷ್ಟು ಸಂದರ್ಶನಗಳನ್ನು ನಡೆಸಿ ಸಿನಿಮಾದ ಕುರಿತು ಹಾಗೂ ಅಲ್ಲಿರುವಂತಹ ಮಾಹಿತಿಯ ಕುರಿತು ಮಾತನಾಡುತ್ತಾ ಸಿನಿಮಾದ ಹೈಪನ್ನು ಏರಿಸಿದ್ದರು. 11 ತಿಂಗಳ ಬಳಿಕ ಡಿ ಬಾಸ್ ದರ್ಶನ್(Darshan) ಅವರನ್ನು ಇದೇ ವರ್ಷ ಮತ್ತೊಮ್ಮೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಂತಹ ಅಭಿಮಾನಿಗಳಿಗೆ ಮನೋರಂಜನೆಯ ಮಹಾದೂಟವೇ ದೊರಕಿತ್ತು.

advertisement

ಹೀಗೆ ಡಿಸೆಂಬರ್ 28ನೇ ತಾರೀಕು ಮಧ್ಯರಾತ್ರಿ ಮೂರು ಗಂಟೆಯಿಂದಲೇ ಶೋಗಳು ಪ್ರದರ್ಶನ ಕಂಡಿದ್ದು ಅಷ್ಟು ಸರಿ ಹೊತ್ತಿನಲ್ಲಿ ಡಿ ಬಾಸ್ ಅಭಿಮಾನಿಗಳು ಚಿತ್ರಮಂದಿರಗಳಿಗೆ ಹೋಗಿ ತನ್ನ ಪ್ರೀತಿಯ ದಾಸನನ್ನು ಕಣ್ತುಂಬಿಕೊಂಡು ಬಂದಿದ್ದಾರೆ. ಇನ್ನು ಬಿಡುಗಡೆಯ ದಿನ ಅಂದರೆ ಶುಕ್ರವಾರ ಒಂದೇ ಒಂದು ಥಿಯೇಟರ್ನಲ್ಲಿ ಸುಮಾರು ಐದಾರು ಶೋಗಳನ್ನು ಹಾಕಲಾಗಿತ್ತು. ಎಲ್ಲಾ ಶೋಗಳು ಕೂಡ ಹೌಸ್ ಫುಲ್ (Housefull shows) ಆಗಿದ್ದು ಚಿತ್ರಮಂದಿರದ ಮಾಲೀಕರಿಗೆ ಡಿ ಬಾಸ್ ಸಿನಿಮಾಗಳೆಂದರೆ ಬಂಗಾರದ ಬೆಲೆ ಇದ್ದಂತೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.

advertisement

advertisement

ಇನ್ನು ವಿಶೇಷವಾಗಿ ಡಿ ಬಾಸ್ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಸಿನಿಮಾ ನೋಡಲು ಬಂದಂತಹ ಪ್ರೇಕ್ಷಕರಿಗೆ ಮುದ್ದೆ ನಾಟಿ ಕೋಳಿ ಸಾರು ಉಣಬಡಿಸಿದರೆ ಇನ್ನೂ ಹಲವು ಥಿಯೇಟರ್ ಗಳಲ್ಲಿ ಜನರಿಗೆ ಬಿರಿಯಾನಿ ಊಟವನ್ನು ಹಾಕಿಸಿ ಡಿ ಬಾಸ್ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಚೌಕ ಹಾಗೂ ರಾಬರ್ಟ್ ನಂತಹ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದಂತಹ ತರುಣ್ ಸುಧೀರ್ ಮತ್ತು ದರ್ಶನ್ ಈ ಚಿತ್ರದ ಮೂಲಕ ಮತ್ತೆ ಒಂದಾಗಿ ಕಾಟೇರ ಸಿನಿಮಾವನ್ನು ನೀಡಿದ್ದು ಅವರ ಅದ್ಭುತ ಆಕ್ಷನ್ ಕಟ್ ನಲ್ಲಿ ಸ್ಕ್ರೀನ್ ಪ್ಲೇ, ಡೈಲಾಗ್ ಎಲ್ಲವೂ ನೋಡುಗರ ಮನಸ್ಸನ್ನು ಗೆದ್ದಿದೆ.

advertisement

ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣ ಈ ಚಿತ್ರಕ್ಕೆ ಇದ್ದರೆ, ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಅವರನ್ನು ಡಿ ಬಾಸ್ ಅವರ ಕಾಟೇರ ಸಿನಿಮಾ(Kateera Cinema) ದ ಮೂಲಕ ಇಂಡಸ್ಟ್ರಿಗೆ ಪರಿಚಯಿಸಲಾಗಿದೆ. ಮೊದಲ ಸಿನಿಮಾದಲ್ಲಿಯೇ ತಮ್ಮ ಮನೋಜ್ಞ ಅಭಿನಯದ ಮೂಲಕ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ರಾಧನ ಯಶಸ್ವಿಯಾಗಿದ್ದಾರೆ.

advertisement

advertisement

ಅಧಿಕೃತವಾಗಿ ಸಿನಿಮಾ ತಂಡ ಹಂಚಿಕೊಂಡಿರುವಂತಹ ಮಾಹಿತಿಯ ಪ್ರಕಾರ ಕಾಟೇರ ಸಿನಿಮವು ಮೊದಲ ದಿನ ಕರ್ನಾಟಕದಾದ್ಯಂತ ಬರೋಬ್ಬರಿ 19.79 ಕೋಟಿ ಹಣವನ್ನು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್(box office collection) ಮಾಡುವ ಮೂಲಕ ಇದ್ದಂತಹ ಸಾಕಷ್ಟು ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದೆ. ಜೊತೆಗೆ ಸಿನಿಮಾ ತಂಡ ಕಾಟೇರ ಸಿನಿಮಾವನ್ನು ಬೇರೆ ಭಾಷೆಗೂ ಡಬ್ ಮಾಡುವ ನಿರೀಕ್ಷೆಯಲ್ಲಿದ್ದು ಇದಕ್ಕೆ ಡಿ ಬಾಸ್ ದರ್ಶನ್(Darshan) ಒಪ್ಪಿಗೆ ನೀಡಬೇಕಿದೆ.

advertisement

Leave A Reply

Your email address will not be published.