ತೆಲಂಗಾಣದ ಸಿಖಾಂದರಬಾದ್ನಲ್ಲಿ ಜನಿಸಿದಂತಹ ನಟಿ ನಂದಿನಿ ರೈ (Nandini Rai) ಹೈದರಾಬಾದ್ನಲ್ಲಿ ತಮ್ಮ ಸ್ಕೂಲಿಂಗ್ ಶಿಕ್ಷಣವನ್ನು ಮುಗಿಸಿ 2೦೦5ರಲ್ಲಿ ತಮ್ಮ ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಲಂಡನ್ಗೆ ಹಾರಿದರು. ವಿದ್ಯಾಭ್ಯಾಸ ಮಾಡುವಂತಹ ಸಂದರ್ಭದಲ್ಲಿಯೇ ಫ್ಯಾಷನ್ ಹಾಗೂ ಮಾಡಲಿಂಗ್ ಲೋಕದತ್ತ ಮನಸ್ಸು ವಾಲಿದ ಕಾರಣ ಎಂಬಿಎ ಪದವಿ (MBA degree) ಮುಗಿದ ನಂತರ ಸಾಕಷ್ಟು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಮಾಡಲ್ಲಾಗಿ ಗುರುತಿಸಿಕೊಂಡರು.
ಆನಂತರ ಮಿಸ್ ಹೈದ್ರಾಬಾದ್ ಕಿರೀಟವನ್ನು 2008ರ ಕಿರೀಟವನ್ನು ತಮ್ಮ ಮುಡಿಗೆರಿಸಿಕೊಂಡ ನಂದಿನಿ ರೈ (Nandini Rai) ಅವರು ಹೀಗೆ ಮಿಸ್ ಆಂಧ್ರಪ್ರದೇಶ, ಮಿಸ್ ಬ್ಯೂಟಿಫುಲ್ ಐ ಎಫ್ ಎ ಪಿ ಮುಂತಾದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಅದ್ಭುತ ಮೈ ಮಾಟ ಹಾಗೂ ಬಾಡಿ ಲ್ಯಾಂಗ್ವೇಜ್ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡು ಕಾರ್ಯಕ್ರಮದ ವಿಜೇತರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಂತಹ ರೂಪದರ್ಶಿ (model) ಕಮ್ ನಟಿ. ಹೌದು ಗೆಳೆಯರೇ ಹಿಂದಿಯ ಲಾಗ್ ಇನ್ (Login) ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಂದಿನಿ ಆನಂತರ ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯ ಹಾಗೂ ಮಾಲಕವೇ ಮೈ ಮಾಟದ ಮೂಲಕ ಇಂದು ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಖುಷಿಖುಷಿಯಾಗಿ (Kushi Kushiyagi) ಎಂಬ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ತೆರೆ ಹಂಚಿಕೊಂಡ ನಂದಿನಿ ಅವರು ಬಿಗ್ ಬಾಸ್ ಸೀಸನ್ ಎರಡರ ಸ್ಪರ್ಧೆಯಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅದ್ಭುತ ವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಈ ನಟಿ 5೦೦ ಸಾವಿರಕ್ಕೂ ಅಧಿಕ ಫಾಲೋವರ್ಸ್ಗಳನ್ನು ತಮ್ಮ instagram ಖಾತೆಯಲ್ಲಿ ಹೊಂದಿದ್ದು ಪ್ರತಿನಿತ್ಯ ಒಂದಲ್ಲ ಒಂದು ವಿಭಿನ್ನ ಪೋಸ್ಟ್ಗಳನ್ನು ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.
View this post on Instagram
ಹೀಗಿರುವಾಗ ಕಪ್ಪು ಬಣ್ಣದ ಬಿಕಿನಿ ಹಾಗೂ ಟೋನ್ ಜೀನ್ಸ್ ಪ್ಯಾಂಟ್ ಧರಿಸಿ ಫೋಟೋ ಪೋಸ್ ನೀಡಿದ್ದು ಎದ್ದು ವರ್ಕೌಟ್ ಮಾಡಿ ಹಾಟ್ ಆಗಿ ಕಾಣಿ ಎಂಬ ಕ್ಯಾಪ್ಶನ್ ಬರೆದು ತಮ್ಮ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳಿಗೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿದ್ದು ಅದೆಷ್ಟೋ ಅಭಿಮಾನಿಗಳು ನಟಿ ನಂದಿನಿ ರೈ (Nandini Rai) ಅವರ ಅಂದದ ಮೈ ಮಾಟಕ್ಕೆ ಮನಸ್ಸೋತು ಹೋಗಿದ್ದಾರೆ.