ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೇ ನಟಿಯರು ಬಂದು ಹೋಗಿದ್ರು ಕೆಲವರು ಮಾತ್ರ ಸಿನಿಮಾ ರಂಗದಲ್ಲಿ ಹಾಗೂ ಜನರ ಮನಸ್ಸಿನಲ್ಲಿ ಪ್ರಮುಖ ಸ್ಥಾನವನ್ನ ಪಡೆದುಕೊಳ್ಳುತ್ತಾರೆ. ಅಂತಹ ನಟಿಯರಲ್ಲಿ ಮುಂಚೂಣಿಯಲ್ಲಿರುವುದು ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ರಚಿತಾ ರಾಮ್. ಹೌದು ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ರಚಿತಾ ರಾಮ್ ಕನ್ನಡಿಗರ ಅಚ್ಚು ಮೆಚ್ಚಿನ ನಟಿ ಅವರ ಆ ಮುಗ್ಧ ನಗು, ನಗುವಾಗ ಕೆನ್ನೆಯಲ್ಲಿ ಮೂಡುವ ಗುಳಿಯನ್ನು ನೋಡೋಕೆ ಜನರು ಮುಗಿಬೀಳುತ್ತಾರೆ.
ಹೌದು, ನೋಡೋದಕ್ಕೆ ಅತ್ಯಂತ ಸುಂದರವಾಗಿರುವ ನಟಿ ರಚಿತಾ ರಾಮ್ ಅತ್ಯುತ್ತಮ ಅಭಿನೇತ್ರಿ ಕೂಡ ಹೌದು. ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ರಚಿತಾ ರಾಮ್ ಅವರು ನಂತರ ಸಿನಿಮಾದಲ್ಲಿ ಅವಕಾಶವನ್ನು ಪಡೆದುಕೊಂಡರು ಒಮ್ಮೆ ಸಿನಿಮಾದಲ್ಲಿ ಅಭಿನಯಿಸಿದ್ದೇ ತಡ ಅವರ ಅಭಿನಯಕ್ಕೆ ಅವರ ವೈಯಾರಕ್ಕೆ ಜನ ಸೋತು ಹೋದರು. ಹಾಗಾಗಿ ರಚಿತಾ ರಾಮ್ ಅವರಿಗೆ ಮತ್ತಷ್ಟು ಮಗದಷ್ಟು ಅವಕಾಶಗಳು ಹುಡುಕಿಕೊಂಡು ಬಂದವು.
ರಚಿತಾ ರಾಮ್ ಅವರು ದರ್ಶನ್ ಅವರ ಜೊತೆಗೆ ಮೊದಲ ಸಿನಿಮಾದಲ್ಲಿ ಅಭಿನಯಿಸಿದ್ರು. ಆ ಸಿನಿಮಾದ ಹಿಟ್ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದುಕೊಂಡ ರಚಿತಾ ರಾಮ್ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಉಪೇಂದ್ರ, ಕಿಚ್ಚ ಸುದೀಪ್, ದರ್ಶನ್ ಮೊದಲಾದ ನಟರ ಜೊತೆ ತೆರೆಹಂಚಿಕೊಂಡ ಖ್ಯಾತಿ ಅವರದ್ದು.
ರಚಿತರಾಮ್ ಎನ್ನುವ ಸಿಂಪಲ್ ಸುಂದರಿ ಅಂದ್ರೆ ಕನ್ನಡಿಗರಿಗೆ ಅಚ್ಚು ಮೆಚ್ಚು. ಅವರ ಯಾವ ಸಿನಿಮಾ ತೆರೆ ಕಂಡರೂ ಅದನ್ನ ಮುಗಿಬಿದ್ದು ಜನ ನೋಡುತ್ತಾರೆ. ಇನ್ನು ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ರಚಿತಾ ರಾಮ್ ಅವರು ಇತ್ತೀಚಿಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕೂಡ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಅಭಿನಯಿಸುವುದರ ಜೊತೆ ಜೊತೆಗೆ ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಕೂಡ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.
ರಚಿತರಾಮ್ ಹಾಗೂ ಡಿ ಬಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬರ್ತಾ ಇರೋ ಕ್ರಾಂತಿ ಸಿನಿಮಾದ ಬಗ್ಗೆ ಜನರಿಗೆ ಅತಿ ಹೆಚ್ಚು ನಿರೀಕ್ಷೆ ಇದೆ. ದರ್ಶನ್ ಅವರ ಸಿನಿಮಾ ಅಂದ್ರೆ ಕನ್ನಡ ನಾಡಿನಲ್ಲಿ ಮೊದಲೇ ಹೈಪ್ ಕ್ರಿಯೇಟ್ ಆಗುತ್ತೆ. ಅದರಲ್ಲೂ ಕ್ರಾಂತಿ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಹೊರ ಬಿದ್ದಿವೆ. ಈ ಸಿನಿಮಾದ ಟೀಸರ್ ನೋಡಿ ಜನ ಫಿದಾ ಆಗಿದ್ದಾರೆ. ಹಾಗಾಗಿ ಕ್ರಾಂತಿ ಸಿನಿಮಾದ ಬಿಡುಗಡೆಗೆ ಸಿಮಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ನಿನ್ನೆಯಷ್ಟೇ ತಮ್ಮ ಬರ್ತಡೇ ಆಚರಿಸಿಕೊಂಡ ರಚಿತಾ ರಾಮ್ ಅವರು ಕ್ರಾಂತಿ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ. ಗುಳಿಕೆನ್ನೆಯ ಚೆಲುವೆ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಬೇರೆ ಬೇರೆ ಸ್ಥಳದಿಂದ ಬಂದು ಕೇಕ್ ಕಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ರಚಿತಾ ರಾಮ್ ಕೂಡ ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಕ್ರಾಂತಿ ಸಿನಿಮಾದ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿ ಕೊಟ್ಟ ರಚಿತಾ ರಾಮ್ ಕ್ರಾಂತಿ ಸಿನಿಮಾದ ಶೂಟಿಂಗ್ ಸಂಪೂರ್ಣ ಕಂಪ್ಲೀಟ್ ಆಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಷ್ಟೇ ಬಾಕಿ ಇರೋದು. ಇನ್ನು ಹೆಚ್ಚಿನ ಅಪ್ಡೇಟ್ ಗಳನ್ನ ಸದ್ಯದಲ್ಲೇ ನಿಮಗೆ ನೀಡುತ್ತೇವೆ ಅಂತ ತಿಳಿಸಿದ್ದಾರೆ. ರಚಿತಾರಾಮ್ ಹೇಳಿರುವ ಈ ಸುದ್ದಿಯನ್ನು ಕೇಳಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡಿಂಪಲ್ ಕ್ವೀನ್ ಗೆ ಹುಟ್ಟು ಹಬ್ಬದ ಶುಭಾಶಯಗಳು ಕೂಡ ಅಭಿಮಾನಿಗಳು ತಿಳಿಸಿದ್ದಾರೆ.