7 Hot News
A Karnataka Times Affiliate Kannada News Portal

ಮುದ್ದು ಮಗುವಿನೊಂದಿಗೆ ಕಿರುತೆರೆ ನಟಿ ರಾಧಿಕಾ ರಾವ್! ಮುದ್ದಾದ ಕ್ಷಣಗಳು ನೋಡಿ!!

advertisement

ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ (Mangalore Hudgi Hubli Hudga) ಎಂಬ ಧಾರವಾಹಿಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯಗೊಂಡಂತಹ ನಟಿ ರಾಧಿಕಾ ರಾವ್(Radhika Rao) ಅವರು ನಂತರ ಸಾಕಷ್ಟು ಸೀರಿಯಲ್ ಗಳಲ್ಲಿ ನಾಯಕ ನಟಿಯಾಗಿ, ಸಹ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನೆಮಗಳಾಗಿ ಹೋದರು. ಹೌದು ಸ್ನೇಹಿತರೆ, ರಾಧಾ ಕಲ್ಯಾಣ ಸೀರಿಯಲ್ ಹಿಟ್ ಆದ ಬಳಿಕ ಸಾಕಷ್ಟು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡ ರಾಧಿಕಾ ಅವರು ಕೇವಲ ಕನ್ನಡ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗದೆ.

advertisement

ತುಳು ಭಾಷೆಯ ಚಿತ್ರರಂಗದಲ್ಲಿಯೂ ಕೆಲಸ ಮಾಡಿದರು. ನಟ ಸೃಜನ್ ಲೋಕೇಶ್ ಅವರ ಎಲ್ಲಿದೆ ಇಲ್ಲಿ ತನಕ ಸಿನಿಮಾದಲ್ಲಿಯೂ ಸಹ ನಟಿಯಾಗಿ ಅಭಿನಯಿಸಿ ಬೆಳ್ಳಿ ತೆರೆಯಲ್ಲೂ ಕಮಲ್ ಮಾಡಿದ್ದಾರೆ. ಇನ್ನು 2020ರಲ್ಲಿ ತಮ್ಮ ಬಹುಕಾಲದ ಗೆಳೆಯ ಆಕರ್ಷ ಭಟ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

advertisement

ಹೌದು ಗೆಳೆಯರೇ ಹಲವು ವರ್ಷಗಳಿಂದ ರಾಧಿಕಾ ರಾವ್(Radhika Rao) ಮತ್ತು ಆಕರ್ಷ ಭಟ್ ಇಬ್ಬರು ಪ್ರೀತಿಸಿ ಇವರ ಪ್ರೀತಿಗೆ ಮನೆಯವರೆಲ್ಲರ ಸಮ್ಮತಿ ದೊರೆತ ನಂತರ ಬಹಳ ಅದ್ದೂರಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಹೊಸ ಬದುಕಿಗೆ ಪಾದರ್ಪಣೆ ಮಾಡುತ್ತಾರೆ. ಸದ್ಯ ಈ ದಂಪತಿಗಳಿಗೆ ಕಳೆದ ಕೆಲವು ತಿಂಗಳ ಹಿಂದೆ ಮುದ್ದಾದ ಗಂಡು ಮಗು ಜನಿಸಿದ್ದು, ಮನೆಗೆ ಹೊಸ ಅತಿಥಿಯ ಆಗಮನದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ಪಟ್ಟರು.

advertisement

advertisement

ಆಗಾಗ ತಮ ಮುದ್ದು ಮಗನ ಜೊತೆಗೆ ಸುಂದರವಾದ ಫೋಟೋ ಶೂಟ್ಗಳನ್ನು ಮಾಡಿಸಿ ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುವ ರಾಧಿಕಾ ಅವರು ಕಳೆದ ಕೆಲವು ದಿನಗಳ ಹಿಂದೆ ಬಹಳ ಅದ್ದೂರಿಯಾಗಿ ಮಗನ ನಾಮಕರಣ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಹೌದು ಸ್ನೇಹಿತರೆ ತಾಯಿ ಮಗನಿಬ್ಬರು ಕಂದು ಬಣ್ಣದ ಉಡುಪನ್ನು ಧರಿಸಿ ಅಚ್ಚ ಹಸಿರಿನಿಂದ ಕೂಡಿರುವ ಗಾರ್ಡನ್ನಲ್ಲಿ ಕುಳಿತು ವಿಶೇಷವಾದ ಫೋಟೋಶೂಟ್ ಮಾಡಿಸಿ ಅದನ್ನು ತಮ್ಮ instagram ನಲ್ಲಿ ಹಂಚಿಕೊಂಡು ಮಗನ ಹೆಸರನ್ನು ರಾಧಿಕಾ ರಿವೇಲ್ ಮಾಡಿದ್ದಾರೆ. ಮಗನಿಗೆ ರಾಧಿಕಾ ರಾವ್ ಮತ್ತು ಆಕರ್ಷ ಭಟ್(Radhika Rao and Akarsh Bhatt) ದಂಪತಿಗಳು ಚರ್ಚಿಸಿ ತೀರ್ಮಾನ ಮಾಡಿ ಅಗಸ್ತ್ಯ (Agasthya) ಎಂಬ ಟ್ರೆಂಡಿಂಗ್ ಹೆಸರನ್ನು ಇಟ್ಟಿದ್ದಾರೆ.

advertisement

Leave A Reply

Your email address will not be published.