7 Hot News
A Karnataka Times Affiliate Kannada News Portal

ಸಿಲ್ಲಿ ಕಾರಣ ಕೊಟ್ಟು ಕ್ಯಾಪ್ಟನ್ಸಿ ಟಾಸ್ಕ್ ಇಂದ ಕಾರ್ತಿಕ್ ಮತ್ತು ನಮ್ರತಾ ಅವರನ್ನ ಹೊರಗಿಟ್ಟ ಡ್ರೋನ್ ಪ್ರತಾಪ್! ಅವನನ್ನು ಹೊರಗೆ ದಬ್ಬಿ ಡ್ರೋನ್ ಅಲ್ಲ ಕಾಗೆ ಅವನು ಎಂದ ಪ್ರೇಕ್ಷಕರು!!

advertisement

ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಡ್ರೋನ್ ಪ್ರತಾಪ್(Drone Prathap) ದೊಡ್ಮನೆಯನ್ನು ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಯಿತು. ಡ್ರೋನ್ ಕಂಡುಹಿಡಿದು ಬಹುದೊಡ್ಡ ಸಾಧನೆ ಮಾಡಿದ್ದೇನೆ ನಾನು ಓರ್ವ ಯಂಗ್ ಸೈಂಟಿಸ್ಟ್ ಎನ್ನುತ್ತಾ ಜನರಿಗೆ ವಂಚನೆ ಮಾಡಿದ ಡ್ರೋನ್ ಪ್ರತಾಪ್(Drone Prathap) ಬಿಗ್ ಬಾಸ್ ಮನೆಗೆ ಹೋಗುವುದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯವಾಯಿತ್ತು.

advertisement

ಆದರೂ ಕೂಡ ಅಸಮರ್ತರಾಗಿ ದೊಡ್ಮನೆಯನ್ನು ಪ್ರವೇಶ ಮಾಡಿದಂತಹ ಡ್ರೋನ್ ಪ್ರತಾಪ್ ಇಂದು ಕನ್ನಡಿಗರ ಫೆವರೇಟ್ ಕಂಟೆಸ್ಟೆಂಟ್(Favorite contestant) ಆಗಿ ಹೋಗಿದ್ದಾರೆ. ಹೌದು ಗೆಳೆಯರೇ ಆರಂಭಿಕ ದಿನಗಳಲ್ಲಿ ಸೈಲೆಂಟಾಗಿ ಇದ್ದು ಇತರ ಸ್ಪರ್ಧಿಗಳ ಮನೋಭಾವವನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಡ್ರೋನ್ ಪ್ರತಾಪ್ ಆ ಅವಧಿಯಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದರು. ಅದ್ಭುತ ಆಟಗಾರಿಕೆ ಹಾಗೂ ತಂತ್ರಗಾರಿಕೆಯಿಂದ ಬಿಗ್ ಬಾಸ್ನ(Big boss) ಫಿನಾಲೆ ಸ್ಪರ್ಧಿಗಳಲ್ಲಿ ಒಬ್ಬರಾಗಬಹುದಾದ ಎಲ್ಲಾ ಸಾಮರ್ಥ್ಯವನ್ನು ಗಳಿಸಿಕೊಂಡಿದ್ದಾರೆ.

advertisement

ಅದರಂತೆ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಮನೆಯನ್ನು ಎರಡು ಗುಂಪುಗಳಾಗಿ ವಿಂಗಡಿಸಿರುವಂತಹ ಬಿಗ್ ಬಾಸ್ ಒಂದು ತಂಡಕ್ಕೆ ಡ್ರೋನ್ ಪ್ರತಾಪ್ ಹಾಗೂ ಮತ್ತೊಂದು ತಂಡಕ್ಕೆ ಮೈಕಲ್(Michael) ಅವರನ್ನು ನಾಯಕನಾಗಿ ನೇಮಿಸಿದ್ದಾರೆ. ತಮ್ಮ ತಮ್ಮ ತಂಡಕ್ಕೆ ಯಾವ ಯಾವ ಸ್ಪರ್ದಿಗಳು ಬೇಕು ಎಂಬುದನ್ನು ಅವರಿಗೆ ಆಯ್ಕೆ ಮಾಡಿಕೊಳ್ಳುವಂತಹ ಅವಕಾಶವನ್ನು ಬಿಗ್ ಬಾಸ್ ಕಲ್ಪಿಸಿ ಕೊಟ್ಟರು.

advertisement

advertisement

ಅದರಂತೆ ಪ್ರತಾಪ್ ತಮ್ಮ ಗುಂಪಿಗೆ ಈಗಷ್ಟೇ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಂದಿರುವ ಪವಿ ಪೂವಪ್ಪ, ವರ್ತೂರು ಸಂತೋಷ್, ನಮ್ರತ ಗೌಡ, ಸಿರಿ ಹಾಗೂ ತುಕಾಲಿ ಸಂತೋಷ್‌ ಅವರನ್ನು ಆಯ್ಕೆ ಮಾಡಿಕೊಂಡರು. ಇನ್ನುಳಿದ ಸ್ಪರ್ಧಿಗಳೆಲ್ಲರೂ ಮೈಕಲ್ ಅವರ ತಂಡ ಸೇರಿದ್ದಾರೆ. ಅದರಂತೆ ಬಿಗ್ ಬಾಸ್ ಈ ವಾರ ಟಾಸ್ಕ್ ಗೆದ್ದು, ಕ್ಯಾಪ್ಟನ್ ಆಗುವ ಸ್ಪರ್ಧಿಗೆ ವಿಶೇಷ ಅವಕಾಶ ಬಂದರು ನೀಡುವುದಾಗಿ ತಿಳಿಸಿದ್ದರು.

advertisement

ಹೀಗೆ ಆಟದಲ್ಲಿ ಮೈಕಲ್ ತಂಡ ಗೆಲುವು ಸಾಧಿಸಿದರೆ ಡ್ರೋನ್ ಪ್ರತಾಪ್(Drone Prathap) ತಂಡ ಸೋಲುಂಡ ಕಾರಣ ಒಬ್ಬರನ್ನ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಡುವ ಶಿಕ್ಷೆಯನ್ನು ನೀಡಿದರು. ತಂಡದವರೆಲ್ಲ ನಿರ್ಧಾರ ಮಾಡಿ ಈಗಷ್ಟೇ ಮನೆಗೆ ಬಂದಿರುವ ಪವಿ ಪೂವಪ್ಪ(Pavi Poovappa) ಅವರನ್ನು ಹೊರಗಿಡಲು ತಂಡದ ಕ್ಯಾಪ್ಟನ್ ಆದ ಡ್ರೋನ್ ಪ್ರತಾಪ್ ಅವರಿಗೆ ತಿಳಿಸುತ್ತಾರೆ. ಆದರೆ ಡ್ರೋನ್ ಪ್ರತಾಪ್ ಅವರು ಉದ್ದೇಶಪೂರ್ವಕವಾಗಿ ನಮ್ರತಾ ಗೌಡ ಅವರನ್ನು ಆಚೆ ಹಾಕಿದರು.

advertisement

Drone Prathap Karthik Namratha
Drone Prathap Karthik Namratha

advertisement

ಇದರಿಂದ ಬೇಸರಗೊಂಡಂತಹ ನಮ್ರತಾ ‘ನಾನು ಆಡಬೇಕಿತ್ತು, ನನಗೆ ಹೇಳಬೇಕಿತ್ತು ನನಗೆ ನೀವು ಇಷ್ಟ ಇಲ್ಲ ಅದಕ್ಕೆ ನಾನು ನಿಮ್ಮನ್ನು ನನ್ನ ಟೀಮ್ಗೆ ಸೇರಿಸಿಕೊಂಡು ಹೊಡೆದಾಕ್ದೆ ಅಂತ. ಅದನ್ನು ಬಿಟ್ಟು ನಿಮ್ಮೊಳಗೆ ಒಂದು ಟ್ಯಾಲೆಂಟ್ ಇದೆ ಅದನ್ನು ಹೊರಗೆ ತರುತ್ತೇನೆ, ನಿಮಗೆ ಕಿಚ್ಚನ ಚಪ್ಪಾಳೆ ಅಂತ ಪ್ರಾಮಿಸ್ ಮಾಡಿದ್ಯಾಕೆ ಎಂದು ನಮ್ರತ ಗೌಡ(Namratha Gowda), ಪ್ರತಾಪ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

advertisement

Leave A Reply

Your email address will not be published.