ಸ್ನೇಹಿತರೆ, ಕಿರುತೆರೆ ಸೀರಿಯಲ್ ಮೂಲಕ ತಮ್ಮದೇ ಆದ ವಿಶೇಷ ಅಭಿನಯ ಚಾಪನ್ನು ಮೂಡಿಸುತ್ತಾ ಮನೆ ಮಾತಾಗಿರುವಂತಹ ನಟಿ ವೈಷ್ಣವಿ ಗೌಡ(Vaishnavi Gowda) ಅಳಿಯಾಸ್ ಸನ್ನಿಧಿ ಈಗ ಸೀತಾ ಆಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾರಾಮ(Seetharama) ಎಂಬ ಧಾರವಾಹಿಯ ಮೂಲಕ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಹೌದು ಗೆಳೆಯರೇ ಸೀತ ರಾಮ ಹಾಗೂ ಸಿಹಿಯ ಕಾಂಬಿನೇಷನ್ ತೆರೆಯ ಮೇಲೆ ಅದ್ಭುತವಾಗಿ ವರ್ಕ್ ಆಗುತ್ತಿದ್ದು.
ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಅಭಿನಯ ನೋಡುವ ಸಲುವಾಗಿ ಸಂಜೆಯಾದರೆ ಟಿವಿ ಮುಂದೆ ರಿಮೋಟ್ ಹಿಡಿದು ಕೂರುವ ಪ್ರೇಕ್ಷಕರ ಬಳಗ ಸೃಷ್ಟಿಯಾಗಿದೆ. ಹೀಗೆ ಧಾರಾವಾಹಿ ಪ್ರಸಾರವಾದ ಮೊದಲ ದಿನದಿಂದ ಹಿಡಿದು ಇಂದಿನವರೆಗೂ ಅಷ್ಟೇ ಮಟ್ಟದ ಕ್ರೇಜ್ ಹಾಗೂ ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಮುಂದಿರುವ ಸೀತಾರಾಮ ಸೀರಿಯಲ್ ಯಶಸ್ವಿಯಾಗಿ ಮೂಡಿ ಬರುತ್ತಿದ್ದು.
ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ ವೈಷ್ಣವಿ ಗೌಡ(Vaishnavi Gowda) ಆಗಾಗ ತಮ್ಮ ಹಾಗೂ ಸಿಹಿಯ(Sihi) ಮುದ್ದಾದ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಹೀಗಿರುವಾಗ ನಟಿ ವೈಷ್ಣವಿ ರಜನಿಕಾಂತ್, ರಮ್ಯಾ ಕೃಷ್ಣ, ಶಿವರಾಜ್ ಕುಮಾರ್ ಹಾಗೂ ತಮ್ಮನ್ನ ಭಾಟಿಯಾರಂತಹ ದಿಗ್ಗಜ ನಟರುಗಳ ಕಾಂಬಿನೇಷನ್ನಲ್ಲಿ ತಯಾರಾಗಿರುವಂತಹ ಜೈಲರ್(Jailer) ಸಿನಿಮಾದ ಕಾವಲಾ ಹಾಡಿಗೆ ಬಹಳ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕಿದ್ದು, ಈ ವಿಡಿಯೋ ಕಂಡು ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹೌದು ಗೆಳೆಯರೇ ಕಪ್ಪು ಬಣ್ಣದ ಕ್ರಾಪ್ ಟಾಪ್ ಹಾಗೂ ಸ್ಕರ್ಟ್ ಧರಿಸಿ ಫ್ರೀ ಹೇರ್ ಬಿಟ್ಟು ಬಹಳಾನೆ ಬೋಲ್ಡ್ ಆಗಿ ನಟಿ ವೈಷ್ಣವಿ ಗೌಡ ಕಾವಲಾ (Kavala) ಹಾಡಿಗೆ ಸೊಂಟ ಬಳಕಿಸಿದ್ದು ವೈಷ್ಣವಿ ಅವರ ಈ ಅಂದ ಚಂದ ಹಾಗೂ ಎನರ್ಜಿಗೆ ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
View this post on Instagram
ಇನ್ನು ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ದಿನಗಳಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ವ್ಯೂಸ್ ದೊರಕಿದ್ದು, ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾಗಳಂತಹ ಪ್ಲಾಟ್ಫಾರ್ಮ್ಗಳಲ್ಲಿಯೂ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿರುವ ನಟಿ ವೈಷ್ಣವಿ ಗೌಡ(Vaishnavi Gowda) ಅವರ ಅಭಿಮಾನಿಗಳ ಸಂಖ್ಯೆ ದಿನೇ ದಿನ ಹೆಚ್ಚಾಗುತ್ತದೆ.